ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಂತ ಸಾವಿಗೆ ನೌಕರಿ ಆಸೆ ಕಾರಣ: ಡಿಸಿ

Last Updated 30 ಅಕ್ಟೋಬರ್ 2011, 9:45 IST
ಅಕ್ಷರ ಗಾತ್ರ

ಕೋಲಾರ: ಕೆ.ಜಿ.ಎಫ್‌ನ  ಸಫಾಯಿ ಕರ್ಮಚಾರಿಗಳನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಆದ್ದರಿಂದಲೇ ಮೂವರು ಮಲದ ಗುಂಡಿಗೆ ಇಳಿದು ಸಾವಿಗೀಡಾಗಿರುವ ಸಾಧ್ಯತೆ ಇದೆ ಎಂದು  ಜಿಲ್ಲಾಧಿಕಾರಿ ಮನೋಜ್ ಕುಮಾರ್ ಮೀನಾ ಆರೋಪಿಸಿದ್ದಾರೆ.

ನಗರದ ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಡನೆ ಮಾತನಾಡಿದ ಅವರು, ಮೂವರು ಮರಣ ಹೊಂದಿರುವುದು ಆಕಸ್ಮಿಕ. ಸತ್ತ ಪ್ರಸಾದ್ ಅಲಿಯಾಸ್ ಕುಟ್ಟಿ ಮತ್ತು  ಇನ್ನಿಬ್ಬರನ್ನು ನಾನು ಬಹಳ ಹತ್ತಿರದಿಂದ ಬಲ್ಲವನಾಗಿದ್ದೇನೆ. ಅವರು ಈ ಮೊದಲೇ ಹಲವು ಬಾರಿ ನನ್ನ ಬಳಿ ಬಂದಿದ್ದರು. ನಾನು ಅವರಿಗೆ ಯಾವುದೇ ಕಾರಣಕ್ಕೂ ಈ ಕೆಲಸ ಮಾಡಬೇಡಿ ಎಂದು ಸಲಹೆ ಕೊಟ್ಟಿದ್ದೆ~ ಎಂದರು.

`ನನ್ನ ಸಲಹೆಯನ್ನು ಅವರು ತುಂಬು ಮನಸ್ಸಿನಿಂದ ಸ್ವಾಗತಿಸಿ ಸರ್ಕಾರಿ ಯೋಜನೆಗಳ ಮೂಲಕ ಹೊಸ ಬದುಕು ರೂಪಿಸಿಕೊಳ್ಳುವ ಹಾದಿ ತುಳಿದಿದ್ದರು ಆದರೆ ಅವರನ್ನು ಕೆಲವರು ಉದ್ದೇಶಪೂರ್ವಕವಾಗಿ ಪ್ರಚೋದಿಸಿದ್ದಾರೆ. ಇದೇ ಕೆಲಸವನ್ನು ಮಾಡಿದರೆ ಸರ್ಕಾರಿ ಕೆಲಸ ಸಿಗುವುದು ಎಂಬ ಪ್ರೇರಣೆ ನೀಡಿ ಈ ರೀತಿಯ ದುರಂತಕ್ಕೆ ಕಾರಣರಾಗಿದ್ದಾರೆ~ ಎಂದು ಆರೋಪಿಸಿದರು.

ಕೆ.ಜಿ.ಎಫ್‌ನಲ್ಲಿ ಈಗಾಗಲೇ ಒಣ ಶೌಚಾಲಯಗಳು ಇಲ್ಲ ಎಂಬುದು ದೃಢಪಟ್ಟಿದೆ, ಆದರೆ ಮಲಗುಂಡಿಗಳಲ್ಲಿ ಮಲ ತಗೆಯುವುದಕ್ಕೆ ಜನರನ್ನು ಬಳಸುವುದರಿಂದ ಅದು “ಮ್ಯೋನುವಲ್ ಸ್ಕ್ಯಾವಂಜಿಗ್‌“ ವ್ಯಾಖ್ಯಾನಕ್ಕೆ ಒಳಪಡುತ್ತದೆ. ಅದನ್ನು ನಿಲ್ಲಿಸಬೇಕು ಎಂದು ಕಳೆದ ಕೆಲವು ತಿಂಗಳ ಹಿಂದೆಯೇ ಮಾನ್ಯ ಪೌರಾಡಳಿತ ಸಚಿವ ಸುರೇಶ್‌ಕುಮಾರ್ ಭೇಟಿ ನೀಡಿ ತಿಳಿಹೇಳಿದ್ದರು~ ಎಂದರು.

140 ಸಫಾಯಿ ಕರ್ಮಚಾರಿಗಳಿಗೆ ಸ್ಥಳೀಯ ನಗರಸಭೆಯಲ್ಲಿ 3 ತಿಂಗಳ ಅವಧಿಗೆ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ನಿಯೋಜಿಸಿ, ಆ ನಂತರ ಅವರಿಗೆ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮುಖಾಂತರ ಕೌಶಲ್ಯ ತರಬೇತಿ ನೀಡಲಾಗಿತ್ತು. ತರಬೇತಿ ಆಧಾರದಲ್ಲಿ ಅವರನ್ನು ಖಾಸಗಿ ವಲಯದಲ್ಲಿ ವಿವಿಧ ಕೆಲಸಗಳಿಗೆ ನಿಯೋಜಿಸಲು ಯೋಜನೆ ರೂಪಿಸಲಾಗಿತ್ತು, ಅವರ ಮಕ್ಕಳ ಶಿಕ್ಷಣಕ್ಕಾಗಿ ಈಗಾಗಲೇ ಸುಮಾರು 90ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದು ವಿವರಿಸಿದರು.

ಈಗಲೂ ಜಿಲ್ಲಾಡಳಿತದಲ್ಲಿ 60 ಹುದ್ದೆಗಳು ಹೊರಗುತ್ತಿಗೆಯಲ್ಲಿ ಖಾಲಿ ಇವೆ. ಆ ಕೆಲಸಗಳಿಗೆ ಅವರಲ್ಲಿ ಅರ್ಹತೆ ಇರುವವರನ್ನು ತೆಗೆದುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಅವರಿಗೆ ಸರ್ಕಾರಿ ಕೆಲಸವನ್ನೇ ಕೇಳಿ ಎಂದು ದಿಕ್ಕು ತಪ್ಪಿಸುವ ಕೆಲಸ ಕೆಲವರಿಂದ ನಡೆಯುತ್ತಿದೆ. ಆ ಪ್ರೇರಣೆಯೇ ಮೂರು ಪ್ರಾಣ ಕಳೆದುಕೊಳ್ಳುವಂತಾಯಿತು ಎಂದರು.

ಈಗಾಗಲೇ ಮಲಗುಂಡಿಗಳನ್ನು ಶುದ್ಧಿಗೊಳಸಲು ~ಸಕ್ಕಿಂಗ್~ಯಂತ್ರಗಳನ್ನು ಕೋಲಾರ ನಗರಸಭೆ ಮತ್ತು ಕೆ.ಜಿ.ಎಫ್ ನಗರಸಭೆಗಳಲ್ಲಿ  ಬಳಕೆಗೆ ಇರಿಸಲಾಗಿದೆ, ಜಿಲ್ಲೆಯ ಎಲ್ಲಾ ಪುರಸಭೆ ಮತ್ತು ನಗರಸಭೆಗಳಿಗೆ ಒಂದೊಂದು ಸಕ್ಕಿಂಗ್ ಮಷಿನ್ ಕೊಳ್ಳಲು ಆದೇಶ ನೀಡಲಾಗಿದೆ. ಸಾರ್ವಜನಿಕರು ಅದನ್ನು ಬಳಸಿಕೊಳ್ಳಬೇಕು, ಯಾವುದೇ ಕಾರಣಕ್ಕೂ ಮಲದ ಗುಂಡಿಗಳನ್ನು ಜನರಿಂದ ತೆಗೆಸಬಾರದು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT