ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆಯಲ್ಲಿ ಟೆನಿಸ್ ಅಂಬೆಗಾಲು

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ದಾವಣಗೆರೆ ನಗರದಲ್ಲಿ ರಾಷ್ಟ್ರಮಟ್ಟದ ಟೆನಿಸ್ ಪ್ರತಿಭೆಗಳು ಚಿಗುರೊಡೆದಿವೆ. ಹವ್ಯಾಸಿಗಳು, ಆಸಕ್ತರು ಸೇರಿ ಕಟ್ಟಿದ ಟೆನಿಸ್  ಸಂಸ್ಥೆಗಳ ಮೂಲಕ ಬೆಳೆದ ಕೆಲವರು ಆ ಕ್ರೀಡೆಯನ್ನೇ ವೃತ್ತಿಯನ್ನಾಗಿಸಿಕೊಂಡು ಮುಂದುವರಿದಿದ್ದಾರೆ. ನಗರದವರೇ ಆದ ಅಲೋಕ್, ಅಪೂರ್ವಾ, ರಿಭವ್, ತೇಜಸ್ವಿನಿ ಕಳೆದ ಒಂದೆರಡು ವರ್ಷಗಳಿಂದ ರಾಷ್ಟ್ರಮಟ್ಟದ ಪಂದ್ಯಗಳಲ್ಲಿ ಆಡುತ್ತಿದ್ದಾರೆ.

2002ರಲ್ಲಿ ಇಲ್ಲಿ ಎಟಿಪಿ ಅಂತರರಾಷ್ಟ್ರೀಯ ಮಟ್ಟದ ಹೊನಲುಬೆಳಕಿನ ಟೆನಿಸ್ ಪಂದ್ಯ ನಡೆದು ನಗರವು ದೇಶದ ಟೆನಿಸ್ ವಲಯದ ಗಮನ ಸೆಳೆದಿತ್ತು.

ಸದ್ಯ ನಗರದ ವಿವಿಧ ಭಾಗಗಳಲ್ಲಿ ಟೆನಿಸ್ ಅಭ್ಯಾಸ ಮಾಡುವವರು ಕಂಡುಬರುತ್ತಾರೆ. ಆದರೆ, ಅದಕ್ಕೊಂದು ವೃತ್ತಿಪರ ರೂಪ ಬಂದಿಲ್ಲ. ನಗರದ ಆಫೀಸರ್ಸ್ ಕ್ಲಬ್, ದಾವಣಗೆರೆ ಕ್ಲಬ್, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಆಟ ಆಡುವುದು ಇದೆಯಾದರೂ ಕೆಲವರಿಗಷ್ಟೇ ಸೀಮಿತವಾಗಿಬಿಟ್ಟಿದೆ.

ನಗರದ ಹೈಸ್ಕೂಲ್ ಮೈದಾನದಲ್ಲಿ ಅತ್ಯಾಧುನಿಕ ಟೆನಿಸ್ ಕೋರ್ಟ್ ಸೂಕ್ತ ನಿರ್ವಹಣೆ ಇಲ್ಲದೇ ಸೊರಗುತ್ತಿದೆ. ಇಲ್ಲಿರುವ ನಾಲ್ಕು ಅಂಕಣಗಳ ಪೈಕಿ ಎರಡನ್ನು ಸಿಂಥೆಟಿಕ್, ಮತ್ತೆ ಎರಡನ್ನು ಮಣ್ಣಿನ ಅಂಕಣವನ್ನಾಗಿ ಮಾಡಬೇಕು ಎಂಬುದು ಟೆನಿಸ್ ಪ್ರಿಯರ ಬಹುಕಾಲದ ಬೇಡಿಕೆ. ಇಲ್ಲಿ ಬಸವರಾಜ್ ಮತ್ತು ಮಹಾಂತೇಶ್ ಅವರು ಇಲ್ಲಿಗೆ ಬಂದಷ್ಟು ಮಂದಿಗೆ ತಮ್ಮಿಂದಾದಷ್ಟು ತರಬೇತಿ ನೀಡುತ್ತಿದ್ದಾರೆ.
 
ಡಾ.ಶ್ರೀಶೈಲ ಬ್ಯಾಡಗಿ, ಡಾ.ಸುಭಾಷ್ ಬೆನ್ನೂರು, ರಘುನಂದನ್ ಅಂಬರ್‌ಕರ್ ಸೇರಿದಂತೆ ಹಲವರು ಈ ಕ್ರೀಡೆಗೆ, ಕ್ರೀಡಾಂಗಣಕ್ಕೆ ಕಾಯಕಲ್ಪ ನೀಡುವಲ್ಲಿ ಮುಂದಾಗಿದ್ದಾರೆ.

ಆದರೂ ಮೈದಾನವನ್ನು ಅಂತರರಾಷ್ಟ್ರೀಯಮಟ್ಟಕ್ಕೆ ಮತ್ತೆ ತರಬೇಕಿದೆ. ಉತ್ತಮ ತರಬೇತಿದಾರರು ಬರಬೇಕಿದೆ. ಟೆನಿಸ್ ಬಗ್ಗೆ ಆಸಕ್ತಿ ವಹಿಸುವ ಜನಪ್ರತಿನಿಧಿಗಳು, ಆಡಳಿತಗಾರರು ಮುಂದೊಂದು ದಿನ ಇಲ್ಲಿ ಈ ಕ್ರೀಡೆಯ ಮೂಲಸೌಲಭ್ಯ ಅಭಿವೃದ್ಧಿ ಪಡಿಸಬಹುದು ಎಂದು ಇಲ್ಲಿನ ಟೆನಿಸ್ ಪ್ರಿಯರು ನಿರೀಕ್ಷಿಸುತ್ತಿದ್ದಾರೆ.

ಮೈಸೂರು, ಮಂಗಳೂರು ಮುಂತಾದ ನಗರಗಳಿಗೆ ಹೋಲಿಸಿದರೆ ಟೆನಿಸ್ ಇಲ್ಲಿ ಇನ್ನೂ ಶೈಶವಾವಸ್ಥೆಯಲ್ಲಿದೆ ಎಂದರೆ ಅತಿಶಯೋಕ್ತಿ ಎನಿಸದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT