ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನ ದರ್ಪಣ

Last Updated 9 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಸಮಗ್ರ ಮಾಹಿತಿ
ರಾಮನಗರ ಜಿಲ್ಲೆಯನ್ನು ಪರಿಚಯಿಸುವ ಲೇಖನಗಳು ಸಂಕ್ಷಿಪ್ತವಾಗಿವೆ ಅನ್ನಿಸಿದರೂ ಜಿಲ್ಲೆಯನ್ನು ಸೂಕ್ತವಾಗಿ ಪರಿಚಯಿಸಿವೆ. ಹೊಸ ಜಿಲ್ಲೆಯಲ್ಲಿ ಹೆಚ್ಚಿನ ವಿಶೇಷಗಳಿರುವ ಸಾಧ್ಯತೆ ಇಲ್ಲ ಎಂಬ ನನ್ನ ಅಭಿಪ್ರಾಯ ಲೇಖನ ಓದಿದ ಮೇಲೆ ಬದಲಾಯಿತು. ಶೀರ್ಷಿಕೆ ಸೂಚಿಸುವಂತೆ ರಾಮನಗರ ಸಮೃದ್ಧ ಇತಿಹಾಸದ ಶ್ರೀಮಂತ ಜಿಲ್ಲೆ.
 -ಶಾಮಣ್ಣ,ಬೆಂಗಳೂರು .-ರಾಮೇಗೌಡ, ಕಿರುಗಾವಲು.

ಸಮಯೋಚಿತ
ರಾಮನಗರ ಜಿಲ್ಲಾ ದರ್ಶನ (ಎಸ್.ಸಂಪತ್) ಲೇಖನ ಸಕಾಲಿಕ ಅನ್ನಿಸಿತು. ಈ ಪುಟ್ಟ ಜಿಲ್ಲೆ ಗ್ರಾನೈಟ್, ರೇಷ್ಮೆ, ಮಾವು ಹಾಗೂ ತರಕಾರಿ ಬೆಳೆಗಳಿಗೆ ಪ್ರಸಿದ್ಧಿಯಾಗಿದೆ. ಜಾನಪದ ಲೋಕ, ಚನ್ನಪಟ್ಟಣದ ಬೊಂಬೆಗಳು ಇತ್ಯಾದಿ ಕುರಿತ ಮಾಹಿತಿಗಳಿಂದ ಜಿಲ್ಲಾ ದರ್ಶನ ಇಷ್ಟವಾಯಿತು.
 -ಸಹನಾ ಚಂದ್ರಶೇಖರ್, ಚಿಕ್ಕಮಗಳೂರು

ಸಂಸ್ಕತಿಗೆ ಒತ್ತು

ಇತ್ತೀಚಿನ ವರ್ಷಗಳಲ್ಲಿ ರಾಮನಗರ ಜಿಲ್ಲೆ ರಾಜಕೀಯ ವಿದ್ಯಮಾನಗಳಿಂದ ಸದಾ ಸುದ್ದಿಯಲ್ಲಿರುತ್ತದೆ. ಆದರೆ ಲೇಖನದಲ್ಲಿ ರಾಜಕೀಯ ಪ್ರಸ್ತಾಪಿಸದೇ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಇತಿಹಾಸದ ಮಾಹಿತಿಗಳಿಗೆ ಹೆಚ್ಚಿನ ಒತ್ತು ನೀಡಿದ ಲೇಖಕರ ಜಾಣ್ಮೆ ಇಷ್ಟವಾಯಿತು.
-ಅಶ್ವಿನಿ, ತುಮಕೂರು

ರೈತ ಮುಂದಾಳತ್ವ
ಸಾವಯವದಲ್ಲಿ ಈರುಳ್ಳಿ ಬೆಳೆಯುವ ಮೂಲಕ ಕೊಟ್ಟೂರಿನ ಇಕ್ರಾ ಬಳಗದ ರೈತರು ಮಾದರಿಯಾಗಿದ್ದಾರೆ. ಪ್ರತಿಯೊಂದಕ್ಕೂ ಸರ್ಕಾರದ ಕಡೆಗೆ ನೋಡದೆ ರೈತರೇ ಮುಂದಾಳತ್ವ ವಹಿಸಿ ಹೊಸ ಬೇಸಾಯ ಕ್ರಮಗಳನ್ನು ರೂಢಿಸಿಕೊಳ್ಳುವ ಪ್ರವೃತ್ತಿ ನಿಜಕ್ಕೂ ಮಾದರಿ.
-ನರಸಿಂಹಪ್ಪ ಬಳ್ಳಾರಿ

ಮಾರ್ಗದರ್ಶಿ

ಸಾವಯವ ಹಾಗೂ ಸಹಜ ಕೃಷಿ ಪ್ರಯೋಗಗಳಲ್ಲಿ ಯಶಸ್ವಿಯಾದ ರೈತರನ್ನು ಪರಿಚಯಿಸುವ ‘ಕೃಷಿ ಪುರವಣಿ’ಯ ಲೇಖನಗಳು ರೈತರಿಗೆ ಮಾರ್ಗದರ್ಶಿಯಾಗಿವೆ. ಜಾಗತೀಕರಣದ ನಂತರ ಕೃಷಿ ಕ್ಷೇತ್ರ ಬದಲಾಗಿದೆ. ರೈತರೇ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿ.
-ಸುರೇಶ ಪಾಟೀಲ, ಸಂಕೇಶ್ವರ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT