ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕಗಳಿಂದಲೂ ಖಾಲಿ ಬಿದ್ದಿರುವ ವಸತಿ ಗೃಹಗಳು

Last Updated 6 ಫೆಬ್ರುವರಿ 2012, 7:45 IST
ಅಕ್ಷರ ಗಾತ್ರ

 ರಟ್ಟೀಹಳ್ಳಿ: ಇಲ್ಲಿಗೆ ಸಮೀಪದ ಕಡೂರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯಿರುವ ಗುಡ್ಡದ ಮೇಲೆ ಭಾರತ ಜನಸಂಖ್ಯಾ ನಿಯಂತ್ರಣ ಯೋಜನೆ 3 ಅಡಿಯಲ್ಲಿ 15-16 ವರ್ಷಗಳ ಹಿಂದೆ ನಿರ್ಮಿಸಿದ ವಸತಿ ಗೃಹಗಳು ಇಂದು ವರ್ಣಿಸಲಾಗದ ದುಸ್ಥಿತಿ ತಲುಪಿವೆ. ಈ ಕಟ್ಟಡಗಳನ್ನು ಎಂದು ನಿರ್ಮಿಸಲಾಯಿತೋ ಅಂದಿನಿಂದಲೂ ಇವು ಖಾಲಿಯಾಗಿವೆ ಇವೆ.

ಒಂದೇ ಒಂದು ದಿನ ಯಾವ ನೌಕರರು ಇಲ್ಲಿ ವಾಸಿಸಿಲ್ಲ. ಕಟ್ಟಡಗಳು ಸುಸಜ್ಜಿತವಾಗಿ ನಿರ್ಮಾಣವಾಗಿವೆ. ನಿರ್ಮಾಣವಾದಾಗ ಗ್ರಾಮದ ಹೊರ ವಲಯದಲ್ಲಿ ಇದ್ದಂತೆ ಗೋಚರಿಸಿದ ಕಟ್ಟಡಗಳು ಇಂದು ಗ್ರಾಮ ಬೆಳೆದಂತೆ ಸಾರ್ವಜನಿಕ ಕಟ್ಟಡಗಳ ಸಮೀಪ ಇದೆ. ಈ ಕಟ್ಟಡಗಳ ಸುತ್ತ ಮುತ್ತಲೂ ಕಟ್ಟಡಗಳು ನಿರ್ಮಾಣವಾಗಿವೆ. ಈ ಕಟ್ಟಡಕ್ಕೆ ಸಮೀಪ ಹೊಂದಿಕೊಂಡಂತೆ ಸರ್ಕಾರಿ ಪ್ರೌಢಶಾಲೆ  ಆವರಣ ಇದೆ.

ಈ ಕಟ್ಟಡದೊಳಗೆ ಹೆಜ್ಜೆ ಇಡಲಾಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸುತ್ತಲೂ ಮುಳ್ಳುಗಳು ಬೆಳೆದಿವೆ. ವಸತಿ ಗೃಹದ ಪ್ರವೇಶ ದ್ವಾರ ಎಲ್ಲಿದೆ ಎಂಬುದೇ ಗೋಚರವಾಗುವುದಿಲ್ಲ. ಅಲ್ಲದೆ ಈ ಕಟ್ಟಡದ ಸಮೀಪ ನಿರ್ಮಿಸಿದ ಶೌಚಾಲಯಗಳೂ ಕೂಡಾ ಏತಕ್ಕೂ ಬಾರದ ಸ್ಥಿತಿಯಲ್ಲಿವೆ. ಕಟ್ಟಡವನ್ನು ಮುಳ್ಳುಗಳು ಸುತ್ತುವರಿದಿದ್ದು ಕಾಲಿಡಲು ಸಾಧ್ಯವಿಲ್ಲ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಇಂದು ಈ ಕಟ್ಟಡಗಳು ಹಾಳಾಗುತ್ತಿವೆ. ಯಾವ ಉದ್ದೇಶಕ್ಕಾಗಿ ಈ ವಸತಿ ಗೃಹಗಳನ್ನು ನಿರ್ಮಿಸಿದರೋ ಎಂಬುದೇ ತಿಳಿಯದ ಸಂಗತಿಯಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತ ಪಡಿಸಿದ್ದಾರೆ.

ಸರ್ಕಾರದ ಲಕ್ಷಾಂತರ ಹಣ ಈ ರೀತಿಯಲ್ಲಿ ದುರುಪಯೋಗವಾಗಿದೆ. ಇದಕ್ಕೆ ಯಾರು ಹೊಣೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಇದೇ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ದರು. ಗ್ರಾಮಸ್ಥರು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಈ ವಸತಿ ಗೃಹಗಳ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದರು.
 
ಕುಮಾರಸ್ವಾಮಿಯವರು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇಂದು ಮೇಲ್ದರ್ಜೆಗೆ  ಏರಿಸುವುದು ಇರಲಿ ಸರಿಯಾದ ಸಿಬ್ಬಂದಿಯನ್ನೇ ನಿಯೋಜಿಸಲು ಸಾಧ್ಯವಾಗು ತ್ತಿಲ್ಲ.

ಈ ಕಟ್ಟಡಗಳನ್ನು ಸ್ವಚ್ಛ ಮತ್ತು ಶುದ್ಧ ಮಾಡಿದರೆ ಸರ್ಕಾರಿ ಶಾಲೆಗಳಿಗೆ ಬಳಸಲು ಕೊಡಬಹುದಾಗಿದೆ.  ಶೌಚಾಲಯಗಳನ್ನು ದುರಸ್ಥಿ ಪಡಿಸಿದರೆ ಸಾರ್ವಜನಿಕ ಬಳಕೆಗೆ ನೀಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT