ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದತ್ ಪುನರ್‌ಪರಿಶೀಲನೆ ಅರ್ಜಿಗೆ ಚಿಂತನೆ

ಸಂಕ್ಷಿಪ್ತ ಸುದ್ದಿ
Last Updated 10 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮುಂಬೈ ಸ್ಫೋಟ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಲು ನಟ ಸಂಜಯ್ ದತ್ ಚಿಂತನೆ ನಡೆಸುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ನಾಯರ್ ಪ್ರಕರಣ- ನೋಟಿಸ್
ಕೊಚ್ಚಿ (ಪಿಟಿಐ): ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ)ಯ ತೀರ್ಪು ಪ್ರಶ್ನಿಸಿ ಇಸ್ರೋದ ಮಾಜಿ ಅಧ್ಯಕ್ಷ ಜಿ.ಮಾಧವನ್ ನಾಯರ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಕೇರಳ ಹೈಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಸಿಎಟಿ ಆದೇಶ ಪ್ರಶ್ನಿಸಿ ನಾಯರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಥೋಟತ್ತಿಲ್ ಬಿ.ರಾಧಾಕೃಷ್ಣನ್ ಹಾಗೂ ಬಿ. ಕೇಮಲ್ ಪಾಷ ಅವರಿದ್ದ ವಿಭಾಗೀಯ ಪೀಠ ಕೇಂದ್ರಕ್ಕೆ ನೋಟಿಸ್ ನೀಡಿತು.

ಆರೋಪಿಗಳು ಪೊಲೀಸ್ ವಶಕ್ಕೆ
ನವದೆಹಲಿ (ಪಿಟಿಐ): ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಬಿಎಸ್‌ಪಿ ನಾಯಕ ದೀಪಕ್ ಭಾರದ್ವಾಜ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಅವರ ಕಿರಿಯ ಪುತ್ರ ನಿತೇಶ್ ಭಾರದ್ವಾಜ್ ಮತ್ತು ವಕೀಲ ಮಿತ್ರ ಬಲ್ಜೀತ್ ಸಿಂಗ್ ಶೆಹ್ರಾವತ್ ಅವರನ್ನು  ದೆಹಲಿ ನ್ಯಾಯಾಲಯ ಬುಧವಾರ ಏಪ್ರಿಲ್ 16ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ. ಪ್ರತಿಭಾನಂದ ನಾಪತ್ತೆಯಾಗಿದ್ದಾನೆ.

ಬಿಷ್ನೋಯ್‌ಗೆ ಜಾಮೀನು ನಿರಾಕರಣೆ
ಜೋಧ್‌ಪುರ್ (ಪಿಟಿಐ): ನರ್ಸ್ ಭಂವರಿದೇವಿ ಅಪಹರಣ ಹಾಗೂ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಾಜಿ ಸಚಿವ ಮಾಲ್ಖಾನ್ ಸಿಂಗ್ ಬಿಷ್ನೋಯ್‌ಗೆ ಮೂರನೇ ಬಾರಿಗೆ ಜಾಮೀನು ಕೈತಪ್ಪಿದೆ.

ಆರೋಪಿ ಬಿಷ್ನೋಯ್ ಅವರ ಜಾಮೀನು ಅರ್ಜಿಯನ್ನು ರಾಜಸ್ತಾನ ಹೈಕೋರ್ಟ್‌ನ ನ್ಯಾಯಮೂರ್ತಿ ನಿರ್ಮಲ್ ಜಿತ್ ಕೌರ್ ಬುಧವಾರ ವಜಾಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT