ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದತ್ತಾತ್ರೇಯ ಬೇಂದ್ರೆ

ಚಂದ ಪದ್ಯ
Last Updated 26 ಜನವರಿ 2013, 19:59 IST
ಅಕ್ಷರ ಗಾತ್ರ

ಬೇಂದ್ರೆ ಅಂದ್ರೆ ಬೇಂದ್ರೆ ನಮ್ಮ
ದತ್ತಾತ್ರೇಯ ಬೇಂದ್ರೆ
ಅಂಬಿಕಾತನಯದತ್ತ
ವರಕವಿ ನಮ್ಮ ಬೇಂದ್ರೆ

ಧಾರವಾಡದಲ್ಲಿ ಹುಟ್ಟಿ
ಕಾವ್ಯ ದೀಕ್ಷೆ ತಳೆದರು
ಗೆಳೆಯರ ಗುಂಪನ್ನು ಕಟ್ಟಿ
ಕಾವ್ಯವನ್ನು ಬೆಳೆದರು

ನಾಡು ನುಡಿಯ ಸೇವೆ ಮಾಡಿ
ಹಾಡಿ ಹೃದಯ ಮಿಡಿದರು
ಚಿಗರಿಗಂಗಳ ಚೆಲುವಿ ಭೂಮಿ
ಜೀವದೊಡವೆ, ನುಡಿದರು

ಸಖೀಗೀತ, ಮೇಘದೂತ
ನಮ್ಮ ಎದೆಗೆ ತಂದರು
ಅದಕು ಇದಕು ಒಲವೇ ಬದುಕು
ಎಂದು ಕವಿಯು ಅಂದರು

`ನಾಕುತಂತಿ'ಯನ್ನು ಮಿಡಿಸಿ
ನಾಕವನ್ನು ಸೆಳೆದರು
ಶಾಂತಿಮಂತ್ರವನ್ನು ನುಡಿಸಿ
ಭ್ರಾಂತಿಯನ್ನು ಕಳೆದರು

ದತ್ತಾತ್ರೇಯ ಬೇಂದ್ರೆ ಅಂದ್ರೆ
ನಮಗೆ ಪಂಚಪ್ರಾಣವು
ಎದೆಯ ಮಿಡಿವ ಗಾನ, ಕಾವ್ಯ
ಬದುಕಿಗೊಂದು ತ್ರಾಣವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT