ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಲೀಪ್ ಟ್ರೋಫಿ ಕ್ರಿಕೆಟ್ : ಫೈನಲ್ ಸನಿಹ ಕೇಂದ್ರ ವಲಯ

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ನಮನ್ ಓಜಾ (104) ಮತ್ತು ರಾಬಿನ್ ಬಿಸ್ತ್ (ಅಜೇಯ 104) ಗಳಿಸಿದ ಶತಕ ನೆರವಿನಿಂದ ಕೇಂದ್ರ ವಲಯ ತಂಡ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸುವುದನ್ನು ಹೆಚ್ಚುಕಡಿಮೆ ಖಚಿತಪಡಿಸಿಕೊಂಡಿದೆ.

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಕೇಂದ್ರ ವಲಯ ಎರಡನೇ ಇನಿಂಗ್ಸ್ ನಲ್ಲಿ 5 ವಿಕೆಟ್‌ಗೆ 378 ರನ್ ಗಳಿಸಿತ್ತು. ಮೊದಲ ಇನಿಂಗ್ಸ್ ನಲ್ಲಿ 110 ರನ್‌ಗಳ ಮುನ್ನಡೆ ಪಡೆದಿದ್ದ ತಂಡ ಇದೀಗ ಒಟ್ಟಾರೆ ಮುನ್ನಡೆಯನ್ನು 488 ರನ್‌ಗಳಿಗೆ ಹೆಚ್ಚಿಸಿಕೊಂಡಿದೆ.

ನಾಲ್ಕನೇ ಹಾಗೂ ಅಂತಿಮ ದಿನವಾದ ಮಂಗಳವಾರ ಬೆಳಿಗ್ಗೆಯೇ ಕೇಂದ್ರ ವಲಯ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡರೂ ದಕ್ಷಿಣ ವಲಯಕ್ಕೆ 90 ಓವರ್‌ಗಳಲ್ಲಿ ಗೆಲುವಿನ ಗುರಿ ತಲುಪುವುದು ಸುಲಭವಲ್ಲ.
ಕೇಂದ್ರ ವಲಯ ಒಂದು ವಿಕೆಟ್‌ಗೆ 127 ರನ್‌ಗಳಿಂದ ಸೋಮವಾರ ಆಟ ಆರಂಭಿಸಿತ್ತು. ಮೊಹಮ್ಮದ್ ಕೈಫ್ (43) ಹಿಂದಿನ ದಿನದ ಮೊತ್ತಕ್ಕೆ ಕೇವಲ ಎರಡು ರನ್ ಸೇರಿಸಿ ಔಟಾದರು. 79 ರನ್‌ಗಳೊಂದಿಗೆ ಇನಿಂಗ್ಸ್ ಮುಂದುವರಿಸಿದ ಓಜಾ ಶತಕದ ಗಡಿ ದಾಟಿದರು.

ರಾಬಿನ್ ಬಿಸ್ತ್ ಮತ್ತು ಭುವನೇಶ್ವರ್ ಕುಮಾರ್ (ಅಜೇಯ 59) ಮುರಿಯದ ಆರನೇ ವಿಕೆಟ್‌ಗೆ 160 ರನ್‌ಗಳನ್ನು ಸೇರಿಸುವ ಮೂಲಕ ದಕ್ಷಿಣ ವಲಯ ತಂಡವನ್ನು ಕಾಡಿದರು.

ಸಂಕ್ಷಿಪ್ತ ಸ್ಕೋರ್: ಕೇಂದ್ರ ವಲಯ: ಮೊದಲ ಇನಿಂಗ್ಸ್ 92 ಓವರ್‌ಗಳಲ್ಲಿ 293 ಮತ್ತು ಎರಡನೇ ಇನಿಂಗ್ಸ್ 122 ಓವರ್‌ಗಳಲ್ಲಿ 5 ವಿಕೆಟ್‌ಗೆ 378 (ನಮನ್ ಓಜಾ 104, ಮೊಹಮ್ಮದ್ ಕೈಫ್ 43, ರಾಬಿನ್ ಬಿಸ್ತ್ ಬ್ಯಾಟಿಂಗ್ 104, ಭುವನೇಶ್ವರ್ ಕುಮಾರ್ ಬ್ಯಾಟಿಂಗ್ 59, ಸ್ಟುವರ್ಟ್ ಬಿನ್ನಿ 34ಕ್ಕೆ 2). ದಕ್ಷಿಣ ವಲಯ: ಮೊದಲ ಇನಿಂಗ್ಸ್ 54 ಓವರ್‌ಗಳಲ್ಲಿ 183
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT