ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಸಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಮುಕುಟವಿದ್ದಂತೆ

Last Updated 10 ಫೆಬ್ರುವರಿ 2012, 6:50 IST
ಅಕ್ಷರ ಗಾತ್ರ

ಬಾದಾಮಿ: ಕನ್ನಡ ಸಾಹಿತ್ಯದ ಇತಿಹಾಸ ಪರಂಪರೆಯಲ್ಲಿ ದಾಸಸಾಹಿತ್ಯವು ಮುಕುಟವಿದ್ದಂತೆ. ದಾಸರು ರಚಿಸಿದ ಸುಳಾದಿ ಪದ್ಯಗಳು ಮಾನವನ ಅಂತರಂಗವನ್ನು ಶುದ್ಧಗೊಳಿಸುತ್ತವೆ ಎಂದು ಕೂಡ್ಲಿ ಆರ್ಯ ಅಕ್ಷೋಭ್ಯ ತೀರ್ಥ ಮಠಾಧೀಶ ರಘುವಿಜಯ ತೀರ್ಥ  ಶ್ರೀಪಾದಂಗಳು ನುಡಿದರು.

ಇಲ್ಲಿನ ವಿಶ್ವಮಧ್ವ ಮಹಾಪರಿಷತ್ ಹಾಗೂ ನಗರ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ರಾಘವೇಂದ್ರರಾಯರ ಮಠದಲ್ಲಿ  ಇತ್ತೀಚೆಗೆ  ಜರುಗಿದ ಪುರಂದರದಾಸರ ಪುಣ್ಯಸ್ಮರಣೋತ್ಸವ ಸಮಾರಂಭದ  ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಪುರಂದರದಾಸರು, ಜಗನ್ನಾಥ ದಾಸರು, ಗೋಪಾಲದಾಸರು, ಕನಕದಾಸರು ಹಾಗೂ ಪ್ರಸನ್‌ವೆಂಕಟದಾಸರು ರಚಿಸಿದ ಸಾಹಿತ್ಯದ ಅಧ್ಯಯನದಿಂದ ಮನಸ್ಸಿಗೆ ಶಾಂತಿ, ಸಮಾಧಾನ ಮತ್ತು ನೆಮ್ಮದಿ ಪಡೆಯಲು ಸಾಧ್ಯ ಎಂದು ಹೇಳಿದರು.

ದಾಸ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆಗಳಿವೆ.  ಮನುಷ್ಯ ತನ್ನ ಕಲ್ಮಶ ಭಾವನೆಗಳನ್ನು ತೊಡೆದು ಭಕ್ತಿಭಾವದಲ್ಲಿ ಮಿಂದುವಂತೆ ಮಾಡು ತ್ತವೆ ಎಂದು ಪಂ.ಬಿಂದಾಚಾರ್ಯ ನಾಗಸಂಪಗಿ ದಾಸ ಸಾಹಿತ್ಯ ಕುರಿತು ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಧ್ಯಾನ ಪ್ರಮೋದ ಪ್ರಶಸ್ತಿ ಪುರಸ್ಕೃತ ಪಂ.ಶ್ರಿನಿವಾಸಾಚಾರ್ಯ ಅವರನ್ನು ರಘುವಿಜಯ ತೀರ್ಥ ಶ್ರಿಗಳು ಸನ್ಮಾನಿ ಸಿದರು.

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದಲ್ಲಿ ಪುಸ್ತಕಗಳನ್ನು ವಿತರಿಸ ಲಾಯಿತು. ಐತಿಹಾಸಿಕ ನಗರಕ್ಕೆ ಪ್ರಥಮ ಬಾರಿಗೆ ಪುರಪ್ರವೇಶ ಕೈಕೊಂಡ ರಘುವೀರತೀರ್ಥ ಶ್ರಿಪಾದಂಗಳಿಗೆ ವಿಪ್ರಬಾಂಧವರು ವೇದಘೋಷದಿಂದ ಅದ್ದೂರಿಯಾಗಿ ರಾಘವೇಂದ್ರರಾಯರ ಮಠಕ್ಕೆ  ಬರ ಮಾಡಿಕೊಂಡರು.

ನಗರ ಘಟಕದ ಬ್ರಾಹ್ಮಣ ಸಂಘದ ಅಧ್ಯಕ್ಷ ವಿ.ಕೆ. ಧಾರವಾಡಕರ, ವಿಜಯೀಂದ್ರ ಇನಾಂದಾರ, ಅನಂತಾ ಚಾರ್ಯ ಗುಡಿ, ವಿಜಯೀಂದ್ರ ಮುಗಳಿ, ಎಚ್.ಬಿ. ಕುಲಕರ್ಣಿ, ಕೆ.ವಿ. ಕೆರೂರ, ವಿಜಯರಾವ್ ಕುಲಕರ್ಣಿ, ಬ್ರಾಹ್ಮಣ ಸಮಾಜ ಬಾಂಧವರು, ವಾಣಿ ಭಜನಾ ಮಂಡಳಿಯ    ಸದಸ್ಯರು   ಹಾಜರಿದ್ದರು.

ಡಾ.ವಿ.ವೈ. ಭಾಗವತ ಸ್ವಾಗತಿಸಿದರು. ಬಿ.ಎಸ್. ಮಾಹುಲಿ ಕಾರ್ಯಕ್ರಮ ನಿರೂಪಿಸಿದರು. ಎಂ.ವಿ. ಪಟ್ಟಣಗುಡಿ  ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT