ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬಾರಿ ರಂಗಮಂದಿರ

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಗುಲ್ಬರ್ಗದ ಎಸ್.ಎಂ.ಪಂಡಿತ್ ರಂಗಮಂದಿರ ಆಧುನಿಕ ಪೀಠೋಪಕರಣಗಳಿಂದ ಸುಸಜ್ಜಿತಗೊಂಡಿದೆ. ಈ ರಂಗಮಂದಿರ ಆರಂಭವಾದಾಗಿನಿಂದ ಅಲ್ಲಿ ಕಲಾ ಚಟುವಟಿಕೆಗಳು ಹೆಚ್ಚು  ಕ್ರಿಯಾಶೀಲವಾಗಿವೆ. ಇತ್ತೀಚೆಗೆ 5 ದಿನಗಳ  ರಂಗೋತ್ಸವ ಯಶಸ್ವಿಯಾಗಿ ನಡೆಯಿತು.

ಆದರೆ ಇಲ್ಲಿ ಕಾರ್ಯಕ್ರಮ ನಡೆಸುವ ಎಲ್ಲಾ ಸಂಘಟಕರ ಅಳಲು ಒಂದೇ. ರಂಗಮಂದಿರ ಬಾಡಿಗೆ ದುಬಾರಿ ಎಂದು. ದಿನಕ್ಕೆ 15,000 ರೂ ಬಾಡಿಗೆ ನಿಗದಿ ಮಾಡಲಾಗಿದೆ.

ಗುಲ್ಬರ್ಗದಂತಹ ಸಣ್ಣ ನಗರದಲ್ಲಿ ಇಷ್ಟು ದೊಡ್ಡ ಮೊತ್ತದ ಬಾಡಿಗೆ ತೆತ್ತು ಕಾರ್ಯಕ್ರಮ ಹಮ್ಮಿಕೊಳ್ಳುವುದು ಕಷ್ಟ. ಕನ್ನಡ ಮತ್ತು ಸಂಸ್ಕೃತಿ ಸಚಿವರು ರಂಗಮಂದಿರದ ಬಾಡಿಗೆ ಕಡಿಮೆ ಮಾಡುವ ಬಗ್ಗೆ ಗಮನ ಹರಿಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT