ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಸ ನಿರಂತರ ಸಂಗೀತೋತ್ಸವ

Last Updated 21 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಶ್ರೀ ಸದ್ಗುರು ಮ್ಯೂಸಿಕ್ ಅಕಾಡೆಮಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಿಬಿಎಂಪಿ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಕಾರದೊಂದಿಗೆ ಇತ್ತೀಚೆಗೆ ದಿನವಿಡೀ ‘ದಾಸ ನಿರಂತರ ಸಂಗೀತೋತ್ಸವ’ ಹಮ್ಮಿಕೊಂಡಿತ್ತು. ವಿದುಷಿ ಸ್ನೇಹಾ ಹಂಪಿಹೊಳಿ ಅವರ ಕಂಠಸಿರಿಯಲ್ಲಿ ವಿಠ್ಠಲನ ಸ್ಮರಣೆಯಿಂದ ಉತ್ಸವ ಆರಂಭವಾಯಿತು. ನಂತರ ಶ್ರೀ ಸದ್ಗುರು ಮ್ಯೂಸಿಕ್ ಅಕಾಡೆಮಿ, ಸ್ವರ ಸಂಗೀತಾಲಯ, ಭಾರದ್ವಾಜ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ದಾಸ ಸಾಹಿತ್ಯವನ್ನು ಪ್ರಸ್ತುತಪಡಿಸಿದರು.

ನೃತ್ಯ ರೂಪಕಗಳು, ಮುಕುಂದ ಹಾವೇರಿ, ರಾಘವೇಂದ್ರ ಗುಡಿ, ಲತಾ ರಾಜೇಶ್ ಮುಂತಾದವರ ಗಾಯನಗಳು ಕೇಳುಗರನ್ನು ಸೆಳೆದವು. ವಿಶ್ವೇಶತೀರ್ಥರು, ಸಂತ ಭದ್ರಗಿರಿ ಅಚ್ಯುತದಾಸರು, ಪ್ರಹ್ಲಾದ್ ಗುರೂಜಿ ಹಾಜರಿದ್ದರು. ಎ.ಎಸ್. ಸದಾಶಿವಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಡಾ. ಶ್ಯಾಮಲಾ ಭಾವೆ, ರಾಜನಹಳ್ಳಿ ರಮಾನಂದ, ರಾಜೇಂದ್ರ ಪ್ರಸಾದ್, ವಿಠ್ಠಲರಾವ್ ಶೇಠ್, ಸೇನಾಪತಿ ಕಟಕೆ, ನರಸಿಂಹಮೂರ್ತಿ ಅವರನ್ನು ಸನ್ಮಾನಿಸಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT