ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಸರಹಳ್ಳಿ ತಂಡಕ್ಕೆ ಜಯ

Last Updated 23 ಜನವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ದಾಸರಹಳ್ಳಿ ಕೊಡವ ಸಂಘ ತಂಡದವರು ಇಲ್ಲಿ ಆರಂಭ ವಾದ ಬೆಂಗಳೂರು ಕೊಡವ ಸಮಾಜ ಆಶ್ರಯದ 8ನೇ ಕೊಡವ ಅಂತರ ಸಂಘ ಹಾಕಿ ಟೂರ್ನಿಯ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದರು.ಸುಲಿವಾನ್ ಪೊಲೀಸ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ದಾಸರಹಳ್ಳಿ ಕೊಡವ ಸಂಘ ಟೈಬ್ರೇಕರ್‌ನಲ್ಲಿ 9-8 ರಲ್ಲಿ ಕೆಂಗೇರಿ ಕೊಡವ ಸಂಘದ ವಿರುದ್ಧ ಜಯ ಪಡೆಯಿತು.

ಇತರ ಪಂದ್ಯಗಳಲ್ಲಿ ಪೊಮ್ಮಲೆ ಕೊಡವ ಸಂಘ, ಮಾರುತಿ ಸೇವಾ ನಗರ 6-3 ರಲ್ಲಿ ಯಲಹಂಕ ಕೊಡವ ಸಂಘ ವಿರುದ್ಧವೂ, ಬಾಣಸವಾಡಿ ಕೊಡವ ಸಂಘ 4-1 ರಲ್ಲಿ ಪ್ರಗತಿ ಕೊಡವ ಸಂಘ, ಕೆಂಪಾಪುರ ಎದುರೂ, ಸುಲ್ತಾನ್ ಪಾಳ್ಯ ಕೊಡವ ಸಂಘ 2-1 ರಲ್ಲಿ ನೆಲ್ಲಕ್ಕಿ ಕೊಡವ ಸಂಘ, ರಾಮಮೂರ್ತಿ ನಗರ ಮೇಲೂ ಜಯ ಪಡೆದವು.

ಬುಧವಾರ ನಡೆಯುವ ಪಂದ್ಯಗಳಲ್ಲಿ ಸ್ನೇಹಕೂಟ, ತಿಪ್ಪಸಂದ್ರ- ಕಾವೇರಿ ಕೊಡವ ಸಂಘ, ಕೆ.ಆರ್. ಪುರ, ಕೋರಮಂಗಲ ಕೊಡವ ಸಂಘ- ಇಂದಿರಾನಗರ ಕೊಡವ ಸಂಘ, ಲೋಪಮುದ್ರ ಕೊಡವ ಸಂಘ, ಮಡಿವಾಳ- ಸಂಜಯನಗರ ಕೊಡವ ಸಂಘ ಮತ್ತು ಬ್ರಹ್ಮಗಿರಿ ಕೊಡವ ಸಂಘ, ಮುರುಗೇಶ್‌ಪಾಳ್ಯ- ವಿಜಯನಗರ ಕೊಡವ ಸಂಘ ತಂಡಗಳು ಪರಸ್ಪರ ಪೈಪೋಟಿ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT