ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಃಸ್ಥಿತಿಯಲ್ಲಿ ಐತಿಹಾಸಿಕ ಗಡಿಯಾರ!

Last Updated 21 ಜೂನ್ 2011, 9:20 IST
ಅಕ್ಷರ ಗಾತ್ರ

ವಿರಾಜಪೇಟೆ: ವಿರಾಜಪೇಟೆಯ ಹೃದಯ ಭಾಗ ಹಾಗೂ ಅಂತರರಾಜ್ಯ ಹೆದ್ದಾರಿ ರಸ್ತೆಯಲ್ಲಿರುವ 1886ರಲ್ಲಿ ದಾನಿಗಳಿಂದ ನಿರ್ಮಿಸಿದ ಕಂಬದಲ್ಲಿರುವ ಗಡಿಯಾರ ಕೆಟ್ಟುಹೋಗಿ ಮೂರು ವರ್ಷಗಳು ಕಳೆದರೂ ಪಟ್ಟಣ ಪಂಚಾಯಿತಿ ಇದಕ್ಕೆ ದುರಸ್ತಿಪಡಿಸಿಲ್ಲ.

ಗಡಿಯಾರ ಕಂಬದಲ್ಲಿದ್ದ ಗಡಿಯಾರ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಪಟ್ಟಣ ಪಂಚಾಯಿತಿಗೆ ಮೂವರು ಅಧ್ಯಕ್ಷರು ಆಡಳಿತ ನಡೆಸಿದರೂ ಗಡಿಯಾರ ದುರಸ್ತಿ ಮಾಡದಿರುವುದು ವಿಪರ್ಯಾಸ ಎಂದು ಇಲ್ಲಿನ ಸಾರ್ವಜನಿಕರು ಆರೋಪಿಸಿದ್ದಾರೆ. 

 ವಿರಾಜಪೇಟೆ ಪಟ್ಟಣದಿಂದ ಹಾದು ಹೋಗಿರುವ ರಾಜ್ಯ ಹೆದ್ದಾರಿ ಯನ್ನು ಪಟ್ಟಣದ ಎರಡು ಬದಿಗಳಲ್ಲಿ ನಿಗಧಿತ ಅಂತರಕ್ಕೆ ವಿಸ್ತರಿಸುವಂತೆ 1977ರಲ್ಲಿ ಆಗಿನ ಕಾಂಗ್ರೆಸ್ ಸರ್ಕಾರದ ಲೋಕೋಪಯೋಗಿ ಇಲಾಖೆ ಸಚಿವ ಚನ್ನಬಸಪ್ಪ ಆದೇಶಿಸಿದ್ದರು. ಪಟ್ಟಣವನ್ನು ಕಾಲ್ನಡಿಗೆಯಲ್ಲಿ ವೀಕ್ಷಿಸಿದ ಅವರು ರಾಜ್ಯ ಹೆದ್ದಾರಿಗೆ ಅಡಚಣೆಯಾಗಿರುವ ಐತಿಹಾಸಿಕ ಗಡಿಯಾರದ ಕಂಬವನ್ನು ನೆಲಸಮ ಗೊಳಿಸುವಂತೆಯೂ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ್ದರು.

ಆದರೆ ಇದಕ್ಕೆ ಇಲ್ಲಿನ ಸಂಘ ಸಂಸ್ಥೆಗಳು ಸಾರ್ವಜನಿಕರು ವಿರೋಧಿಸಿದರು. ಧರಣಿ ನಡೆಸಿದ ನಂತರ ಸರ್ಕಾರ ನೆಲಸಮದ ಆದೇಶವನ್ನು ಕೈಬಿಟ್ಟಿತು. ಸುಮಾರು 50 ಅಡಿಗಳಷ್ಟು ಎತ್ತರದಲ್ಲಿರುವ ಈ ಕಂಬದಲ್ಲಿರುವ ಗಡಿಯಾರದಲ್ಲಿ ಸಮಯವನ್ನು ಸುಮಾರು 150 ರಿಂದ 200ಮೀಟರ್‌ಗಳ ಅಂತರದಲ್ಲಿ ವೀಕ್ಷಿಸಬಹುದು.

 ಈ ಸೌಲಭ್ಯ ಉದ್ಯೋಗಿಗಳಿಗೆ, ಪ್ರವಾಸಿಗರಿಗೆ, ಸಾರ್ವಜನಿಕರಿಗೆ ಹಾಗೂ ವರ್ತಕರಿಗೆ ಉಪಯೋಗವಾಗುತ್ತಿತ್ತು. ಆದರೆ ಈಗ ಗಡಿಯಾರ ದುರಸ್ತಿಯಲ್ಲಿದ್ದು, ಇದನ್ನು ಐತಿಹಾಸಿಕ ಗಡಿಯಾರ ಕಂಬ ಎಂದು ಕರೆಯುವುದು ಎಷ್ಟು ಸಮಂಜಸ ಎಂಬುದು ನಾಗರಿಕರ ಪ್ರಶ್ನೆ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT