ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಅಥ್ಲೆಟಿಕ್ಸ್: ಬೆಂಗಳೂರು ನಗರಕ್ಕೆ ಸಮಗ್ರ ಪ್ರಶಸ್ತಿ

Last Updated 3 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮೈಸೂರು: ಬೆಂಗಳೂರು ನಗರ ತಂಡದ ಅಥ್ಲೀಟ್‌ಗಳು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ  ಸೋಮವಾರ ಮುಕ್ತಾಯವಾದ ರಾಜ್ಯಮಟ್ಟದ ದಸರಾ ಅಥ್ಲೆಟಿಕ್ಸ್ ಕೂಟದ ಸಮಗ್ರ ಪ್ರಶಸ್ತಿ ಗೆದ್ದು ವಿಜಯೋತ್ಸವ ಆಚರಿಸಿದರು.

ಟೂರ್ನಿಯಲ್ಲಿ ಒಟ್ಟು 112 ಅಂಕಗಳನ್ನು ಗಳಿಸಿದ ಬೆಂಗಳೂರು ನಗರ ತಂಡವು ತನ್ನ ಪ್ರಾಬಲ್ಯ ಮೆರೆಯಿತು. ಕಳೆದ ವರ್ಷ ಮೈಸೂರು ತಂಡವು ಈ ಚಾಂಪಿಯನ್‌ಷಿಪ್ ಗೆದ್ದುಕೊಂಡಿತ್ತು.

ಸೋಮವಾರ ಪುರುಷರ100 ಮೀ ಓಟದಲ್ಲಿ  ವೇಗದ ರಾಜನಾಗಿ ಹೊರಹೊಮ್ಮಿದ ಬೆಂಗಳೂರು ನಗರದ ಜಿ.ಎನ್. ಬೋಪಣ್ಣ, ಒಟ್ಟು 15 ಅಂಕಗಳೊಂದಿಗೆ ವೈಯಕ್ತಿಕ ಚಾಂಪಿಯನ್ ಆದರು. ಅಲ್ಲದೇ 1997ರಲ್ಲಿ ಕ್ಲಿಫರ್ಡ್ ಜೋಸೆಫ್ ಜೊಶುವಾ (ಕಾಲ: 10.6ಸೆ) ಮತ್ತು 2009ರಲ್ಲಿ ಸೋನಿತ್ ಮೆಂಡನ್ (10.6 ಸೆಕೆಂಡು) ದಾಖಲೆಯನ್ನೂ ಸರಿಗಟ್ಟಿದರು. ಬೆಂಗಳೂರು ನಗರದ ರೆಬೆಕ್ಕಾ ಜೋಸ್ ಮಹಿಳೆಯರ 100 ಮೀ ಟರ್ ಓಟದಲ್ಲಿ ಪ್ರಥಮರಾಗುವ ಮೂಲಕ ಕೂಟದ ವೇಗದ ಓಟಗಾರ್ತಿಯಾದರು. 20 ಅಂಕ ಗಳಿಸಿದ ಮೈಸೂರಿನ ಹುಡುಗಿ  ರೀನಾ ಜಾರ್ಜ್ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಚೇತನ್ ದಾಖಲೆ: ಪುರುಷರ ಹೈಜಂಪ್‌ನಲ್ಲಿ 2.04 ಮೀಟರ್ ಎತ್ತರ ಜಿಗಿದ ಬೆಂಗಳೂರು ನಗರದ ಚೇತನ್ ನೂತನ ಕೂಟ ದಾಖಲೆ ನಿರ್ಮಿಸಿದರು. 2010ರಲ್ಲಿ 2.01 ಮೀಟರ್ ಎತ್ತರ ಜಿಗಿದು ದಾಖಲೆ ಬರೆದಿದ್ದ ಮೈಸೂರಿನ ಸುಪ್ರಿತ್ ರಾಜ್‌ಈ ಬಾರಿ ಕೇವಲ ಎರಡು ಮೀಟರ್ ಜಿಗಿದು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಸಹನಾಕುಮಾರಿಗೆ ಚಿನ್ನ: ಅಂತರರಾಷ್ಟ್ರೀಯ ಅಥ್ಲೀಟ್ ಸಹನಾಕುಮಾರಿ ಮಹಿಳೆಯರ ಹೈಜಂಪ್ ಚಿನ್ನದ ಪದಕವನ್ನು ತಮ್ಮ ಕೊರಳಿಗೇರಿಸಿಕೊಂಡರು. ಬೆಂಗಳೂರು ನಗರ ವಿಭಾಗವನ್ನು ಪ್ರತಿನಿಧಿಸಿದ್ದ ಅವರು 1.75ಮೀಟರ್ ಎತ್ತರವನ್ನು ಜಿಗಿದು ಸ್ವರ್ಣ ಸಂಭ್ರಮ ಆಚರಿಸಿದರು.

ಫಲಿತಾಂಶಗಳು:  ಪುರುಷರು: 100 ಮೀಟರ್ ಓಟ: ಜಿ.ಎನ್. ಬೋಪಣ್ಣ (ಬೆಂಗಳೂರು ನಗರ)-1, ಸೋನಿತ್ ಮೆಂಡನ್ (ಮೈಸೂರು)-2, ಜಗದೀಶ್ (ಬೆಂಗಳೂರು ನಗರ)-3; ಕಾಲ: 10.60ಸೆ; 400 ಮೀ: ಎಂ.ಆರ್. ಮಂಜು (ಮೈಸೂರು)-1, ಎಂ.ಆರ್ ಮಧುಸೂಧನ (ಬೆಂಗಳೂರು ನಗರ)-2, ಇಮ್ತಿಯಾಜ್ ಅಹಮ್ಮದ್ (ಬೆಂಗಳೂರುನಗರ)-3, ಕಾಲ: 48.45ಸೆ; 5000 ಮೀ: ಬಿ. ರಾಹುಲ್ (ಬೆಂಗಳೂರು ನಗರ)-1, ಎಚ್.ಎಸ್. ರಾಕೇಶ್ (ಬೆಂಗಳೂರು ಗ್ರಾಮೀಣ)-2, ಕೃಷ್ಣಪ್ಪ ಸಂತಿ (ಬೆಳಗಾವಿ)-3, ಕಾಲ: 15ನಿ,52.86ಸೆ; ಜಾವೆಲಿನ್ ಥ್ರೋ: ಶಮಿತ್ ಶರ್ಮಾ (ಮೈಸೂರು)-1, ಪಿ.ಜೆ. ಪುರಂದರ್ (ಬೆಂಗಳೂರು ನಗರ)-2, ಕೆ.ಎಂ. ಗಿರೀಶ (ಬೆಂಗಳೂರು ಗ್ರಾಮೀಣ)-3, ದೂರ:61.83ಮೀ. ಹೈಜಂಪ್: ಬಿ. ಚೇತನ್ (ಬೆಂಗಳೂರು ನಗರ)-1, ಸುಪ್ರಿತ್ ರಾಜ್ (ಮೈಸೂರು)-2, ವಿನಯಕುಮಾರ್ (ಮೈಸೂರು)-3,  ನೂತನ ದಾಖಲೆ ಎತ್ತರ: 2.04ಮೀಟರ್. (ಹಳೆಯದು: 2.01ಮೀ).

ಮಹಿಳೆಯರು: 100 ಮೀ ಓಟ: ರೆಬೆಕ್ಕಾ ಜೋಸ್ (ಬೆಂಗಳೂರು ನಗರ)-1, ಬಿಬೇ ಸುಮಯಾ (ಮೈಸೂರು)-2, ಆರ್.ಎ. ಮಂಜುಶ್ರೀ (ಬೆಂಗಳೂರು ಗ್ರಾಮೀಣ)-3, ಕಾಲ: 11.90ಸೆ; 400 ಮೀ: ರೀನಾ ಜಾರ್ಜ್ (ಮೈಸೂರು)-1, ಎಂ.ಜಿ. ಪದ್ಮಿನಿ (ಬೆಂಗಳೂರು ನಗರ)-2, ಎಂ.ಅರ್ಪಿತಾ (ಬೆಂಗಳೂರು ನಗರ)-3, ಕಾಲ: 1ನಿಮಿಷ; 3000 ಮೀ: ಶ್ರದ್ಧಾರಾಣಿ ಎಸ್. ದೇಸಾಯಿ (ಮೈಸೂರು)-1, ತಿಪ್ಪವ್ವ ಸಣ್ಣಕ್ಕಿ (ಮೈಸೂರು)-2, ಸಿ.ಕೆ. ಶರವಾಣಿ (ಬೆಂಗಳೂರು ಗ್ರಾಮೀಣ)-3,  ನೂತನ ದಾಖಲೆ ಕಾಲ:

10ನಿ,25.10ಸೆ; ಜಾವೆಲಿನ್ ಥ್ರೋ: ಶೆಹಜಹಾನಿ (ಮೈಸೂರು)-1, ಪುಷ್ಪಾವತಿ (ಗುಲ್ಬರ್ಗ)-2, ಹ್ಯಾಜೆಲ್ ಮೇರಿ ರಾಜು (ಬೆಂಗಳೂರು ನಗರ)-3; ದೂರ: 40.92ಮೀ. ಹೈಜಂಪ್: ಸಹನಾಕುಮಾರಿ (ಬೆಂಗಳೂರು ನಗರ)-1, ಪವಿತ್ರ (ಮೈಸೂರು)-2, ಪಿ.ಬಿ. ಸುಮಿತ್ರ (ಮೈಸೂರು)-3, ಎತ್ತರ: 1.75ಮೀ;
ಸಮಗ್ರ ಪ್ರಶಸ್ತಿ: ಬೆಂಗಳೂರು ನಗರ (112 ಅಂಕಗಳು), ವೈಯಕ್ತಿಕ ವಿಭಾಗ: ಪುರುಷರು: ಜಿ.ಎನ್. ಬೋಪಣ್ಣ (ಬೆಂಗಳೂರು ನಗರ-15 ಅಂಕಗಳು), ಮಹಿಳೆಯರು: ರೀನಾ ಜಾರ್ಜ್ (ಮೈಸೂರು -20 ಅಂಕಗಳು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT