ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥೇನ್: ಆತಂಕಗೊಂಡ ಬೆಳೆಗಾರರು

Last Updated 2 ಜನವರಿ 2012, 8:45 IST
ಅಕ್ಷರ ಗಾತ್ರ

ವಿರಾಜಪೇಟೆ: `ಥೇನ್~ಚಂಡಮಾರುತ ಜಿಲ್ಲೆಗೂ ಪ್ರವೇಶಿಸುವ ಹಿನ್ನಲೆಯಲ್ಲಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ವಿರಾಜಪೇಟೆ ತಾಲ್ಲೂಕಿನಾದ್ಯಂತ ಗದ್ದೆಯಲ್ಲಿ ವಿವಿಧ ಜಾತಿಯ ಭತ್ತವನ್ನು ಬೆಳೆದ ರೈತರು ಡಿಸೆಂಬರ್ ಎರಡನೇ ವಾರದಿಂದಲೇ ಕಟಾವಿಗೆ ಆರಂಭಿಸಿದ್ದಾರೆ.

ಬಿಳಿಯಾ, ದೊಡ್ಡಿ ಜಾತಿಯ ಪೈರುಗಳನ್ನು ಈಗಾಗಲೇ ಕಟಾವು ಮಾಡಿಲಾಗಿದೆ. ಆದರೆ ಸಣ್ಣಕ್ಕಿ ಭತ್ತದ ಪೈರುಗಳು ಇನ್ನು 10ರಿಂದ 15ದಿನಗಳ ವರೆಗೆ ಗದ್ದೆಯಲ್ಲಿಯೇ ಒಣಗಬೇಕಾ ಗಿದೆ. ಚಂಡಮಾರುತದ ಭಾರೀ ಮಳೆಯ ಹಿನ್ನಲೆಯಲ್ಲಿ ರೈತರು ಈ ವಿಶೇಷ ತಳಿಯ ಭತ್ತದ ಪೈರುಗಳನ್ನುಶನಿವಾರ ಅವಸರವಾಗಿ ಕಟಾವು ಮಾಡುತ್ತಿದ್ದಾರೆ. ಭಾರೀ ಮಳೆಯಿಂದ ಭತ್ತದ ಪೈರುಗಳು ಗದ್ದೆಯಲ್ಲಿಯೇ ನಾಶವಾಗಲಿದೆ ಎಂದು ರೈತರು ಹೇಳುತ್ತಾರೆ. ತಿತಿಮತಿ, ಶ್ರೀಮಂಗಲ, ಹುದಿಕೇರಿ, ಕಾನೂರು, ಪೆರುಂಬಾಡಿ, ಬಿಳುಗುಂದ, ಅರಮೇರಿ ಹಾಗೂ ಅಮ್ಮತ್ತಿ ಸೇರಿದಂತೆ ವಿವಿಧೆಡೆಗಳಲ್ಲಿ ವಿಶೇಷ ತಳಿಯ ಭತ್ತದ ಪೈರುಗಳು ಗದ್ದೆಯಲ್ಲಿ ಒಣಗುತ್ತಿದ್ದವು.

ಚಂಡಮಾರುತದ ಭಾರೀ ಮಳೆಯ ಹಿನ್ನಲೆಯಲ್ಲಿ ವಿರಾಜಪೇಟೆ ತಾಲ್ಲೂಕಿ ನಲ್ಲಿ ಶುಕ್ರವಾರ ಅಪರಾಹ್ನದಿಂದಲೇ ಮೋಡ ಕವಿದ ವಾತಾವರಣ ಉಂಟಾಗಿದೆ. ಶನಿವಾರವೂ ಇದೇ ವಾತಾವರಣ ಮುಂದುವರಿದಿದೆ. ಶುಕ್ರವಾರ ರಾತ್ರಿ ತುಂತುರು ಮಳೆಯೂ ಬಿದ್ದಿದೆ. ಸುಂಟರ ಗಾಳಿಯು ಬೀಸುತ್ತಿದೆ. ಶುಕ್ರವಾರ ರಾತ್ರಿ ತಿತಿಮತಿ ವಿಭಾಗದಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಭಾರೀ ಗಾಳಿ ಬೀಸಿದ ಪರಿಣಾಮವಾಗಿ  ಭಾರೀ ಗಾತ್ರದ ಮರ ವಿದ್ಯುತ್
ತಂತಿ ಕಂಬದ ಮೇಲೆ ಬಿದ್ದು ತಾಲ್ಲೂಕಿನಾದ್ಯಂತ ಸುಮಾರು 12ಗಂಟೆಗಳ ಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ಕಾಫಿ ಮೇಲೂ ಪರಿಣಾಮ: ಭಾರೀ ಗಾಳಿ, ಮಳೆಯಿಂದ ಕಾಫಿ ಬೆಳೆಯ ಮೇಲೂ ತೀವ್ರ ರೀತಿಯ ಪರಿಣಾಮ ಬೀರಲಿದೆ. ಕಾಫಿ ತೋಟದಲ್ಲಿ ಹಣ್ಣಿಗೆ ಬಂದಿರುವ ಕಾಫಿ ಇದರಿಂದ ಅಧಿಕವಾಗಿ ಉದುರುವ ಸಾಧ್ಯತೆ ಇದೆ. ಕಾಫಿ ಬೆಳೆಗಾರರು ಇದರಿಂದಾಗಿ ಆತಂಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT