ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಲೀಪ್ ಟ್ರೋಫಿ ಕ್ರಿಕೆಟ್: ಫೈನಲ್‌ಗೆ ಪೂರ್ವ, ಕೇಂದ್ರ ವಲಯ

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ವಿಶಾಖಪಟ್ಟಣ (ಪಿಟಿಐ): ಮೊದಲ ಇನಿಂಗ್ಸ್ ಆಧಾರದಲ್ಲಿ ಎದುರಾಳಿ ತಂಡಗಳನ್ನು ಮಣಿಸಿದ ಪೂರ್ವ ವಲಯ ಹಾಗೂ ಕೇಂದ್ರ ವಲಯ ತಂಡಗಳು ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿದವು.
ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪೂರ್ವ ವಲಯ ದಕ್ಷಿಣ ವಲಯದ ವಿರುದ್ಧ ಮೇಲುಗೈ ಸಾಧಿಸಿತು.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಇನ್ನೊಂದು ನಾಲ್ಕರಘಟ್ಟದ ಪಂದ್ಯದಲ್ಲಿ ಕೇಂದ್ರ ವಲಯ ತಂಡ ಉತ್ತರ ವಲಯ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 18 ರನ್‌ಗಳ ಮುನ್ನಡೆ ಪಡೆದು ಫೈನಲ್ ಪ್ರವೇಶಿಸಿತು. 

ಸಂಕ್ಷಿಪ್ತ ಸ್ಕೋರ್: ಪೂರ್ವ ವಲಯ: ಮೊದಲ ಇನಿಂಗ್ಸ್ 106.3 ಓವರ್‌ಗಳಲ್ಲಿ 267 ಮತ್ತು ಎರಡನೇ ಇನಿಂಗ್ಸ್ 90.3 ಓವರ್‌ಗಳಲ್ಲಿ 215 (ನಟರಾಜ್ ಬೆಹೆರಾ 60, ವಿಪ್ಲವ್ ಸಮಂತರಾಯ್ 52, ಬಸಂತ್ ಮೊಹಂತಿ 35, ಆರ್. ವಿನಯ್ ಕುಮಾರ್ 10ಕ್ಕೆ 3, ಸ್ಟುವರ್ಟ್ ಬಿನ್ನಿ 31ಕ್ಕೆ 3). ದಕ್ಷಿಣ ವಲಯ: ಮೊದಲ ಇನಿಂಗ್ಸ್ 82.4 ಓವರ್‌ಗಳಲ್ಲಿ 244 ಮತ್ತು ಎರಡನೇ ಇನಿಂಗ್ಸ್ 36 ಓವರ್‌ಗಳಲ್ಲಿ 8 ವಿಕೆಟ್‌ಗೆ 85 (ಸಿ.ಎಂ. ಗೌತಮ್ ಔಟಾಗದೆ 18, ಕೆ.ಪಿ. ಅಪ್ಪಣ್ಣ ಔಟಾಗದೆ 24, ಅಶೋಕ್ ದಿಂಡಾ 26ಕ್ಕೆ 7)

ಉತ್ತರ ವಲಯ: ಮೊದಲ ಇನಿಂಗ್ಸ್119.2 ಓವರ್‌ಗಳಲ್ಲಿ 451 ಮತ್ತು ಎರಡನೇ ಇನಿಂಗ್ಸ್ 52 ಓವರ್‌ಗಳಲ್ಲಿ 4 ವಿಕೆಟ್‌ಗೆ 187 (ರಾಹುಲ್ ದೇವಾನ್ 80, ಶಿಖರ್ ಧವನ್ 37, ನಿತಿನ್ ಸೈನಿ ಔಟಾಗದೆ 38, ಪಾರಸ್ ದೋಗ್ರಾ 24, ಜಲಜ್ ಸಕ್ಸೇನಾ 52ಕ್ಕೆ 2). ಕೇಂದ್ರ ವಲಯ: ಮೊದಲ ಇನಿಂಗ್ಸ್ 154.1 ಓವರ್‌ಗಳಲ್ಲಿ 469 (ಭುವನೇಶ್ವರ್ ಕುಮಾರ್ 128, ರಿತುರಾಜ್ ಸಿಂಗ್ ಔಟಾಗದೆ 39, ಅಮಿತ್ ಮಿಶ್ರಾ 162ಕ್ಕೆ 4, ರಾಹುಲ್ ದೇವಾನ್ 66ಕ್ಕೆ 3) ಮತ್ತು ಎರಡನೇ ಇನಿಂಗ್ಸ್ 13 ಓವರ್‌ಗಳಲ್ಲಿ 1 ವಿಕೆಟ್‌ಗೆ 39 (ತನ್ಮಯ್ ಶ್ರೀವಾಸ್ತವ 17, ರಾಹುಲ್ ಬಿಸ್ಟ್ ಔಟಾಗದೆ 21)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT