ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಉಪಸಮಿತಿ: ಅಧ್ಯಕ್ಷ, ಉಪಾಧ್ಯಕ್ಷರ ಪಟ್ಟಿ ಪ್ರಕಟ

Last Updated 4 ಅಕ್ಟೋಬರ್ 2012, 8:30 IST
ಅಕ್ಷರ ಗಾತ್ರ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವ-2012ರ ಉಪಸಮಿತಿಗಳ ಅಧ್ಯಕ್ಷ, ಉಪಾಧ್ಯಕ್ಷರ ಪಟ್ಟಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಅವರು ಬುಧವಾರ ಪ್ರಕಟಿಸಿದರು.

ಚಾಮುಂಡಿಬೆಟ್ಟದ ದಾಸೋಹ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಈ ಬಾರಿ ಒಟ್ಟು 27 ಉಪಸಮಿತಿಗಳನ್ನು ರಚಿಸಲಾಗಿದೆ. ಈ ಉಪಸಮಿತಿಗಳ ಕಾರ್ಯಾಧ್ಯಕ್ಷರು ಪದಾಧಿಕಾರಿ ಗಳೊಂದಿಗೆ ಸಭೆ ನಡೆಸಿ ಕಾರ್ಯಕ್ರಮಗಳ ರೂಪುರೇಷೆಗಳನ್ನು ಅ.6ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು ಎಂದು ಸೂಚಿಸಿದರು.

ಸೆಸ್ಸ್ನಾ ವಿಮಾನ ಯಾನ, ಭಾರತೀಯ ಸೇನಾಪಡೆಯ ವಿವಿಧ ಪ್ರದರ್ಶನ, ಅಂಗವಿಕಲ ಮತ್ತು ಎಚ್‌ಐವಿ ಸೋಂಕಿತ ಮಕ್ಕಳಿಗೆ ದಸರಾ ವೀಕ್ಷಣೆಗೆ ಅವಕಾಶ, ಮನೆ ಮನೆ ದಸರಾದಡಿ ಆನ್‌ಲೈನ್‌ನಲ್ಲಿ ರಸಪ್ರಶ್ನೆ ಆಯೋಜನೆ, ಕಾವೇರಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ದೇಗುಲಗಳಲ್ಲಿ ವಿಶೇಷ ಪೂಜೆ, ಅಂತರರಾಷ್ಟ್ರೀಯ ಮ್ಯಾಜಿಕ್ ಪ್ರದರ್ಶನ, ರಾಷ್ಟ್ರ ಮಟ್ಟದ ಖೋ ಖೋ, ಕಬಡ್ಡಿ, ವಾಲಿಬಾಲ್ ಪಂದ್ಯಾವಳಿ ಇವೇ ಮೊದಲಾದವು ಈ ಬಾರಿ ದಸರಾದ ವಿಶೇಷ ಆಕರ್ಷಣೆಗಳು ಎಂದು ಅವರು ತಿಳಿಸಿದರು.

ಈಗಾಗಲೇ ಸೆಸ್ಸ್ನಾ ವಿಮಾನಯಾನದಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೊಂದಿರುವವರು ಆನ್‌ಲೈನ್ ಮೂಲಕ ಹೆಸರು ದಾಖಲಿಸುತ್ತಿದ್ದಾರೆ. ಮಹಾರಾಜ ಯಾನಕ್ಕೆ (ಪೈಲಟ್ ಜೊತೆ ಒಬ್ಬರು) ರೂ.2500 ಮತ್ತು ಯುವರಾಜ ಯಾನಕ್ಕೆ (ಪೈಲಟ್ ಜೊತೆ ಮೂವರು) ರೂ.2000 ದರ ನಿಗದಿಪಡಿಸಲಾಗಿದೆ.

ಈ ಗಗನ ಯಾನದ ಕಾಲಾವಧಿ 15 ನಿಮಿಷಗಳಾಗಿದೆ. ಮನೆಮನೆ ದಸರಾದಡಿ 14ರಂದು ಬೆಳಿಗ್ಗೆ 11ಗಂಟೆ ಯಿಂದ 11.45ರವರೆಗೆ ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ಪ್ರಾಥಮಿಕ, ಪ್ರೌಢ ಶಾಲೆ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಹೀಗೆ ವಿವಿಧ ವಯೋಮಾನದವರಿಗೆ ವಿವಿಧ ಹಂತದಲ್ಲಿ ಕ್ವಿಜ್ ನಡೆಯಲಿದೆ. ಸ್ಪರ್ಧೆ ಮುಗಿದ ಮರುನಿಮಿಷವೇ ಕೀ ಉತ್ತರಗಳನ್ನು ಅಂತರ್ಜಾಲದಲ್ಲಿ  ಪ್ರಕಟಿಸಲಾಗುವುದು. ವಿಜೇತರಿಗೆ ಅರಮನೆ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು. ಆಸಕ್ತರು ಅ.8 ರಿಂದ 13ರ ವರೆಗೂ ಆನ್‌ಲೈನ್‌ನಲ್ಲಿ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು.

ಸಾಂಸ್ಕೃತಿಕ ದಸರಾದಡಿ ಅರಮನೆ ಮೈದಾನದಲ್ಲಿ ಸೂರ್ಯೋದಯ ದಿಂದ ಸೂರ್ಯಾಸ್ತದವರೆಗೆ ಸಂಗೀತ ಲಹರಿ ಆಯೋಜನೆಗೆ ಸಿದ್ಧತೆ ನಡೆದಿವೆ. ಶೀಘ್ರದಲ್ಲೇ ದಿನಾಂಕ ನಿಗದಿಯಾಗಲಿದೆ. ಕುಪ್ಪಣ್ಣ ಪಾರ್ಕಿನಲ್ಲಿ  23ರಂದು ಸಂಜೆ 4 ರಿಂದ 6.30ರವರೆಗೆ ಅಂಗವಿಕಲ ಮಕ್ಕಳಿಂದ ಕಾರ್ಯಕ್ರಮಗಳು ನಡೆಯಲಿವೆ. ಹೃತ್ವಿಕ್ ಮತ್ತು ರೋಷನ್ ಅವರು ನೃತ್ಯ ಪ್ರದರ್ಶಿಸಲಿದ್ದಾರೆ.

ರಾಜ್ಯದ ವಿವಿಧೆಡೆಯ 1500 ಎಚ್‌ಐವಿ ಸೋಂಕಿತ ಮಕ್ಕಳು ದಸರಾದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತೀಯ ಸೇನಾಪಡೆಯ ಯೋಧರು ವಿವಿಧ ಕಾರ್ಯಕ್ರಮಗಳನ್ನು ನೀಡಲಿದ್ದು, ಬುಡಕಟ್ಟು ನೃತ್ಯ ಇದರಲ್ಲಿ ಸೇರಿದೆ. ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಅವರು ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತು ವೀಕ್ಷಿಸಲಿದ್ದಾರೆ. ಮತದಾನದ ಮಹತ್ವ ಸಾರುವ ಭಿತ್ತಿಗಳು ರಾರಾಜಿಸಲಿವೆ. ಸಾರ್ವಜನಿಕರು ದಸರಾ ಕುರಿತ ಯಾವುದೇ ಮಾಹಿತಿಗೆ www.mysoredasara.gov.in ವೆಬ್‌ತಾಣಕ್ಕೆ ಭೇಟಿ ನೀಡಬಹುದು ಎಂದು ತಿಳಿಸಿದರು 

 ಆರ್‌ಎಸ್‌ಎಸ್ ಮುಖಂಡ ವೆಂಕಟರಾಮ್ ಮಾತನಾಡಿ, ಉಪಸಮಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಅಧಿಕಾರಿಗಳೊಂದಿಗೆ ಸಭ್ಯತೆಯಿಂದ ವರ್ತಿಸಬೇಕು. ನಾಡಹಬ್ಬದಲ್ಲಿ ಯಾವುದೇ ಅಹಿತಕರ ಘಟನೆಗೆ ಎಡೆಮಾಡಿಕೊಡದಂತೆ ಒಟ್ಟಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಅವರು ದಸರಾ ಲಾಂಛನವನ್ನು ಬಿಡುಗಡೆ ಮಾಡಿದರು.

ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್ ಅವರು ಈ ಉಪಸಮಿತಿಗಳ ಕಾರ್ಯಾಧ್ಯಕ್ಷರ ಹೆಸರುಗಳನ್ನು ಪ್ರಕಟಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಎನ್.ಅಜಯ್ ನಾಗಭೂಷಣ್, ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಎಲ್.ಸುಧೀರ್, ವಿಧಾನ ಪರಿಷತ್ ಸದಸ್ಯ ಸಿದ್ದರಾಜು, ವಿಧಾನ ಪರಿಷತ್ ಸದಸ್ಯೆ ತಾರಾ, ಉಪಮೇಯರ್ ಮಹದೇವಪ್ಪ, ಮುಡಾ ಆಯಕ್ತ ಸಿ.ಜಿ.ಬೆಟಸೂರ ಮಠ ಇತರರು ಇದ್ದರು.

ವಿವಿಧ ಉಪಸಮಿತಿಗಳ ಕಾರ್ಯಾಧ್ಯಕ್ಷರು, ಅಧ್ಯಕ್ಷ, ಉಪಾಧ್ಯಕ್ಷರು
 

ಸಾಂಸ್ಕೃತಿಕ ದಸರಾ ಉಪಸಮಿತಿ: ಕಾರ್ಯಾಧ್ಯಕ್ಷರು- ಮುಡಾ ಆಯುಕ್ತ ಸಿ.ಜಿ.ಬೆಟಸೂರ ಮಠ, ಅಧ್ಯಕ್ಷರು- ಹೇಮಂತ್‌ಕುಮಾರ್ ಉಪಾಧ್ಯಕ್ಷರು-ಚೇತನ್, ಎಸ್. ಶ್ರೀನಿವಾಸ್, ಬದ್ರಿ ಭೂಷಣ್
ದಸರಾ ಸಾಹಸ ಕ್ರೀಡಾ ಉಪಸಮಿತಿ: ಕಾರ್ಯಾಧ್ಯಕ್ಷರು- ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್.ನಟರಾಜ್, ಅಧ್ಯಕ್ಷರು- ಮಹದೇವ್ ನಂದೀಶ್, ಉಪಾಧ್ಯಕ್ಷರು- ರಾಮಚಂದ್ರ, ಎಸ್.ಆನಂದ್, ಎಸ್.ಹೇಮಂತ್

ದಸರಾ ಪ್ರವಾಸೋದ್ಯಮ ಉಪಸಮಿತಿ: ಕಾರ್ಯಾಧ್ಯಕ್ಷರು- ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಶಿವಲಿಂಗಪ್ಪ, ಅಧ್ಯಕ್ಷರು-ಡಾ.ತಿಮ್ಮಯ್ಯ, ಉಪಾಧ್ಯಕ್ಷರು: ಎಂ.ಮಹದೇವ, ಮಲ್ಲಿಕಾರ್ಜುನ, ಪ್ರಶಾಂತ್
ಕಾವಾ ದಸರಾ ಉಪಸಮಿತಿ: ಕಾರ್ಯಾಧ್ಯಕ್ಷರು- ಕಾವಾ ಡೀನ್ ವಿ.ಎ.ದೇಶಪಾಂಡೆ, ಅಧ್ಯಕ್ಷರು- ಕಮಲಮ್ಮ, ಉಪಾಧ್ಯಕ್ಷರು- ಕೃಷ್ಣಮೂರ್ತಿ, ನಾಗರಾಜು, ಕೆ.ಪದ್ಮನಾಭರಾವ್

ದಸರಾ ದರ್ಶನ ಉಪಸಮಿತಿ: ಕಾರ್ಯಾಧ್ಯಕ್ಷ-ಕೆಎಸ್‌ಆರ್‌ಟಿಸಿ ಅಧಿಕಾರಿ ಪುಟ್ಟೇಗೌಡ, ಅಧ್ಯಕ್ಷರು- ಸುನಂದರಾಜ್, ಉಪಾಧ್ಯಕ್ಷರು- ಕಿರಣ್ ಕುಮಾರ್, ಸಿದ್ದಮಲ್ಲಪ್ಪ (ಕಿಟ್ಟಿ), ಮಲ್ಲಿಕಾರ್ಜುನಪ್ಪ

ದಸರಾ ಆಹಾರ ಮೇಳ ಉಪಸಮಿತಿ: ಕಾರ್ಯಾಧ್ಯಕ್ಷರು: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕಿ ಕುಮುದ. ಅಧ್ಯಕ್ಷರು- ರಾಜೇಂದ್ರ, ಉಪಾಧ್ಯಕ್ಷರು- ಮೈನಾ ಗೋಪಾಲ್ ಕೃಷ್ಣ, ಶಿವರಾಜಪ್ಪ, ಗೋಪಾಲಕೃಷ್ಣ

ರೈತ ದಸರಾ ಉಪಸಮಿತಿ: ಕಾರ್ಯಾಧ್ಯಕ್ಷರು- ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಯ್ಯ, ಅಧ್ಯಕ್ಷರು- ನಾಗರಾಜ ಮಲ್ನಾಡಿ ಉಪಾಧ್ಯಕ್ಷರು- ದೇವರಾಜು , ಎಂ.ಇ.ಮಂಜುನಾಥ, ಶಿವನಂಜಪ್ಪ

ದಸರಾ ಸ್ಥಳಾವಕಾಶ ಉಪಸಮಿತಿ: ಕಾರ್ಯಾಧ್ಯಕ್ಷರು- ಹೆಚ್ಚುವರಿ ಜಿಲ್ಲಾಧಿಕಾರಿ ನಾಗಾನಾಯಕ್, ಅಧ್ಯಕ್ಷರು- ನಿಂಗಯ್ಯ. ಉಪಾಧ್ಯಕ್ಷರು-ಕೆ.ಶಿವಾನಂದ್ ಎ.ಜಿ.ತಮ್ಮಯ್ಯ

ದಸರಾ ಸ್ತಬ್ದಚಿತ್ರ ಉಪಸಮಿತಿ: ಕಾರ್ಯಾಧ್ಯಕ್ಷರು- ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಭಾರತಿ. ಅಧ್ಯಕ್ಷರು- ಸೋಮಸುಂದರ್ ಉಪಾಧ್ಯಕ್ಷರು-ಪುಟ್ಟರಾಜು, ಸಿ.ಮಹೇಶ್, ಸುರೇಶ್

ದಸರಾ ಅಲಂಕಾರ ಉಪಸಮಿತಿ: ಕಾರ್ಯಾಧ್ಯಕ್ಷರು-ಪಾಲಿಕೆ ಆಯುಕ್ತ ಡಾ.ಎಂ.ಆರ್.ರವಿ. ಅಧ್ಯಕ್ಷರು- ಶೇಷಯ್ಯ. ಉಪಾಧ್ಯಕ್ಷರು- ಧರ್ಮಸಿಂಗ್, ಮಹೇಶ್ ರಾಜ್ ಅರಸ್.


ದಸರಾ ಮೆರವಣಿಗೆ ಉಪಸಮಿತಿ: ಕಾರ್ಯಾಧ್ಯಕ್ಷರು; ಡಿಸಿಪಿ ಬಸವರಾಜ ಮಾಲಗತ್ತಿ, ಅಧ್ಯಕ್ಷರು- ಮೈಸೂರು ಪೊಲೀಸ್ ಕಮಿಷನರ್ ಕೆ.ಎಲ್.ಸುಧೀರ್.  ಉಪಾಧ್ಯಕ್ಷರು- ಸತೀಶ್, ವಿ.ಜಿ.ಅಪ್ಪಾಜಿಗೌಡ, ಎಸ್.ಕೆ.ದಿನೇಶ್.
ದಸರಾ ಯುವ ಸಂಭ್ರಮ ಉಪಸಮಿತಿ: ಕಾರ್ಯಾಧ್ಯಕ್ಷರು- ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್. ನಟರಾಜ್. ಅಧ್ಯಕ್ಷರು- ಬಿ.ವಿ.ಮಂಜುನಾಥ, ಉಪಾ ಧ್ಯಕ್ಷರು-ಕೆ.ಆರ್.ಚಿದಂಬರ, ಮಂಜುನಾಥ, ಗೀತಾಶ್ರೀ.
ಯೋಗ ದಸರಾ ಉಪಸಮಿತಿ: ಕಾರ್ಯಾಧ್ಯಕ್ಷರು- ಜಿಲ್ಲಾ ಆಯುಷ್ ಅಧಿಕಾರಿ ಡಾ.ನಾಗೇಶ್, ಅಧ್ಯಕ್ಷರು-ವಚನಾನಂದ ಸ್ವಾಮೀಜಿ, ಉಪಾಧ್ಯಕ್ಷರು- ಮಮತಾರಾವ್ ಕದಂ, ಪಿ.ಎಸ್.ಗಣೇಶ್ ಎಚ್.ಪಿ. ರವಿಶಂಕರ್.

ದಸರಾ ಸ್ವಾಗತ ಉಪಸಮಿತಿ: ಕಾರ್ಯಾಧ್ಯಕ್ಷರು- ಮಹಾನಗರ ಪಾಲಿಕೆ ಆಯುಕ್ತ ಡಾ.ಎಂ.ಆರ್.ರವಿ, ಅಧ್ಯಕ್ಷರು- ಮೇಯರ್ ರಾಜೇಶ್ವರಿ. ಉಪಾಧ್ಯಕ್ಷರು- ಎಂ.ಬಸವರಾಜಪ್ಪ, ಅಣ್ಣಯ್ಯನಾಯಕ, ವಿ.ಬಾಲಸುಬ್ರಹ್ಮಣ್ಯ.
ಕ್ರೀಡಾ ದಸರಾ ಉಪಸಮಿತಿ: ಕಾಯಾಧ್ಯಕ್ಷರು- ಯುವಜನಸೇವೆ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಸುರೇಶ್. ಅಧ್ಯಕ್ಷರು- ಎಂ.ಎ.ಮೋಹನ್ ಕುಮಾರ್ ಉಪಾಧ್ಯಕ್ಷರು- ಪರೀಕ್ಷಿತ್ ರಾಜ್ ಅರಸ್, ಎನ್.ವಾಣೀಶ್ ಕುಮಾರ್, ಕೆ.ಗುರು.

ಕವಿಗೋಷ್ಠಿ ಉಪಸಮಿತಿ: ಕಾರ್ಯಾಧ್ಯಕ್ಷರು- ಕೆಎಸ್‌ಒಯು ಕುವೆಂಪು ಸಂಶೋಧನಾ ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಎ.ರಂಗಸ್ವಾಮಿ. ಅಧ್ಯಕ್ಷರು- ಮಲ್ಲಿಕಾರ್ಜುನ ಮೊರಬದ. ಉಪಾಧ್ಯಕ್ಷರು- ಶಿವಲಿಂಗಸ್ವಾಮಿ, ಸಿ.ಆರ್.ಉಮಾ, ಎನ್.ಕೆ.ಪ್ರಸಾದ್.

ಧಾರ್ಮಿಕ ದಸರಾ ಸಮಿತಿ: ಕಾರ್ಯಾಧ್ಯಕ್ಷರು- ಜಲಾನಯನ ಅಭಿವೃದ್ಧಿ ಅಧಿಕಾರಿ ತಿಪ್ಪೇಶ್. ಅಧ್ಯಕ್ಷರು- ಭಾಗ್ಯ ಶಿವಮೂರ್ತಿ ಉಪಾಧ್ಯಕ್ಷರು-ಜೆ.ಎಸ್.ರಮೇಶ್ ಕುಮಾರ್, ನಿಂಗರಾಜು, ಎಂ.ಎಸ್.ನಾಗರಾಜ್ ಗುಪ್ತಾ.
ದೀಪಾಲಂಕಾರ ಉಪಸಮಿತಿ: ಕಾರ್ಯಾಧ್ಯಕ್ಷರು- ಸೆಸ್ಕ್ ಅಧೀಕ್ಷಕ ಎಂಜಿನಿಯರ್ ಬಿ.ವೈರ‌್ಮುಡಿ ಅಧ್ಯಕ್ಷರು- ಟಿ.ರಮೇಶ್. ಉಪಾಧ್ಯಕ್ಷರು- ಪಿ.ಜಿ.ರವಿ , ದಾಸಪ್ರಕಾಶ್, ಜಯಂತ್.

ಕುಸ್ತಿ ಉಪಸಮಿತಿ: ಕಾರ್ಯಾಧ್ಯಕ್ಷರು- ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮೋಹನ್ ರೆಡ್ಡಿ. ಅಧ್ಯಕ್ಷರು- ಪೈಲ್ವಾನ್ ಗಿರಿಧರ್. ಉಪಾಧ್ಯಕ್ಷರು- ಪೈಲ್ವಾನ್ ಕೆ.ದೇವರಾಜ್, ಪೈಲ್ವಾನ್ ಹಾಲಿನ ಪುಟ್ಟೇಗೌಡ, ಎಸ್.ಕೆ. ಲಕ್ಷ್ಮಣ್ ಸಿಂಗ್.
ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ: ಕಾಯಾಧ್ಯಕ್ಷರು- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ಆರ್.ವಿಜಯ್. ಅಧ್ಯಕ್ಷರು- ವಿದ್ಯಾ ಅರಸ್. ಉಪಾಧ್ಯಕ್ಷರು- ಮಂಗಳ ಸೋಮಶೇಖರ್, ತೇಜಾ ರಾಘವೇಂದ್ರ, ಡಾ.ಗುರುರಾಜ್.

ದಸರಾ ಭಜನಾ ಮಂಡಳಿ ಉಪಸಮಿತಿ: ಕಾಯಾಧ್ಯಕ್ಷರು- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಅಣ್ಣೇಗೌಡ. ಅಧ್ಯಕ್ಷರು- ರೇವತಿ. ಉಪಾಧ್ಯಕ್ಷರು-    ಎಚ್.ವಿ.ನಟರಾಜ್, ಜಿ.ಸಿ.ಪುಟ್ಟಸ್ವಾಮಿ, ರಾಜೇಶ್ ಬೋರೆ.

ದಸರಾ ಸ್ವಚ್ಛತಾ ಉಪಸಮಿತಿ: ಕಾರ್ಯಾಧ್ಯಕ್ಷರು- ನಾಗರಾಜ್. ಅಧ್ಯಕ್ಷರು- ಪುರುಷೋತ್ತಮ್. ಉಪಾಧ್ಯಕ್ಷರು-ರಾಜಶೇಖರ, ಶರತ್ ಸತೀಶ್, ಎಂ.ವಡಿವೇಲು.

ದಸರಾ ಪ್ರಚಾರ ಉಪಸಮಿತಿ: ಕಾರ್ಯಾಧ್ಯಕ್ಷರು- ಅಬಕಾರಿ ಉಪ ಆಯುಕ್ತ ಮಂಜುನಾಥ್,  ಅಧ್ಯಕ್ಷರು- ಸಿ.ಕೆ.ಮಹೇಂದ್ರ. ಉಪಾಧ್ಯಕ್ಷರು- ಡಾ.ಚಿದಾನಂದ, ಭಾನುಪ್ರಕಾಶ, ಜಗನ್ನಾಥ ಹೆಗ್ಡೆ.

ಮನೆಮನೆ ದಸರಾ ಉಪಸಮಿತಿ: ಕಾರ್ಯಾಧ್ಯಕ್ಷರು- ಪಾಲಿಕೆ ಉಪಆಯುಕ್ತ-ಧರ್ಮಪ್ಪ. ಅಧ್ಯಕ್ಷರು- ಮೇಯರ್ ರಾಜೇಶ್ವರಿ. ಉಪಾಧ್ಯಕ್ಷರು- ಉಪಮೇಯರ್ ಮಹದೇವಪ್ಪ, ರಾಮಪ್ರಸಾದ್, ರವೀಂದ್ರ ಸ್ವಾಮಿ.

ದಸರಾ ಚಲನಚಿತ್ರ ಉಪಸಮಿತಿ: ಕಾರ್ಯಾಧ್ಯಕ್ಷರು- ವಾರ್ತಾ ಮತ್ತು ಪ್ರಚಾರ ಇಲಾಖೆ ಉಪನಿರ್ದೇಶಕ ಪ್ರಕಾಶ್. ಅಧ್ಯಕ್ಷರು- ವಿಧಾನ ಪರಿಷತ್ ಸದಸ್ಯೆ ತಾರಾ. ಉಪಾಧ್ಯಕ್ಷರು- ಬಲರಾಮ್, ಮುರಳಿಧರ ಹಾಲಪ್ಪ, ರವಿಕುಮಾರ್.

ದಸರಾ ರಾಷ್ಟ್ರೀಯ ಕ್ರೀಡಾ ಉಪಸಮಿತಿ: ಕಾರ್ಯಾಧ್ಯಕ್ಷರು- ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಸುರೇಶ್. ಅಧ್ಯಕ್ಷರು- ಕೆ.ಸುಂದರ್  ಉಪಾಧ್ಯಕ್ಷರು-ಎನ್.ಪ್ರಕಾಶ್, ಪುರುಷೋತ್ತಮ, ಧ್ರುವಕುಮಾರ್.
ವಿದ್ವತ್ ದಸರಾ ಉಪಸಮಿತಿ: ಕಾರ್ಯಾಧ್ಯಕ್ಷರು- ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಎನ್.ಅಜಯ್ ನಾಗಭೂಷಣ್ ಅಧ್ಯಕ್ಷರು- ಡಾ.ಸೆಲ್ವಂ ಪಿಳ್ಳೈ ಅಯ್ಯಂಗಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT