ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್ಲೆಂಡ್: ಸ್ಥಿರತೆ ಕಾಪಾಡಲು ದೊರೆ ಮನವಿ

Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬ್ಯಾಂಕಾಕ್‌ (ಪಿಟಿಐ): ಸರ್ಕಾರಿ ವಿರೋಧಿ ಪ್ರತಿಭಟನೆ ಮಧ್ಯೆಯೇ ಗುರುವಾರ ತಮ್ಮ 86ನೇ ಹುಟ್ಟುಹಬ್ಬ ಆಚರಿಸಿಕೊಂಡ ಥಾಯ್ಲೆಂಡ್ ದೊರೆ ಭೂಮಿಬಲ್ ಅದುಲŀದೇಜ್‌, ಸ್ಥಿರತೆ ಮತ್ತು ಸುರಕ್ಷತೆಗಾಗಿ ಶ್ರಮಿಸುವಂತೆ ದೇಶದ ಜನತೆಗೆ ಕರೆ ನೀಡಿದ್ದಾರೆ. ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಜನ­ರನ್ನುದ್ದೇಶಿಸಿ ಮಾತನಾಡಿದ ಅದುಲ್ಯದೇಜ್‌, ‘ಎಲ್ಲರೂ ಒಟ್ಟಾಗಿ ದುಡಿ­­ಯುತ್ತಿರುವುದರಿಂದ ದೇಶ ಇಲ್ಲಿ­ಯವರೆಗೂ ಶಾಂತಿಯುತ­ವಾಗಿದೆ’ ಎಂದು ಹೇಳಿದರು.

ಪ್ರಧಾನಿ ಯಿಂಗ್ಲುಕ್ ಶಿನವಾತ್ರ ರಾಜೀನಾಮೆಗೆ ಆಗ್ರಹಿಸಿ ದೇಶದಲ್ಲಿ ತಾರಕ್ಕಕ್ಕೇರಿರುವ ಸರ್ಕಾರಿ ವಿರೋಧಿ ಪ್ರತಿಭಟನೆ ಕುರಿತು ತಮ್ಮ ಭಾಷಣದಲ್ಲಿ ನೇರವಾಗಿ ಏನನ್ನೂ ಪ್ರಸ್ತಾಪಿಸದ ದೊರೆ, ‘ದೇಶದ ಸ್ಥಿರತೆ ಮತ್ತು ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ಅರಿತು ಕಾರ್ಯಪ್ರವೃತ್ತರಾಗಬೇಕು’ ಎಂದರು.

ಯಿಂಗ್ಲುಕ್ ಅವರ ರಾಜೀನಾಮೆಗೆ ಆಗ್ರಹಿಸಿ ಬ್ಯಾಂಕಾಕ್‌­ನಲ್ಲಿ ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಯುತ್ತಿದೆ.  ಈ ವೇಳೆ, ಭದ್ರತಾ ಪಡೆ ಮತ್ತು ಹೋರಾಟಗಾರರ ಮಧ್ಯೆ ನಡೆದ ಘರ್ಷಣೆಯಲ್ಲಿ ಇದುವರೆಗೂ ಐವರು ಮೃತಪಟ್ಟು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT