ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂತ ಆರೋಗ್ಯ; ಮಕ್ಕಳಲ್ಲಿ ಜಾಗೃತಿ ಅವಶ್ಯ

Last Updated 13 ಫೆಬ್ರುವರಿ 2012, 6:45 IST
ಅಕ್ಷರ ಗಾತ್ರ

ಬೆಳಗಾವಿ: ಮಕ್ಕಳ ದಂತ ಆರೋಗ್ಯ ಅಲಕ್ಷಿಸಲ್ಪಟ್ಟಿದೆ. ವೈದ್ಯರು ಹಾಗೂ ಪೋಷಕರು ಇದರ ಮಹತ್ವದ ಬಗೆಗೆ ಮಕ್ಕಳಿಗೆ ತಿಳಿಸುವ ಮೂಲಕ ದಂತ ಆರೋಗ್ಯ ಕಾಪಾಡಲು ಮುಂದಾಗಬೇಕು ಎಂದು ಡಾ. ಎಸ್.ಎಂ. ದಡೆದ ಹೇಳಿದರು.

ಬೆಳಗಾವಿಯ ವಿ.ಕೆ. ದಂತ ವೈದ್ಯಕೀಯ ಕಾಲೇಜಿನಲ್ಲಿ ದಂತ ಮತ್ತು ಮುಖದ ಮೂಳೆಯ ಗಾಯ ಚಿಕಿತ್ಸೆಯ ನಿರ್ವಹಣೆ ಕುರಿತು ಭಾನುವಾರ ಆರಂಭವಾದ ದಂತ ವೈದ್ಯರುಗಳ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಬಾಯಿ ಆರೋಗ್ಯವು ಮನುಷ್ಯನ ದೇಹದ ಆರೋಗ್ಯದ ಆಧಾರವಾಗಿದೆ. ಆದ್ದರಿಂದ ದಂತ ಆರೋಗ್ಯದ ಬಗೆಗೆ ಗಮನ ಹರಿಸಬೇಕು~ ಎಂದು ಅವರು ಹೇಳಿದರು.

ಮಂಗಳೂರಿನ ದಂತ ವೈದ್ಯಕೀಯ ಕಾಲೇಜಿನ ಡಾ.ಶಾಮ ಭಟ್ ಮಾತನಾಡಿ, ಏನೂ ಅರಿಯದ ಮಕ್ಕಳಿಗೆ ಪರಿಣಾಮಕಾರಿಯಾಗಿ ತಿಳಿಸಿಕೊಡಬೇಕು. ಚಿಕ್ಕ ಮಕ್ಕಳಿದ್ದಾಗ ಹೇಳುವ ವಿಷಯವು ಯಾವತ್ತೂ ಮನಸ್ಸಿನಲ್ಲಿ ಉಳಿಯುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆ.ಎಲ್.ಇ. ವಿ.ಕೆ. ದಂತ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯೆ ಡಾ.ಅಲ್ಕಾ ಕಾಳೆ ಮಾತನಾಡಿ, ಇಂತಹ ಕಾರ್ಯಗಾರಗಳ ಮುಖಾಂತರ ಆಧುನಿಕ ತಂತ್ರಜ್ಞಾನಗಳು ಖಾಸಗಿ ವೈದ್ಯರುಗಳಿಗೆ ತಲುಪುತ್ತದೆ. ಅದರಿಂದ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ದೊರೆಯಲು ಕಾರಣವಾಗುತ್ತದೆ ಎಂದರು.

ಡಾ.ಎಸ್.ಎಂ. ಕೊಟ್ಟರಶೆಟ್ಟಿ, ಡಾ.ಸುಮಾ ಸೋಗಿ, ಡಾ.ಶಿವಯೋಗಿ ಹೂಗಾರ ಹಾಗೂ ಡಾ.ಸಂದೀಪ್ ಬೈಲವಾಡ ಮತ್ತಿತರರು ಪಾಲ್ಗೊಂಡಿದ್ದರು.

ಡಾ.ಸುಧಾ ಪಾಟೀಲ ನಿರೂಪಿಸಿದರು. ಡಾ.ವಿದ್ಯಾಸಾಗರ ವಂದಿಸಿದರು. ನಂತರ ದಂತ ವೈದ್ಯಕೀಯ ಕುರಿತು ತಜ್ಞ ವೈದ್ಯರು ಉಪನ್ಯಾಸ ನೀಡಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT