ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ಬಲರ ಶೋಷಣೆ ತಪ್ಪಿಸಿ: ಎಚ್ಕೆ

Last Updated 6 ಡಿಸೆಂಬರ್ 2012, 7:13 IST
ಅಕ್ಷರ ಗಾತ್ರ

ಗದಗ:  ಅಸಂಘಟಿತ ಕಾರ್ಮಿಕರು, ಬಡವರು, ಆರ್ಥಿಕವಾಗಿ ಪ್ರಗತಿ ಹೊಂದಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು  ಮಾಜಿ ಸಚಿವ ಹಾಗೂ ರಾಷ್ಟ್ರೀಯ ಸಹಕಾರಿ ಬ್ಯಾಂಕು ಗಳ ಮಹಾಮಂಡಳದ ಅಧ್ಯಕ್ಷ ಎಚ್.ಕೆ. ಪಾಟೀಲ ಹೇಳಿದರು.

ನಗರದಲ್ಲಿ ಬುಧವಾರ ಹುಲಕೋಟಿಯ ಅಗ್ರಿಕಲ್ಚರಲ್ ಸೈನ್ಸ್ ಫೌಂಡೇಶನ್ ಹಾಗೂ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ ವಿವಿಧ ಫಲಾನುಭವಿಗಳಿಗೆ ತ್ರಿ ಚಕ್ರ ವಾಹನ, ಸಾಲ ಮಂಜೂರಾತಿ ಪತ್ರ ಹಾಗೂ ಒಲೆ ವಿತರಣಾ ಸಮಾರಂಭದಲ್ಲಿ ತ್ರಿಚಕ್ರ ವಾಹನಗಳ ಕೀಗಳನ್ನು ವಿತರಿಸಿ ಮಾತನಾಡಿದರು.

ಖಾಸಗಿ ಲೇವಾದೇವಿಗಾರರಿಂದ ದುರ್ಬಲರ ಶೋಷಣೆ ತಪ್ಪಿಸಲು ಸರ್ಕಾರ, ಸಂಘ ಸಂಸ್ಥೆಗಳು, ಮಾಧ್ಯಮಗಳು ಜಾಗೃತಿ ಮೂಡಿಸಬೇಕು. ಆ ನಿಟ್ಟಿನಲ್ಲಿ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಅಗತ್ಯವುಳ್ಳ ಫಲಾನುಭವಿಗಳಿಗೆ ಸ್ವ ಉದ್ಯೋಗ ಕೈಗೊಳ್ಳಲು ತ್ರಿಚಕ್ರ ವಾಹನ ಮತ್ತು ಆರ್ಥಿಕ ಸಾಲ ದೊರಕಿಸಿಕೊಡುವ ಕೆಲಸ ಮಾಡುತ್ತಿದೆ ಎಂದರು.

ಬ್ಯಾಂಕ್ ಆಫ್ ಇಂಡಿಯಾದ ಹಿರಿಯ ವ್ಯವಸ್ಥಾಪಕ ನಾಗೇಂದ್ರ ಕುಲಕರ್ಣಿ ಮಾತನಾಡಿ, ಅಗತ್ಯವುಳ್ಳ ಕಸಬುದಾರರಿಗೆ, ಸ್ವ ಉದ್ಯೋಗ ಕೈಗೊಳ್ಳಬಯಸುವವರಿಗೆ ಬ್ಯಾಂಕ್ ಸಾಲ ನೀಡಲು ಸಿದ್ಧವಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೆ.ವಿ.ಕೆ. ನಿರ್ದೇಶಕ ಡಾ. ಎಲ್.ಜಿ. ಹಿರೇಗೌಡ್ರ,  ಬ್ಯಾಂಕ್ ಆಫ್ ಇಂಡಿಯಾ, ಕೆ.ಎಚ್. ಪಾಟೀಲ ಮೈಕ್ರೋ ಫೈನಾನ್ಸ್, ಅಗ್ರಿಕಲ್ಚರಲ್ ಸೈನ್ಸ್ ಫೌಂಡೇಶನ್ ಸಹಯೋಗದಲ್ಲಿ ನಿರುದ್ಯೋಗಿ ಯುವಕರಿಗೆ 18 ಆಟೋ, ಎ.ಪಿ.ಎಂ.ಸಿ. ಹಮಾಲರಿಗೆ, ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ನೀಡಲಾಗಿದೆ. 26 ಜನ ನಿರುದ್ಯೋಗಿ ಯುವಕರಿಗೆ ಆಟೋ ಸಾಲ ಮಂಜೂರಾಗಿದ್ದು, ಪ್ರಥಮ ಹಂತದಲ್ಲಿ 18 ಮಂದಿಗೆ ವಿತರಿಸಲಾಗುವುದು. ಪ್ರತಿ ಆಟೋಗೆ 1.60 ಲಕ್ಷ ರೂ. ಸಾಲ ಮಂಜೂರಾಗಿದೆ ಎಂದು ಹೇಳಿದರು.

ಫಲಾನುಭವಿಗಳು 5 ವರ್ಷಗಳಲ್ಲಿ ಮಾಸಿಕ ಕಂತುಗಳಲ್ಲಿ ಸಾಲ ತೀರಿಸಬಹುದಾಗಿದ್ದು, ಶೇ. 12ರ ಬಡ್ಡಿ ದರ ವಿಧಿಸಲಾಗುವುದು. 289 ಜನ ಎ.ಪಿ.ಎಂ.ಸಿ. ಹಮಾಲರಿಗೆ ರೂ. 15 ಸಾವಿರ, 121 ಜನ ಬಾರದಾನ ತಯಾರಿಕಾ ಕಾರ್ಮಿಕರಿಗೆ ರೂ. 15 ಸಾವಿರ  ಹಾಗೂ ಸ್ವ ಸಹಾಯ ಸಂಘಗಳ ಸದಸ್ಯರಿಗೆ ರೂ. 15 ಸಾವಿರ  ಸಾಲವನ್ನು ಶೇ. 12ರ ಬಡ್ಡಿ ದರದಲ್ಲಿ ಒಟ್ಟು 1.20 ಕೋಟಿ ರೂ. ಗಳ ಸಾಲ ನೀಡಿ, ಸ್ವ ಉದ್ಯೋಗ ಕೈಗೊಳ್ಳಲು ಉತ್ತೇಜಿಸಲಾಗಿದೆ ಎಂದರು.

ಮಾಜಿ ಶಾಸಕ ಡಿ.ಆರ್. ಪಾಟೀಲ, ಬಜಾಜ್ ಆಟೋ ಕಂಪೆನಿ ಹಿರಿಯ ಅಧಿಕಾರಿ ಶ್ರೀಧರ್ ಭಟ್, ಮಂಜುನಾಥ ಆಟೋದ ಪ್ರೊ. ಮಂಜುನಾಥ ಕಬಾಡಿ, ನಿಸ್ಸಾರ ಅಹಮದ್ ಖಾಜಿ, ಕಟ್ಟೀಮನಿ, ಎಸ್.ಎನ್. ಬಳ್ಳಾರಿ, ಉಮರ್ ಫಾರೂಕ್ ಹುಬ್ಬಳ್ಳಿ, ಅಶೋಕ ಮಂದಾಲಿ ಹಾಜರಿದ್ದರು. ಎಸ್.ಎಚ್. ಅದಾಪೂರ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT