ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್ಲೆಂಡ್‌ನಲ್ಲಿ ಚುನಾವಣಾ ಕಾರ್ಯಕ್ಕೆ ಅಡ್ಡಿ, ಪ್ರತಿಭಟನೆ

Last Updated 23 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬ್ಯಾಂಕಾಂಕ್ (ಪಿಟಿಐ): ಥಾಯ್ಲೆಂಡ್‌­ನಲ್ಲಿ ಬೀದಿಗಿಳಿದಿರುವ ಸರ್ಕಾರಿ ವಿರೋಧಿ ಪ್ರತಿಭಟನಾಕಾರರು, ಚುನಾ­ವಣಾ ನೋಂದಣಿಗೆ ನಿಗದಿಪಡಿಸಲಾಗಿ­ರುವ ಕ್ರೀಡಾಂಗಣಕ್ಕೆ  ಮುತ್ತಿಗೆ ಹಾಕಲು ಸೋಮವಾರ ವಿಫಲ ಯತ್ನ ನಡೆಸಿದರು.

ಚುನಾವಣಾ ಕೆಲಸಕ್ಕೆ ನಿಗದಿಯಾಗಿ­ರುವ ಥಾಯ್– ಜಪಾನೀಸ್ ಕ್ರೀಡಾಂಗ­ಣಕ್ಕೆ ನೂರಾರು ಪ್ರತಿಭಟನಾ­ಕಾರರು ಮುತ್ತಿಗೆ ಹಾಕಿದರು. ಫೆ. 2ರಂದು ಚುನಾವಣೆ ಘೋಷಣೆ­ಯಾಗಿದ್ದು ಇದೇ 27ರ ಒಳಗೆ  ರಾಜ­ಕೀಯ ಪಕ್ಷಗಳು ನೋಂದಣಿ ಮಾಡಿಕೊಳ್ಳಬೇಕಾಗಿದೆ.

ವಿವಿಧ ಪಕ್ಷಗಳ ರಾಜಕೀಯ ನಾಯ­ಕರು ತಮ್ಮ ಪಕ್ಷ ಮತ್ತು ಅಭ್ಯರ್ಥಿಗಳ ಹೆಸರನ್ನು ನೋಂದಾಯಿಸು­ವುದನ್ನು ತಡೆ­ಯು­­ವುದು ಪ್ರತಿಭಟನಾ­ಕಾರರ
ಉದ್ದೇಶ­ವಾಗಿತ್ತು; ಉಸ್ತು­­ವಾರಿ ವಹಿಸಿರುವ ಯಿಂಗ್ಲುಕ್ ಶಿನ­ವಾತ್ರ ಅವರ ಪಕ್ಷವೇ ಮತ್ತೆ ಅಧಿ­ಕಾರಕ್ಕೆ ಬರಬ­ಹುದೋ ಎಂಬ ಆತಂಕವೇ ಪ್ರತಿಭಟ­ನಾಕರರ ಈ ಹೆಜ್ಜೆಗೆ ಕಾರಣ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT