ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಸತ್ಯನಾರಾಯಣ ದಸರಾ ಶ್ರೀ

Last Updated 16 ಅಕ್ಟೋಬರ್ 2012, 5:25 IST
ಅಕ್ಷರ ಗಾತ್ರ

ಮೈಸೂರು: ದಾವಣಗೆರೆಯ ಆರ್.ಟಿ. ಸತ್ಯನಾರಾಯಣ ಸೋಮವಾರ ರಾತ್ರಿ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ `ದಸರಾ ಶ್ರೀ~ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

80ಕೆಜಿ ಮೇಲ್ಪಟ್ಟವರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಸತ್ಯನಾರಾಯಣ ದಸರಾ ಶ್ರೀ ಪ್ರಶಸ್ತಿಯೊಂದಿಗೆ ಹತ್ತು ಸಾವಿರ ನಗದು ಮತ್ತು ಟ್ರೋಫಿ ಗಳಿಸಿದರು. ಬೆಸ್ಟ್ ಪೋಜರ್ ಗೌರವವನ್ನು ಬೆಳಗಾವಿಯ ರಾಜಕುಮಾರ ದುರ್ಗುಡೆ ಪಡೆದರು.

ವಿಜೇತರಿಗೆ ಸಚಿವ ಅಪ್ಪಚ್ಚು ರಂಜನ್ ಪ್ರಶಸ್ತಿ ವಿತರಿಸಿದರು. ಸಂಚಾಲಕ ಅಂತೋಣಿ ಮೋಸೆಸ್, ಗುರುರಾಜ್ ಮತ್ತಿತರರು ಹಾಜರಿದ್ದರು.

ಫಲಿತಾಂಶಗಳು: 55ಕೆಜಿ ವಿಭಾಗ: ತೈಸಿಫ್ ಮುಜಾವರ್ (ಬೆಳಗಾವಿ)-1, ರಾಜಕುಮಾರ್ ದುರ್ಗುಡೆ (ಬೆಳಗಾವಿ)-2, ಎಸ್. ಬಾಲಕೃಷ್ಣ (ಬೆಂಗಳೂರು)-3; 60 ಕೆಜಿ: ಸ್ಟ್ಯಾನ್ಲಿ ಆಂತೋನಿ (ಬೆಂಗಳೂರು)-1, ಉಮೇಶ್ (ಬೆಳಗಾವಿ)-2, ಕೆ.ಎಂ. ಸಂದೇಶ್ (ಮೈಸೂರು)-3; 65ಕೆಜಿ: ಕೆ.ಆರ್. ರಮೇಶ್ (ಮಂಗಳೂರು)-1, ಜಿಲಾನಿ (ದಾವಣಗೆರೆ)-2, ಪ್ರತಾಪ್ ಕುಲಕಂದೀಕರ್ (ಬೆಳಗಾವಿ)-3; 70ಕೆಜಿ: ವಿಜಯಗೌಡ (ಬೆಳಗಾವಿ)-1, ಪ್ರತಾಪ್ ಬೆಟಸೂರು-2, ಅತೀಶ್ ಪೌಷ್ (ಬೆಳಗಾವಿ)-3; 75ಕೆಜಿ: ಕಿಶೋರ್ ಚೌಗಲೆ (ಬೆಳಗಾವಿ)-1, ಪ್ರಕಾಶ್ ಪೂಜಾರಿ (ಧಾರವಾಡ)-2, ಸಂದೀಪಕುಮಾರ್ (ಬೆಂಗಳೂರು)-3; 80ಕೆಜಿ: ಅನಂತ ಪಾಟೀಲ (ಹುಬ್ಬಳ್ಳಿ)-1, ಹೇಮಂತಕುಮಾರ್ (ಮೈಸೂರು)-2, ರೋಮಿ ದಂತಿ (ಉಡುಪಿ0-3; 80 ಕೆಜಿ ಮೇಲ್ಪಟ್ಟು: ಆರ್.ಟಿ. ಸತ್ಯನಾರಾಯಣ (ದಾವಣಗೆರೆ)-1, ಮನೋಜಕುಮಾರ್(ಬೆಂಗಳೂರು)-2, ಕೃಷ್ಣ ಆರ್. ಚಿಕ್ಕತುಂಬಳ (ಧಾರವಾಡ)-3;
ಫಲಿತಾಂಶ: ದಸರಾಶ್ರೀ: ಆರ್.ಟಿ. ಸತ್ಯನಾರಾಯಣ (ದಾವಣಗೆರೆ). ಬೆಸ್ಟ್ ಪೋಜರ್: ರಾಜಕುಮಾರ್ ದುರ್ಗುಡೆ (ಬೆಳಗಾವಿ).
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT