ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ: 9ರ ವರೆಗೆ ಬಂಗಾಳಿ ಆಹಾರೋತ್ಸವ

Last Updated 4 ಅಕ್ಟೋಬರ್ 2011, 8:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದಸರಾ ಹಬ್ಬದ ಅಂಗವಾಗಿ ಬಂಗಾಳಿ ಆಹಾರೋತ್ಸವ ನಗರದ ಕ್ಲರ್ಕ್ ಇನ್ ಹೋಟೆಲಿನಲ್ಲಿ ಏರ್ಪಡಿಸಲಾಗಿದ್ದು, ಇದೇ 9ರ ವರೆಗೆ ಮುಂದುವರಿಯಲಿದೆ.ದಸರಾ ಹಬ್ಬವೆಂದರೆ ಪಶ್ಚಿಮ ಬಂಗಾಳ ಪ್ರಸಿದ್ಧ. ಅಲ್ಲಿಯ ದುರ್ಗಾ ಉತ್ಸವ ಎಂದರೆ ಬಂಗಾಳಿಗರಿಗೆ ಅತ್ಯಂತ ಪ್ರಮುಖವಾದುದು.

ಜೊತೆಗೆ ಒರಿಸಾಸ, ಬಿಹಾರ, ಉತ್ತರ ಪ್ರದೇಶ, ಅಸ್ಸಾಂ, ತ್ರಿಪುರಾ ಮೊದಲಾದ ರಾಜ್ಯಗಳಲ್ಲಿ ದುರ್ಗಾ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಅಲ್ಲಿಂದ ವಲಸೆ ಬಂದು ನಗರದಲ್ಲಿ ನೆಲೆ ನಿಂತವರಿಗೆ ಮತ್ತು ಸ್ಥಳೀಯರಿಗೆ ಬಂಗಾಳಿ ಆಹಾರವನ್ನು ಸವಿಯಲು ಉತ್ಸವವನ್ನು ಆಯೋಜಿಸಲಾಗಿದೆ.

ಬಂಗಾಳಿಗರಿಗೆ ಫಿಶ್ ಕರಿ ಊಟವೆಂದರೆ ಅತ್ಯಂತ ಪ್ರಿಯವಾದುದು. ಸಿಗಡಿ, ಏಡಿ ಹಾಗೂ ವೆಟ್‌ಕಿ ಮೀನುಗಳ ಪದಾರ್ಥ ಪ್ರಸಿದ್ಧ. ಅದರಲ್ಲೂ ಹಿಲ್ಸಾ ಮೀನು ಎಂದರೆ ಜನಪ್ರಿಯ. ಗಂಗಾ, ಬ್ರಹ್ಮಪುತ್ರ ಹಾಗೂ ಪಶ್ಚಿಮ ಬಂಗಾಳದ ಪದ್ದಾ ನದಿಗಳಲ್ಲಿ ಸಿಗುವ ಹಿಲ್ಸಾ ಮೀನುಗಳನ್ನು ತರಿಸಲಾಗಿದೆ. ಹಿಲ್ಸಾ ಮೀನಿನ ಸ್ವಾದಕ್ಕೆ ಬಂಗಾಳಿಗರು ಮನಸೋಲುತ್ತಾರೆ.

ಅದು ಇಲ್ಸಾ ಮಚೆರ್ ಪಾತೂರಿ ಎಂಬುದು ಹಿಲ್ಸಾ ಮೀನಿನಿಂದ ಸಿದ್ಧಗೊಳಿಸಿದ ಪದಾರ್ಥ ಹಸಿವನ್ನು ಹೆಚ್ಚಿಸುತ್ತದೆ. ಜೊತೆಗೆ ಕೊಬ್ಬರಿ ಎಣ್ಣೆಯಲ್ಲಿ ಮಾಡಿದ ಪ್ರಾಣ್ ಮಲಾಯಿ ಕರಿ ಅಂಥ ಸ್ವಾದವನ್ನು ಸವಿಯಲು ಇಲ್ಲಿಯೂ ಅವಕಾಶ ಮಾಡಿಕೊಡಲಾಗಿದೆ. ಇವುಗಳೊಂದಿಗೆ ಫಿಶ್ ಕಟ್ಲೆಟ್, ಫಿಶ್ ಫ್ರೈ, ಪಾಂಫ್ಲೆಟ್ ಮಸಾಲಾ ಸವಿಯಲು ಸಿದ್ಧಗೊಂಡಿರುತ್ತವೆ.

ಇವುಗಳೊಂದಿಗೆ ಬಂಗಾಳಿಗರ ಪ್ರಿಯ ಆಹಾರ ಕೇವಲ ಮೀನಿನ ಪದಾರ್ಥಗಳಲ್ಲದೇ ಮಟನ್ ಮತ್ತು ಚಿಕನ್ ಕೂಡಾ ಪ್ರಿಯರು. ಹೀಗಾಗಿ ಮಟನ್ ಕರಿ ಅಲ್ಲಿಯ ಮಾಂಸಾಹಾರಿಗಳ ಮನೆಯಲ್ಲಿ ಸಾಮಾನ್ಯ. ಇದರೊಂದಿಗೆ ಚಿಕನ್ ಕಸಾ, ದೇಸಿ ಮುರ್ಗಿಡ್ ಜೋಲ್, ಏಡಿಯ ಕಕ್ಕರಾ ಝಾಲ್ ಪದಾರ್ಥ ಗಮನ ಸೆಳೆಯುತ್ತವೆ. ಚಿಕನ್ ರೋಲ್ ಮತ್ತು ವೆಜ್ ರೋಲ್‌ಗಳೂ ಲಭ್ಯ.

ಇವುಗಳೊಂದಿಗೆ ಬಂಗಾಳಿಗರ ಸಂಪ್ರದಾಯದ ಪದಾರ್ಥಗಳು ಸಸ್ಯಾಹಾರಿಗಳನ್ನು ಸೆಳೆಯುತ್ತವೆ. ಹೂಕೋಸು ಹಾಗೂ ಬಟಾಣಿಯಿಂದ ಮಾಡಿದ ಫುಲ್ಕೊ ಕಾಫಿರ್, ಜೀರಿಗೆ ಹಾಗೂ ಹವೀಜ ಹಾಕಿ ಮಾಡಿದ ಬೆಂಡಿಕಾಯಿಯ ಮೇಂಡಿ ಸರಸೂ, ಸಣ್ಣ ಸಣ್ಣ ಬಟಾಟೆ ತುಂಡುಗಳನ್ನು ಹುರಿದು ಮಾಡಿದ ಝಾಡಿ ಆಲೂ ಬಜೆ, ಹಾಗಲಕಾಯಿಯ ಕರೋಲಾ ಭಾಜಾ, ಕುಂಬಳಕಾಯಿಯಿಂದ ಮಾಡಿದ ಲೋಕಿ ಚಿಂಗಾರಿ, ಖರ್ಜೂರ ಹಾಗೂ ಒಣದ್ರಾಕ್ಷಿಯಿಂದ ಮಾಡಿದ ಸಿಹಿ ಪದಾರ್ಥ ಚಟ್ನಿ, ಅನಾನಸ್‌ನಿಂದ ಮಾಡಿದ ಸಿಹಿ ಪದಾರ್ಥ ಚಟ್ನಿ, ರಸಗುಲ್ಲ, ಕಡ್ಲಿಬೇಳೆಯಿಂದ ಮಾಡಿದ ಸಂದೇಸ್, ಛನಾ ಚಂ ಚಂ ಸಿಹಿತಿಂಡಿಗಳು ಚಪ್ಪರಿಸುತ್ತ ತಿನ್ನಬಹುದು ಇವುಗಳನ್ನು ಸವಿದ ನಂತರ ಮಿಸ್ಟಿ ದೋಯಿ ಎಂಬ ಸಿಹಿಮೊಸರು ಸವಿದು ಊಟ ಮುಗಿಸಬಹುದು. ಇವನ್ನೆಲ್ಲ ಜೀರ್ಣಿಸಿಕೊಳ್ಳಲು ಸ್ವೀಟ್ ಪಾನ್ ಸಿಗುತ್ತದೆ.

`ಈ ಉತ್ಸವದಲ್ಲಿ ಹೊಟ್ಟೆತುಂಬ ತಿನ್ನಬಹುದು. ಪ್ರತಿಯೊಬ್ಬರಿಗೆ 333 ರೂಪಾಯಿ ಶುಲ್ಕ. ರಜೆಯನ್ನು ಮಜಾವಾಗಿ ಕಳೆಯಲು ಈ ಉತ್ಸವ ನೆರವಾಗುತ್ತದೆ. ಅವಳಿನಗರದ ಬಂಗಾಳಿ ಆಹಾರ ಇಷ್ಟಪಡುವವರಿಗೆ ಮತ್ತು ಬಂಗಾಳಿ ಆಹಾರವನ್ನು ಪರಿಚಯ ಮಾಡಿಕೊಳ್ಳಲು ಈ ಉತ್ಸವ~ ಎನ್ನುತ್ತಾರೆ ಕ್ಲರ್ಕ್ಸ್ ಇನ್ ಹೋಟೆಲಿನ ಪ್ರಧಾನ ವ್ಯವಸ್ಥಾಪಕ ರೂಪಮ್ ದಾಸ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT