ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಃಸ್ವಪ್ನವಾದೀತು ಸುಂದರ ಬಾಲ್ಯ

Last Updated 20 ಜುಲೈ 2012, 19:30 IST
ಅಕ್ಷರ ಗಾತ್ರ

ಮಕ್ಕಳ ಮೇಲೆ ನಡೆಯುವ ಲೈಂಗಿಕ ಶೋಷಣೆಗೆ ಎರಡು ಕಾರಣಗಳನ್ನು ಗುರುತಿಸಬಹುದು. ಕೆಲವರು ಮಕ್ಕಳನ್ನು ಸುಲಭವಾಗಿ ಯಾಮಾರಿಸಬಹುದಾದ್ದರಿಂದ ಅವರನ್ನೇ ಬಳಸಿಕೊಳ್ಳುತ್ತಾರೆ. ಇನ್ನು ಕೆಲವರಿಗೆ ಮಕ್ಕಳೇ ಬೇಕು. ಸ್ವಂತ ಅಥವಾ ಹತ್ತಿರದ ಸಂಬಂಧಿಕರ ಮಕ್ಕಳು ಇವರಿಗೆ ಸುಲಭವಾಗಿ ಸಿಗುವುದರಿಂದ ಅಂತಹವರೇ ಹೆಚ್ಚಾಗಿ ಬಲಿಯಾಗುತ್ತಾರೆ.

ಇಂತಹ ಕೃತ್ಯಕ್ಕೆ ಗುರಿಯಾಗದಂತೆ ಮಕ್ಕಳನ್ನು ಕಾಪಾಡಿಕೊಳ್ಳಬೇಕಾದ ಹೊಣೆ ಪಾಲಕರದು.`ಬ್ಯಾಡ್ ಟಚ್~ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡಬೇಕು.

ಬಾಲ್ಯದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯ ಮಕ್ಕಳು ಬೆಳೆದು ದೊಡ್ಡವರಾದ ಮೇಲೂ ಪರಿಣಾಮ ಬೀರಬಲ್ಲದು. ಆದ್ದರಿಂದ ಬಾಲ್ಯದಲ್ಲಿ ಅವರು ಇಂತಹ ಕೃತ್ಯಕ್ಕೆ ಈಡಾಗದಂತೆ ನೋಡಿಕೊಳ್ಳುವುದು ಅಗತ್ಯ. ಮಕ್ಕಳಿಗೆ ಬಾಲ್ಯ ಸಿಹಿ ಕನವರಿಕೆಯಾಗಬೇಕೇ ಹೊರತು ದುಃಸ್ವಪ್ನ ಆಗಬಾರದು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT