ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ದೀಪ ಬೆಳಗುವುದರಿಂದ ಮಾನಸಿಕ ನೆಮ್ಮದಿ'

Last Updated 6 ಡಿಸೆಂಬರ್ 2012, 7:03 IST
ಅಕ್ಷರ ಗಾತ್ರ

ಕೆಂಭಾವಿ: ದೀಪವು ಜೀವನದ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿದ್ದು, ಪ್ರತಿಯೊಬ್ಬರೂ ದೀಪವನ್ನು ಬೆಳಗಿಸಬೇಕು. ದೀಪದಿಂದ ಅಧ್ಯಾತ್ಮದ ಜೊತೆಗೆ ಮಾನಸಿಕ ನೆಮ್ಮದಿಯೂ ದೊರೆಯುತ್ತದೆ ಎಂದು ಸರ್ವೋತ್ತಮಾಚಾರ್ಯ ಜೋಶಿ ಹೇಳಿದರು.

ಪಟ್ಟಣದ ಸಂಜೀವನಗರದ ಕೃಷ್ಣಾ ಕಾಲುವೆಯಲ್ಲಿ ಕಾರ್ತಿಕ ಮಾಸದ ನಿಮಿತ್ತ ದೀಪಗಳ ತೆಪ್ಪೋತ್ಸವ ಉದ್ಘಾಟಿಸಿ ಅವರು
ಮಾತನಾಡಿದರು.

ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ದೀಪ ಹಚ್ಚುವುದರಿಂದ ಎಲ್ಲ ರೀತಿಯ ಪಾಪಗಳು ಪರಿಹಾರವಾಗಿ ಪ್ರತಿಯೊಬ್ಬರಿಗೂ ದೈಹಿಕ, ಮಾನಸಿಕ ನೆಮ್ಮದಿ ಸಿಗುತ್ತದೆ ಎಂದುಹೇಳಿದರು.

ನಂತರ ಸಂಜೀವಾಂಜನೇಯ ಮತ್ತು ಕಾಶಿ ವಿಶ್ವನಾಥನ ದೇವಸ್ಥಾನದಲ್ಲಿ ಜಯ ಸತ್ಯಪ್ರಮೋದ ಸೇವಾ ಸಂಘದ ವತಿಯಿಂದ ಭಜನೆ ನಡೆಯಿತು.

ಮೋಹನರಾವ ಕುಲಕರ್ಣಿ, ಜಯಾಚಾರ್ಯ ಪುರೋಹಿತ, ಅರ್ಚಕ ಆನಂದರಾವ ಕುಲಕರ್ಣಿ, ಡಾ.ಹಳ್ಳೇರಾವ ಕುಲಕರ್ಣಿ, ಶೇಷಗಿರಿರಾವ ಕುಲಕರ್ಣಿ, ರಾಜಶೇಖರ ಹಿರೇಮಠ, ಡಾ. ಎ.ಜಿ. ಹಿರೇಮಠ, ಕೃಷ್ಣಾಜಿ ಕುಲಕರ್ಣಿ, ರಾಘವೇಂದ್ರರಾವ ಕುಲಕರ್ಣಿ, ದತ್ತಾತ್ರೆಯ ಕುಲಕರ್ಣಿ, ರಮೇಶ ಸೊನ್ನದ ಸೇರಿದಂತೆ ಹಲವಾರು ಭಕ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT