ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ: ನಗರದ ವಿವಿಧೆಡೆ ಮಾಲಿನ್ಯ ಪ್ರಮಾಣ ಏರಿಕೆ

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೀಪಾವಳಿ ಹಿನ್ನೆಲೆಯಲ್ಲಿ ನಗರದ ಶಬ್ದ ಮಾಲಿನ್ಯ ಶೇ 27ರಷ್ಟು ಏರಿಕೆಯಾಗಿತ್ತು ಹಾಗೂ ಸಿಟಿ ರೈಲು ನಿಲ್ದಾಣದ ಸುತ್ತಮುತ್ತ ವಾಯು ಮಾಲಿನ್ಯ ಹೆಚ್ಚಳವಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಯನದ ವರದಿ ತಿಳಿಸಿದೆ.

ಕುಮಾರಕೃಪ ಉದ್ಯಾನ, ವೈಟ್‌ಫೀಲ್ಡ್‌ನ ಎಇಸಿಎಸ್ ಬಡಾವಣೆ, ಕಬ್ಬನ್ ಪೇಟೆ ನಾಗರಬಾವಿಯ ಫೋರ್ಟಿಸ್ ಆಸ್ಪತ್ರೆ ಸುತ್ತಮುತ್ತಲಿನ ಸ್ಥಳಗಳು ಅತಿಹೆಚ್ಚು ಶಬ್ದಮಾಲಿನ್ಯ ಸೃಷ್ಟಿಸಿದ ಸ್ಥಳಗಳಾಗಿವೆ. ಬಿಟಿಎಂ ಬಡಾವಣೆ, ಪೀಣ್ಯ, ಹಾಗೂ ಮಾರತ್‌ಹಳ್ಳಿಯಲ್ಲಿ ಶಬ್ದ ಮಾಲಿನ್ಯ ನಿಯಂತ್ರಣದಲ್ಲಿತ್ತು. ರಾಷ್ಟ್ರೀಯ ಶಬ್ದ ಮಾಪನದ ಮಿತಿಯನ್ನೂ ಮೀರಿ ಈ ಪ್ರದೇಶಗಳಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಿದೆ.

ಇತರೆ ದಿನಗಳಿಗೆ ಹೋಲಿಸಿದರೆ ನಗರದ ಸಿಟಿ ರೈಲು ನಿಲ್ದಾಣದಲ್ಲಿ ಗಾಳಿಯಲ್ಲಿರುವ ತೇಲಾಡುವ ಕಲ್ಮಶಗಳು, ನೈಟ್ರೋಜನ್ ಆಕ್ಸೈಡ್ ಹಾಗೂ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಶೇ 27ರಷ್ಟು ಏರಿಕೆಯಾಗಿತ್ತು. ಸಾಣೆ ಗೊರವನಹಳ್ಳಿಯಲ್ಲಿ ತೇಲಾಡುವ ಕಲ್ಮಶಗಳು ಹಾಗೂ ನೈಟ್ರೋಜನ್ ಆಕ್ಸೈಡ್ ಪ್ರಮಾಣ ಶೇ 31ರಷ್ಟು ಕಡಿಮೆಯಾಗಿತ್ತು. ಆದರೆ 2010ರ ರಾಷ್ಟ್ರೀಯ ಶಬ್ದ ಮಾಪನದ ಮಿತಿಗೆ ಹೋಲಿಸಿದರೆ ಈ ಪ್ರಮಾಣ ಕಡಿಮೆ ಇದೆ.
ನಗರದ 12 ಸ್ಥಳಗಳಲ್ಲಿ ಶಬ್ದ ಮಾಪಕಗಳನ್ನು ಅಳವಡಿಸಿ ಆರು ಗಂಟೆಗಳ ಕಾಲ ಮಂಡಳಿ ಮಾಲಿನ್ಯದ ಪ್ರಮಾಣವನ್ನು ಅಳತೆ ಮಾಡಿತ್ತು. ಸಾಣೆಗೊರವನಹಳ್ಳಿ ಮತ್ತು ಸಿಟಿ ರೈಲು ನಿಲ್ದಾಣದಲ್ಲಿ 24 ಗಂಟೆಗಳ ಕಾಲ ವಾಯು ಮಾಲಿನ್ಯ ಸಮೀಕ್ಷೆ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT