ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾ ತಂಡ ಆಗಮನ

Last Updated 9 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಅನೇಕ ಬಾರಿ ವಿಶ್ವಕಪ್‌ನಲ್ಲಿ ದುರಾದೃಷ್ಟದಿಂದಾಗಿ ನಿರಾಸೆಗೊಂಡಿರುವ ದಕ್ಷಿಣ ಆಫ್ರಿಕಾ ತಂಡವು ಈ ಬಾರಿ ಚಾಂಪಿಯನ್ ಆಗುವ ಮಹತ್ವಾಕಾಂಕ್ಷೆಯ ಕನಸಿನೊಂದಿಗೆ ಬುಧವಾರ ಇಲ್ಲಿಗೆ ಬಂದಿಳಿದಿದೆ.

ಗ್ರೇಮ್ ಸ್ಮಿತ್ ನಾಯಕತ್ವದ ಹದಿನೈದು ಆಟಗಾರರ ತಂಡವು ಹಿಂದೆಂದೂ ಸಾಧ್ಯವಾಗದ ವಿಶ್ವಕಪ್ ಗೆಲುವನ್ನು ಸಾಧಿಸಿ ಹಿಂದಿರುಗುವ ಆಶಯದೊಂದಿಗೆ ವಿಮಾನದಿಂದ ಇಳಿದರು. ಭಾರಿ ಸಂಖ್ಯೆಯಲ್ಲಿ ಕ್ರಿಕೆಟ್ ಪ್ರೇಮಿಗಳು ಸ್ಮಿತ್ ಪಡೆಗೆ ಸ್ವಾಗತ ನೀಡಿದರು.

ಕೈಗೆಟುಕದ ಹಣ್ಣಾಗಿಯೇ ಉಳಿದಿರುವ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿಯುವಂಥ ಸಾಮರ್ಥ್ಯವನ್ನು ಹೊಂದಿರುವ ದಕ್ಷಿಣ ಆಫ್ರಿಕಾ ತಂಡವು ಇತ್ತೀಚೆಗೆ ಭಾರತ ವಿರುದ್ಧದ ಏಕದಿನ ಪಂದ್ಯಗಳ ಸರಣಿಯಲ್ಲಿ ವಿಜಯ ಸಾಧಿಸಿ ಉತ್ಸಾಹವನ್ನು ಹೆಚ್ಚಿಸಿಕೊಂಡಿದೆ. ಅದೇ ಹುಮ್ಮಸ್ಸಿನೊಂದಿಗೆ ಫೆಬ್ರುವರಿ 19ರಿಂದ ಏಪ್ರಿಲ್ 2ರವರೆಗೆ ನಡೆಯುವ ವಿಶ್ವದ ದೊಡ್ಡ ಕ್ರಿಕೆಟ್ ಹಬ್ಬದಲ್ಲಿ ಪಾಲ್ಗೊಂಡು ಯಶಸ್ಸಿನ ಸಿಹಿಯನ್ನು ಸವಿಯುವ ವಿಶ್ವಾಸವನ್ನು ಈ ತಂಡದ ಆಟಗಾರರು ಹೊಂದಿದ್ದಾರೆ.

ವಿಶ್ವಕಪ್‌ನ ಲೀಗ್ ಹಂತದಲ್ಲಿ ದಕ್ಷಿಣ ಆಫ್ರಿಕಾ ತಂಡವು ‘ಬಿ’ ಗುಂಪಿನಲ್ಲಿ ಆಡಲಿದೆ. ಇದೇ ಗುಂಪಿನಲ್ಲ ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ಭಾರತ, ಐರ್ಲೆಂಡ್ ಹಾಗೂ ಹೇಲೆಂಡ್ ತಂಡಗಳಿವೆ. ಶನಿವಾರ ಇಲ್ಲಿ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದವರು ಜಿಂಬಾಬ್ವೆಯನ್ನು ಎದುರಿಸಲಿದ್ದಾರೆ.

ಸ್ಮಿತ್ ಬಳಗದವರು ವಿಶ್ವಕಪ್ ಕಾರ್ಯಚರಣೆಯನ್ನು ಫೆಬ್ರುವರಿ 24ರಂದು ಆರಂಭಿಸುವರು. ನವದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಹೋರಾಡಲಿದ್ದಾರೆ.

ದಕ್ಷಿಣ ಆಫ್ರಿಕಾ ತಂಡ ಇಂತಿದೆ: ಗ್ರೇಮ್ ಸ್ಮಿತ್ (ನಾಯಕ), ಹಾಶೀಮ್ ಆಮ್ಲಾ, ಜಾಕ್ ಕಾಲಿಸ್, ಅಬ್ರಹಾಮ್ ಡಿ ವೀಲಿಯರ್ಸ್, ಜೆನ್ ಪಾಲ್ ಡುಮಿನಿ, ಫಾಫ್ ಡು ಪ್ಲೆಸ್ಸಿಸ್, ಮಾರ್ನ್ ವಾನ್ ವಿಕ್ (ವಿಕೆಟ್ ಕೀಪರ್), ಕಾಲಿನ್ ಇನ್‌ಗ್ರಾಮ್, ಜಾನ್ ಬೋಥಾ, ಇಮ್ರಾನ್ ತಾಹೀರ್, ರಾಬಿನ್ ಪೀಟರ್ಸನ್, ಮಾರ್ನ್ ಮಾರ್ಕೆಲ್, ವಯ್ನೆ ಪರ್ನೆಲ್, ಡೆಲ್ ಸ್ಟೇನ್ ಮತ್ತು ಲಾನ್‌ವಾಬೊ ತ್ಸೊತ್ಸೊಬೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT