ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್ಲೆಂಡ್‌: ಚುನಾವಣೆಗೆ ಬಹಿಷ್ಕಾರದ ಬೆದರಿಕೆ

Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬ್ಯಾಂಕಾಕ್‌ (ಪಿಟಿಐ): ಸಾವಿರಾರು ಪ್ರತಿಭಟನಾಕಾರರು ಭಾನುವಾರ ಪ್ರಧಾನಿ ಯಿಂಗ್ಲುಕ್‌ ಶಿನವಾತ್ರ ನೇತೃತ್ವದ ಉಸ್ತುವಾರಿ ಸರ್ಕಾರದ ರಾಜೀ­ನಾಮೆಗೆ ಒತ್ತಾಯಿಸಿದ್ದಾರೆ. ಜತೆಗೆ, ಪ್ರಮುಖ ವಿರೋಧ ಪಕ್ಷವು ಫೆ.2ರಂದು ನಡೆಯಲಿರುವ ಕ್ಷಿಪ್ರ ಚುನಾವಣೆ­ಯನ್ನು ಬಹಿಷ್ಕರಿಸು­ವುದಾಗಿ ಹೇಳಿದೆ.

ಸಂವಿಧಾನ ಸುಧಾರಣೆಗಾಗಿ ಮಾರ್ಗ­­ದರ್ಶಿ ಸೂತ್ರಗಳನ್ನು ಪ್ರಸ್ತಾ­ಪಿಸಿ­ರುವ  ಶಿನವಾತ್ರ ಅವರು, ಚುನಾ­ವಣೆಯ ನಂತರ ಈ ಸುಧಾರಣೆ­ಯನ್ನು ಎಲ್ಲಾ ರಾಜಕೀಯ ಪಕ್ಷಗಳು ಗೌರವಿಸಬೇಕು ಎಂದು ಕೋರಿದ್ದಾರೆ.

ಈ ಮಧ್ಯೆ, ಪ್ರತಿಭಟನೆಯ ನೇತೃತ್ವ ವಹಿಸಿರುವ ಮಾಜಿ ಉಪಪ್ರಧಾನಿ ಸುಥೆಪ್‌ ತಾಗ್ಸುಬಾನ್‌ ಅವರು ಪ್ರತಿ­ಭ­ಟನಾ ರ್‍್ಯಾಲಿ­ಯು ಶಿನವಾತ್ರ  ಅವರ ಸರ್ಕಾರದ ಮೇಲೆ ಖಂಡಿತ ಒತ್ತಡ ಹೇರಲಿದೆ ಎಂದಿದ್ದಾರೆ.

ಫೆ.2ರಂದು ನಡೆಯಲಿರುವ ಚುನಾ­ವಣೆಗೆ ಬ್ಯಾಂಕಾಕ್‌ನ ಕ್ರೀಡಾಂಗಣ­ದಲ್ಲಿ ಸೋಮವಾರ (ಡಿ.23) ಅಭ್ಯ­ರ್ಥಿ­ಗಳ ಹೆಸರು ನೋಂದಣಿ ನಡೆಯ­ಲಿದ್ದು, ಈ ಸಂದರ್ಭದಲ್ಲೇ ಕ್ರೀಡಾಂಗ­ಣಕ್ಕೆ ಮುತ್ತಿಗೆ ಹಾಕಲು ಪ್ರತಿಭಟನಾ­ಕಾರರು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT