ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಇಲ್ಲದ ಜಾಗಕ್ಕೆ ರೂ 4.8 ಲಕ್ಷ ಮಂಜೂರು!

ಶೌಚಾಲಯ ಜಾಗ ಖರೀದಿ ಹೆಸರಲ್ಲಿ ವಂಚನೆ
Last Updated 14 ಸೆಪ್ಟೆಂಬರ್ 2013, 6:40 IST
ಅಕ್ಷರ ಗಾತ್ರ

ಕುಷ್ಟಗಿ: ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕಾಗಿ ದಾಖಲೆಯೇ ಇಲ್ಲದೇ ಜಾಗ ಖರೀದಿಸಿದ ಹೆಸರಲ್ಲಿ 4.8 ಲಕ್ಷ ರೂಪಾಯಿ ಮಂಜೂರು ಮಾಡಿದ ಪ್ರಕರಣ ಪುರಸಭೆಯಲ್ಲಿ ನಡೆದಿದೆ.

2011–12ನೇ ಹಣಕಾಸು ವರ್ಷದ ಲೆಕ್ಕಪತ್ರ ಶಾಖೆಯಲ್ಲಿ ಸದರಿ ಹಣ ಖರ್ಚಾಗಿರುವ ಬಗ್ಗೆ ದಾಖಲೆ ಗಳಿವೆ. ಆದರೆ ಕಂದಾಯ ವಿಭಾಗದಲ್ಲಿ ಜಾಗ ಖರೀದಿ ಪತ್ರ, ನೋಂದಣಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಲಭ್ಯ ಇಲ್ಲ ಎಂದು ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿದಾರರಿಗೆ ಪುರಸಭೆ ತಿಳಿಸಿದೆ.

ಪಟ್ಟಣದ ಬುಡನ್‌ಸಾಬ್‌ ತಂದು ರಾಜಾಸಾಬ್‌ ಇವರ ಹೆಸರಿನಲ್ಲಿ ರೂ 2.40 ಲಕ್ಷ ಹಣಕ್ಕೆ 2011ರ ಮೇ 27ರಂದು ಖಜಾನೆ ಚೆಕ್‌ (ನಂ 183407) ಮತ್ತು  ಮುಸ್ತಾಫಾ ತಂದಿ ಬಾಷುಸಾಬ್‌ ಎಂಬುವವರ ಹೆಸರಿನಲ್ಲಿಯೂ ಅಷ್ಟೇ ಮೊತ್ತದ ಚೆಕ್‌ (183408) ಅನ್ನು ನೀಡಲಾಗಿದೆ ಎಂದು ಪುರಸಭೆ ಹೇಳಿದೆ. ಆದರೆ ಈ ವ್ಯಕ್ತಿಗಳು ಯಾರು, ಜಾಗ ಎಲ್ಲಿದೆ ಎಂಬ ಯಾವುದೇ ಮಾಹಿತಿ ಇಲ್ಲದಿರುವುದು ಹಲವು ಅನುಮಾನ ಗಳಿಗೆ ಕಾರಣವಾಗಿದೆ.

ಈ ಕುರಿತು ವಿವರಿಸಿದ ಪಟ್ಟಣದ ಮಾಹಿತಿ ಹಕ್ಕು ಕಾಯರ್ಕರ್ತರಾದ ಮಹ್ಮದ್‌ ಬುರಾನ್‌ ಮತ್ತು ರವಿಪ್ರಕಾಶ ಕೆಳಗಡೆ, ಇಂಥ ಅನೇಕ ಪ್ರಕರಣಗಳು ಕಳೆದ ಎರಡು ವರ್ಷದ ಅವಧಿಯಲ್ಲಿ ನಡೆದಿದ್ದು, ಇದುವರೆಗೆ   ಯಾರ ವಿರುದ್ಧವೂ ಕ್ರಮ ಜರುಗಿಸಿಲ್ಲ. ಈ ಬಗ್ಗೆ ಇಷ್ಟರಲ್ಲೇ ಜಿಲ್ಲಾಧಿಕಾರಿ ಯನ್ನು ಭೇಟಿ ಮಾಡಿ ದೂರು ಸಲ್ಲಿಸುವುದಾಗಿ ತಿಳಿಸಿದರು.

ಪುರಸಭೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವು ದನ್ನು ಜಿಲ್ಲಾಡಳಿತ ಪತ್ತೆಮಾಡಿದೆ. ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಸಿ ನೆಟ್ಟಿರುವುದಾಗಿ ಮತ್ತು ಪಟ್ಟಣದ ರಸ್ತೆ ಮಧ್ಯೆ ಲಯನ್ಸ್‌ ಕ್ಲಬ್‌ ನೆಟ್ಟಿರುವ ಸಸಿಗಳ ಹೆಸರಿನಲ್ಲೂ ರೂ 5 ಲಕ್ಷ ಹಣ ದುರ್ಬಳಕೆ ಮಾಡಿಕೊಂಡಿರುವುದು ಸೇರಿದಂತೆ ಪುರಸಭೆಯಲ್ಲಿನ ಅನೇಕ ಹಗರಣಗಳ ಮೇಲೆ ‘ಪ್ರಜಾವಾಣಿ’ ಈ ಹಿಂದೆ ವರದಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT