ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಕ್ ಕುಂಬಾರ, ತಿಪ್ಪವ್ವ ಪ್ರಥಮ

Last Updated 19 ಜೂನ್ 2011, 19:30 IST
ಅಕ್ಷರ ಗಾತ್ರ

ಗುಲ್ಬರ್ಗ: ಬೆಳಗಾವಿ ಜಿಲ್ಲೆಯ ರಾಂಪೂರ್‌ದ ದೀಪಕ್ ಕುಂಬಾರ ಮತ್ತು ಮೈಸೂರಿನ ತಿಪ್ಪವ್ವ ಸಣ್ಣಕ್ಕಿ  ಡೆಕ್ಕನ್ ಅಥ್ಲೆಟಿಕ್ ಕ್ಲಬ್ ಆಶ್ರಯದಲ್ಲಿ ನಡೆದ  `ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್~ ಪ್ರಾಯೋಜಕತ್ವದ ಕೆ.ಎ. ನೆಟ್ಟಕಲ್ಲಪ್ಪ ಸ್ಮಾರಕ ರಾಜ್ಯಮಟ್ಟದ ರಸ್ತೆ ಓಟದ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದರು.

ಭಾನುವಾರ ನಡೆದ ಪುರುಷರ 12ಕಿ.ಮೀ ಓಟವನ್ನು 36ನಿಮಿಷ 05ಸೆಕೆಂಡುಗಳಲ್ಲಿ ಕ್ರಮಿಸಿದ ರಾಂಪೂರ್‌ದ ದೀಪಕ್ ಕುಂಬಾರ ಪ್ರಥಮ ಸ್ಥಾನ ಗಳಿಸಿದರು. ಬಾಗಲಕೋಟೆಯ ಅಪ್ಪಾಸಾಹೇಬ್(37.26) ಹಾಗೂ ಬಸವರಾಜ ನಾಗೋಡ್(39.16) ಅವರು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.

ಮಹಿಳೆಯರ ವಿಭಾಗದಲ್ಲಿ ಮೈಸೂರಿನ ತಿಪ್ಪವ್ವ ಸಣ್ಣಕ್ಕಿ  ಅಗ್ರಸ್ಥಾನ  ಪಡೆದುಕೊಂಡರು. ಹಾಸನದಲ್ಲಿ ಈಚೆಗೆ ಇದೇ  ಸ್ಪರ್ಧೆಯಲ್ಲಿ  22.55 ನಿಮಿಷಗಳಲ್ಲಿ  6 ಕಿ.ಮೀ ದೂರವನ್ನು ಕ್ರಮಿಸಿದ್ದ ತಿಪ್ಪವ್ವ ಇಲ್ಲಿ  ನಡೆದ ಸ್ಪರ್ಧೆಯಲ್ಲಿ  20.40 ನಿಮಿಷಗಳಲ್ಲಿ ದೂರವನ್ನು ಕ್ರಮಿಸಿ ಹಿಂದಿನ ಕಾಲವನ್ನು ಉತ್ತಮ ಪಡಿಸಿಕೊಂಡರು.

 ಕುತೂಹಲ ಮೂಡಿಸಿದ್ದ ಬಾಲಕಿಯರ ವಿಭಾಗದ ( 16ವರ್ಷ ವಯೋಮಿತಿ ಒಳಗಿನವರು) ಓಟದಲ್ಲಿ ವಿಜಾಪುರ ಜಿಲ್ಲೆಯ ಬಿ.ವಿ.ಎಸ್ ಶಾಲೆಯಲ್ಲಿ  ವ್ಯಾಸಂಗ ಮಾಡುತ್ತಿರುವ 6ನೇ ತರಗತಿಯ ವಿದ್ಯಾರ್ಥಿನಿ ಮಲ್ಲೇಶ್ವರಿ ಆರ್. ರಾಥೋಡ್ ಎಲ್ಲರನ್ನೂ ಹಿಂದಕ್ಕಿ 2.5ಕಿ.ಮೀ ಓಟದಲ್ಲಿ  9.41ನಿಮಿಷಗಳಲ್ಲಿ ಓಡುವ ಮೂಲಕ ಪ್ರಥಮ ಸ್ಥಾನವನ್ನು ಪಡೆದಕೊಂಡಳು.

ಬೆಳಿಗ್ಗೆ ನಡೆದ ರಸ್ತೆ ಓಟದ ಸ್ಪರ್ಧೆಗೆ ಪ್ರಾದೇಶಿಕ ಆಯುಕ್ತ ರಜನೀಶ್ ಗೋಯಲ್ ಚಾಲನೆ ನೀಡಿದರು.
ವಿಜೇತ ಕ್ರೀಡಾಪಟುಗಳಿಗೆ ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್ ಬಹುಮಾನ ವಿತರಿಸಿದರು. ಡೆಕ್ಕನ್ ಅಥ್ಲೆಟಿಕ್ ಕ್ಲಬ್‌ನ ಸಂಘಟನಾ ಕಾರ್ಯದರ್ಶಿ ಅನಂತರಾಜು, ಜಿಲ್ಲಾ ಅಥ್ಲೆಟಿಕ್ ಕ್ಲಬ್ ಕಾರ್ಯದರ್ಶಿ ಸಿ.ಎನ್. ಬಾಬಾಲಗಾಂವ್, ಪ್ರಸರಣ ವಿಭಾಗದ ಮುಖ್ಯಸ್ಥ ಗಣೇಶಪ್ರಸಾದ, ಮುಖ್ಯ ಉಪ ಸಂಪಾದಕ ಬಿ.ವಿ. ಸುರೇಶ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶಗಳು ಇಂತಿವೆ:
ಪುರುಷರ ವಿಭಾಗ (ದೂರ 12ಕಿ.ಮೀ): ದೀಪಕ್ ಕುಂಬಾರ (ಬೆಳಗಾವಿ ರಾಂಪೂರ್)-1, ಅಪ್ಪಾಸಾಹೇಬ್( ಬಾಗಲಕೋಟೆ)-2. ಬಸವರಾಜ ಎಸ್. ನಾಗೋಡ ( ವಿಜಾಪುರ)-3, ಶಿವಕುಮಾರ ಗಿರಿಯಪ್ಪ (ಬೀದರ್)-4, ರಾಜಾ(ಕೆಸ್‌ಪಿ ಬೆಂಗಳೂರು)-5, ತಾನಾಜಿ ಎಲ್ (ಬೆಳಗಾವಿ)-6, ಡಿ.ಐ. ಮೇತ್ರಿ (ವಿಜಾಪುರ)-7, ಗೋಪಾಲ್ ಕೆ. ಲಮಾಣಿ (ವಿಜಾಪುರ)-8, ಸುಕುಮಾರ ಎಸ್. ದೋನಿ (ಕಡಗಂಚಿ ಆಳಂದ)-9, ಚನ್ನಬಸವಪ್ಪ(ಗುಲ್ಬರ್ಗ)-10, ಕಾಲ: 36 ನಿಮಿಷ 05ಸೆಕೆಂಡು.

ಮಹಿಳೆಯರ ವಿಭಾಗ (6ಕಿ.ಮೀ): ತಿಪ್ಪವ್ವ ಸಣ್ಣಕ್ಕಿ( ಮೈಸೂರು)-1, ಶ್ರದ್ಧಾರಾಣಿ ಎಸ್. ದೇಸಾಯಿ(ಡಿವೈಎಸ್‌ಎಸ್ ಮೈಸೂರು)-2, ಮೀನಾಕ್ಷಿ ಪಾಟೀಲ್(ನಿಪ್ಪಾಣಿ ಬೆಳಗಾವಿ)-3, ನವ್ಯಾಶ್ರೀ. ಸಿ. (ಡಿವೈಎಸ್‌ಎಸ್ ಮೈಸೂರು)-4,ಯಶಸ್ವಿನಿ ಕೆ.(ಡಿವೈಎಸ್‌ಎಸ್ ಮೈಸೂರು)-5,ಲಕ್ಷ್ಮೀ ( ವಿಜಾಪುರ)-6, ಭುವನೇಶ್ವರಿ ಎ. (ಬೀದರ್)-7, ಸುಮಾ ಎಸ್. ತಡವಾಳಕರ್(ವಿಜಾಪುರ)-8, ಕಾಲ:20 ನಿಮಿಷ 40 ಸೆಕೆಂಡು.

ಬಾಲಕರ ವಿಭಾಗ (16ವರ್ಷವಯಸ್ಸಿನೊಳಗಿನವರು)2.5ಕಿ.ಮೀ : ಗೋಪಾಲ್( ವಿದ್ಯಾನಗರ ಬೆಂಗಳೂರು)-1, ಗಣೇಶ ಗೌಡ (ವಿದ್ಯಾನಗರ ಬೆಂಗಳೂರು)-2,ಕಾಶಿನಾಥ ಬಿ,(ಗುಲ್ಬರ್ಗ)-3, ಆನಂದ ಪಿ. (ಬೆಂಗಳೂರು ವಿವಿ)-4,ಹನುಮಂತ (ವಿಎನ್‌ಎಸ್ ಬೆಂಗಳೂರು)-5, ರಿಯಾಜ್ ಅಹ್ಮದ್(ಡಿವೈಎಸ್‌ಎಸ್ ಬೆಂಗಳೂರು)-6, ಅರುಣಕುಮಾ (ಡಿವೈಎಸ್‌ಎಸ್ ಗುಲ್ಬರ್ಗ)-7, ಗೌತಮ್ ಬಿ. (ವಿಜಾಪುರ)-8, ಸಂತೋಷ (ಡಿವೈಎಸ್‌ಎಸ್ ಗುಲ್ಬರ್ಗ)-9, ಲೋಕೇಶ(ಡಿವೈಎಸ್‌ಎಸ್ ಗುಲ್ಬರ್ಗ)-10, ಕಾಲ: 8ನಿಮಿಷ 23ಸೆಕೆಂಡು.;

ಬಾಲಕಿಯರ ವಿಭಾಗ  2.5ಕಿ.ಮೀ: ಮಲ್ಲೇಶ್ವರಿ ಆರ್. ರಾಥೋಡ್ (ವಿಜಾಪುರ)-1, ಬಿ.ಸಿ. ಸಕ್ಕುಬಾಯಿ  (ಬೆಂಗಳೂರು)-2, ಸಿ. ವೈಭವಾ (ಡಿವೈಎಸ್ ಎಸ್ ಬೆಂಗಳೂರು)-3, ಆರ್.ಎ. ಚೈತ್ರಾ (ಡಿವೈಎಸ್ ಎಸ್ ಬೆಂಗಳೂರು)-4, ಎಂ. ಲಿಖಿತಾ (ಡಿವೈಎಸ್‌ಎಸ್ ವಿಎನ್ ಬೆಂಗಳೂರು)-5,  ಸಿ.ಎಚ್. ವಿಜಯಲಕ್ಷ್ಮಿ  (ಗುಲ್ಬರ್ಗ)-6, ಪೂಜಾ ಎನ್. ಹಿಜೇರಿ (ವಿಜಾಪುರ)-7, ಎಸ್.ಜಿ. ಪ್ರಿಯಾಂಕ  (ಡಿವೈಎಸ್‌ಎಸ್ ವಿಎನ್ ಬೆಂಗಳೂರು)-8, ಎ. ಪಲ್ಲವಿ  (ಜಲಸಂಗವಿ ಬೀದರ್)-9, ನೇಹಾ ಮಹಾವಿಷ್ಕ್ (ಹುಸೇನ್ ಪಬ್ಲಿಕ್ ಸ್ಕೂಲ್ ಗುಲ್ಬರ್ಗ)-10, ಕಾಲ: 9ನಿಮಿಷ 41ಸೆಕೆಂಡು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT