ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಅಥ್ಲೆಟಿಕ್ಸ್: ಸುಮಯಾ ನೂತನ ದಾಖಲೆ

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮೈಸೂರು: ಮಂಗಳವಾರ ಅಂಬಾವಿಲಾಸ ಅರಮನೆಯ ಅಂಗಳದಲ್ಲಿ ನವರಾತ್ರಿಯ ಸಂಭ್ರಮ ಅರಳುವ ಮುನ್ನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಎರಡು ನೂತನ ಕೂಟ ದಾಖಲೆ ಬರೆದ ಅಥ್ಲೀಟ್‌ಗಳು ಸಂಭ್ರಮಿಸಿದರು.

ಇಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ದಸರಾ ಅಥ್ಲೆಟಿಕ್ಸ್ ಕೂಟದ ಪುರುಷರ ವಿಭಾಗದ ಹೈಜಂಪ್‌ನಲ್ಲಿ ಬೆಂಗಳೂರು ನಗರ ವಿಭಾಗದ ಎಸ್. ಹರ್ಷಿತ್ ಮತ್ತು ಮಹಿಳೆಯರ ವಿಭಾಗದ 200 ಮೀಟರ್ ಓಟದಲ್ಲಿ ಮೈಸೂರಿನ ಬೀಬಿ ಸುಮಯಾ ನೂತನ ಕೂಟ ದಾಖಲೆ ಬರೆದರು.

ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಪುರುಷರ ಹೈಜಂಪ್‌ನಲ್ಲಿ ಕಳೆದ ವರ್ಷ ಬೆಂಗಳೂರು ನಗರದ ಬಿ. ಚೇತನ್ (2.04 ಮೀಟರ್) ನಿರ್ಮಿಸಿದ್ದ ದಾಖಲೆಯನ್ನು ಮಂಗಳವಾರ ಹರ್ಷಿತ್ 2.06 ಮೀಟರ್ ಎತ್ತರಕ್ಕೆ ಜಿಗಿಯುವ ಮೂಲಕ ನೂತನ ವಿಕ್ರಮ ಸಾಧಿಸಿದರು. ಕಳೆದ ಬಾರಿಯ ದಾಖಲೆವೀರ ಬಿ. ಚೇತನ್ ಈ ಬಾರಿ ಕೇವಲ 2 ಮೀಟರ್ ಎತ್ತರ ಜಿಗಿದು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಸುಮಯಾ ದಾಖಲೆ: ರಾಷ್ಟ್ರೀಯ ಅಥ್ಲೀಟ್ ಮೈಸೂರಿನ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ವಸತಿ ನಿಲಯದ ಬೀಬಿ ಸುಮಯಾ ಮಹಿಳೆಯರ 200 ಮೀಟರ್ ಓಟದಲ್ಲಿ ತಮ್ಮ ಸಹಪಾಠಿ ರೀನಾ ಜಾರ್ಜ್ ದಾಖಲೆಯನ್ನು ಮೀರಿ ನಿಂತರು. ಟ್ರ್ಯಾಕ್ ಸಮೀಪದಲ್ಲಿಯೇ ನಿಂತಿದ್ದ ಸೈಯದ್ ರಹೀಮ್ ತಮ್ಮ ಮಗಳು ಬೀಬಿಯ ಸಾಧನೆಯನ್ನು ಕಣ್ತುಂಬಿಕೊಂಡರು.

ಮಧ್ಯಾಹ್ನದ ಬಿಸಿಲಿನಲ್ಲಿ ನಡೆದ ಸ್ಪರ್ಧೆಯಲ್ಲಿ 24.60 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಬೀಬಿ ಸುಮಯಾ, ಕಳೆದ ವರ್ಷ ರೀನಾ ಜಾರ್ಜ್ ಬರೆದಿದ್ದ 24.70 ಸೆಕೆಂಡುಗಳ ದಾಖಲೆಯನ್ನು ಅಳಿಸಿ ಹಾಕಿದರು.

ಫಲಿತಾಂಶಗಳು: ಪುರುಷರು: 200 ಮೀಟರ್ ಓಟ: ಸೋನಿತ್ ಮೆಂಡನ್ (ಮೈಸೂರು)-1, ಜಿ.ಎನ್. ಬೋಪಣ್ಣ (ಬೆಂಗಳೂರು ನಗರ)-2, ವಿ. ಅರುಣಕುಮಾರ್ (ಬೆಂಗಳೂರು ಗ್ರಾಮಾಂತರ)-3 ಕಾಲ: 22.12ಸೆಕೆಂಡು:
 
1500 ಮೀ : ಎಸ್.ಎಚ್. ಶಿವಾನಂದ್ (ಬೆಂಗಳೂರು ಗ್ರಾಮಾಂತರ)-1, ಬಿ. ರಾಹುಲ್ (ಬೆಂಗಳೂರು ನಗರ)-2, ಇಫ್ತಿಕಾರ್ ಅಹಮದ್ (ಬೆಂಗಳೂರು ನಗರ)-3; ಕಾಲ: 4ನಿಮಿಷ,13.92ಸೆಕೆಂಡು;

ಡಿಸ್ಕಸ್ ಥ್ರೋ: ಆರ್. ಶರತ್‌ರಾಜ್ (ಮೈಸೂರು)-1, ಎಂ.ಆರ್. ನಂದೀಶ್ (ಮೈಸೂರು)-2. ಎಚ್. ಸಿಕಂದರ್ (ಬೆಳಗಾವಿ)-3 ದೂರ: 42.48ಮೀ:

ಹೈಜಂಪ್: ಎಸ್. ಹರ್ಷಿತ್ (ಬೆಂಗಳೂರು ನಗರ)-1, ಬಿ. ಚೇತನ್ (ಬೆಂಗಳೂರು ನಗರ)-2, ಬಿ. ವಿನಯಕುಮಾರ್ (ಮೈಸೂರು)-3, ಎತ್ತರ: ನೂತನ ದಾಖಲೆ; 2.06ಮೀ. (ಹಳೆಯದು: 2.04ಸೆ.; 2011).

ಮಹಿಳೆಯರು: 200 ಮೀಟರ್ ಓಟ: ಬೀಬಿ ಸುಮಯಾ (ಮೈಸೂರು)-1, ರೀನಾ ಜಾರ್ಜ್ (ಮೈಸೂರು)-2, ಎಂ.ಜಿ. ಪದ್ಮಿನಿ (ಬೆಂಗಳೂರು ನಗರ)-3 ಕಾಲ: ನೂತನ ದಾಖಲೆ: 24.6ಸೆಕೆಂಡುಗಳು (ಹಳೆಯದು: 24.7 ಸೆ; 2011).

1500ಮೀ: ಕೆ.ಸಿ. ಶ್ರುತಿ (ಬೆಂಗಳೂರು ನಗರ)-1, ಶ್ರದ್ಧಾರಾಣಿ ಎಸ್. ದೇಸಾಯಿ (ಮೈಸೂರು)-2, ತಿಪ್ಪವ್ವ ಸಣ್ಣಕ್ಕಿ (ಮೈಸೂರು)-3, ಕಾಲ: 4ನಿ, 45.25ಸೆ; ಡಿಸ್ಕಸ್ ಥ್ರೋ: ನಿವೇದಿತಾ ಪಿ. ಸಾವಂತ್ (ಬೆಳಗಾವಿ)-1, ಎಸ್. ಸುಷ್ಮಾ (ಮೈಸೂರು)-2, ಕೆ. ಕಾವ್ಯಾ (ಬೆಂಗಳೂರು ಗ್ರಾಮಾಂತರ)-3, ದೂರ: 35.28ಮೀ;

ಹೈಜಂಪ್: ಪ್ರಜ್ಞಾ ಎಸ್. ಪ್ರಕಾಶ್ (ಬೆಂಗಳೂರು ನಗರ)-1, ಪವಿತ್ರ (ಮೈಸೂರು)-2, ಕೆ.ವಿ. ಬಿಂಬಿತಾ (ಬೆಂಗಳೂರು ಗ್ರಾಮಾಂತರ)-3. ಎತ್ತರ: 1.52ಮೀ;

100ಮೀ ಹರ್ಡಲ್ಸ್: ಮೇಘನಾ ಶೆಟ್ಟಿ (ಬೆಂಗಳೂರು ನಗರ)-1, ಪ್ರಜ್ಞಾ ಎಸ್. ಪ್ರಕಾಶ್ (ಬೆಂಗಳೂರು ನಗರ)-2, ಎಸ್.ಜಿ. ಪ್ರಿಯಾಂಕ (ಮೈಸೂರು)-3. ಕಾಲ: 14.40ಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT