ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿರಿಸಿನ ದನಿ: ಕಾಲು ಮುಚ್ಚಬೇಕೆ?

Last Updated 25 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಇವತ್ತೇನಾದರೂ ಇಂಥವರನ್ನು ಕಂಡಿರೇನು? ಹಳೆಯ ದಿರಿಸೆಂದು ಅನಿಸಿತೆ? ಖಂಡಿತ ಅನಿಸಿರಲಾರದು; ಕ್ಲಾಸಿಕ್ ಎಂದುಕೊಂಡಿರುತ್ತೀರಿ ಮನದಲ್ಲೇ.
 ಕಾಲನ್ನಪ್ಪಿದ ಸ್ಲ್ಯಾಕ್ಸ್ ಮೈ ಬಣ್ಣದಾದ್ದರೆ ತಪ್ಪೇನಿಲ್ಲ, ಆದರೆ ತೀರಾ ನಿಮ್ಮ ಚರ್ಮದ ವರ್ಣಛಾಯೆಯದ್ದೇ ಆದರೆ ದೂರದಿಂದ ನೋಡಿದವರಿಗೆ ಏನೂ ಹಾಕಿಲ್ಲ ಎಂಬಂತೆ ಕಂಡೀತು ಜೋಕೆ!

ಹಾಗೆಂದು  ಪ್ರಿಂಟ್ ಇರುವ ಟೈಟ್ಸ್ ಆದರೂ ವಿನ್ಯಾಸವನ್ನು ಗಮನಿಸಿಕೊಳ್ಳಿ. ಪ್ರಾಣಿಗಳ ಮೈಯ ಮೇಲಿನಂತೆ ಪೊರೆ ಇಲ್ಲವೆ ಚುಕ್ಕೆಗಳಿದ್ದರೆ ಹುಷಾರು. ಒಂದು ನಿರ್ದಿಷ್ಟ ವಿನ್ಯಾಸ ಪ್ರಕಾರ (ಪ್ಯಾಟರ್ನ್) ಇದ್ದರೆ ಮಾತ್ರ ಅದು ಚರ್ಮದ ಕಾಯಿಲೆಯಲ್ಲ ಎಂಬುದು ಖಚಿತವಾದೀತು! ಆದರೂ ಉದ್ದನೆ ಗೆರೆಗಳ ಡಿಸೈನ್ ಬೇಡ, ಕಾಲು ಗ್ರಿಲ್ಡ್ ಸ್ಯಾಂಡ್‌ವಿಚ್‌ನಂತೆ ಕಂಡೀತು ಜೋಕೆ. ಹಾಗೆ ನೋಡಿದರೆ ಡಿಸೈನೇ ಸಮಸ್ಯೆ. ಕಾಲಿಗ್ಯಾಕ್ರೀ ಬೇಕು ವಾಲ್ ಪೇಪರ್ರು?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT