ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಚುನವಣೆಯಾಗಲಿದೆ: ಸಲಾದಪುರ

Last Updated 26 ಏಪ್ರಿಲ್ 2013, 6:29 IST
ಅಕ್ಷರ ಗಾತ್ರ

ಕೆಂಭಾವಿ: ಈ ಬಾರಿಯ ಚುನಾವಣೆಯು 66 ವರ್ಷಗಳ ನಂತರ ದಾಖಲೆ ಬರೆಯುವ ಚುನಾವಣೆಯಾಗಲಿದೆ ಎಂದು ಜೆಡಿಎಸ್ ಅಭ್ಯರ್ಥಿ ಶರಣಪ್ಪ ಸಲಾದಪುರ ಹೇಳಿದರು.

ಪಟ್ಟಣದ ಝೇಂಡಾಕಟ್ಟೆಯಲ್ಲಿ ಮತಯಾಚಿಸಿ ಅವರು ಮಾತನಾಡಿದರು. ನಾನು ಶೋಷಣೆಗೆ ಒಳಗೊಂಡ ನಾಯಕನಾಗಿ ಬೆಳೆದಿದ್ದೇನೆಯೇ ಹೊರತು ರಾಜಕೀಯ ಹಿನ್ನೆಲೆಯಿಂದ ಬಂದವನಲ್ಲ. ನನಗೆ ನೀವೆ ತಂದೆ ತಾಯಿ. ಕಳೆದ 35 ವರ್ಷಗಳಿಂದ ಜನರ ಪರ ಹೋರಾಟ ಮಾಡಿ ಜನರಿಗಾಗಿ ಎರಡು ವರ್ಷ ಜೈಲು ವಾಸವನ್ನೂ ಅನುಭವಿಸಿದ್ದೇನೆ. ಜನರಿಗೆ ಸೇವಕನಾಗುವುದಕ್ಕೆ, ಅವರ ಧ್ವನಿಯಾಗಿ ಬರಬೇಕೆಂಬ ಆಸೆ ಇದೆ ಈ ಬಾರಿ ಆಶೀರ್ವಾದ ನೀಡಬೇಕು ಎಂದು ಮನವಿ ಮಾಡಿದರು.

ಮತಕೇತ್ರದಲ್ಲಿ 1.05 ಲಕ್ಷ ಹಿಂದುಳಿದ ಜನಾಂಗದ ಮತದಾರರಿದ್ದು, 83 ಸಾವಿರ ಮೇಲ್ವರ್ಗದ ಮತದಾರರಿದ್ದಾರೆ. ಹಿಂದುಳಿದ ಜನಾಂಗದ ಪರವಾಗಿ ನಾನೊಬ್ಬನೇ ಅಭ್ಯರ್ಥಿಯಾಗಿದ್ದು, ಬದುಕಿನುದ್ದಕ್ಕೂ ನ್ಯಾಯ ನೀತಿಯಿಂದ ನಡೆದು ಬಂದಿದ್ದೇನೆ. ಗೆದ್ದು ಬಂದರೆ 66 ವರ್ಷದ ನಂತರ ಶಹಾಪುರ ಕ್ಷೇತ್ರಕ್ಕೆ ಸ್ವತಂತ್ರ ದೊರೆತಂತಾಗುತ್ತದೆ. ದರ್ಶನಾಪೂರ ಹಾಗೂ ಶಿರವಾಳ ಇಬ್ಬರೂ ವೈರಿಗಳಲ್ಲ.

ಚುನಾವಣೆ ಸಂದರ್ಭದಲ್ಲಿ ವೈರಿಗಳಾಗಿ ನಂತರ ಒಂದಾಗಿ ಈ ಕ್ಷೇತ್ರವನ್ನು ಆಳುತ್ತಿದ್ದಾರೆ. ಇಂಥಾ ಹೀನ ಸ್ಥಿತಿಯ ರಾಜಕೀಯ ಮಡುತ್ತಿರುವ ಅವರ ದಬ್ಬಾಳಿಕೆಯ ರಾಜಕೀಯಕ್ಕೆ ಕೊನೆ ಹಾಡುವದಕ್ಕೆ ಎಲ್ಲ ಯುವಕರು ಕಂಕಣಬದ್ಧರಾಗಿ ನಿಂತಿದ್ದಾರೆ ಎಂದು ಹೇಳಿದರು.

ಮೈಲಾರಪ್ಪ ಸಗರ, ಮಲ್ಲಿನಾಥಗೌಡ ಪೊಲೀಸ್‌ಪಟೀಲ, ಮಹ್ಮದ್ ಗೌಸ್, ಶರಣು ಸಗರ, ಮಲ್ಲಣ್ಣ ಪೂಜಾರಿ, ಖಾದರ ಬಾಷಾ ತಾಳಿಕೋಟಿ, ಶಿಲಾರಸಾಬ ಝೇಂಡಾಕಟ್ಟಿ, ಜಾಫರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT