ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಶ್ಚಟಗಳ ವಿರುದ್ಧ ಬೀದಿ ನಾಟಕ ಸ್ಪರ್ಧೆ

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಧೂಮಪಾನ, ಮದ್ಯಪಾನ, ಗುಟ್ಕಾ, ಡ್ರಗ್ ಇನ್ನಿತರ ಮಾದಕ ವಸ್ತುಗಳ ವ್ಯಸನ ಯುವಜನತೆ ಮೇಲೆ ಉಂಟುಮಾಡುವ  ಪರಿಣಾಮದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ `ತೆರಪಂತ್ ಯುವಕ್ ಪರಿಷದ್~, ಸುರಾನಾ ಕಾಲೇಜು ಸಹಯೋಗದೊಂದಿಗೆ ಬೀದಿ ನಾಟಕ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.

`ಬಿ ಸ್ಮಾರ್ಟ್, ಡೋಂಟ್ ಸ್ಟಾರ್ಟ್~  ಎಂಬ ಘೋಷಣಾವಾಕ್ಯದೊಂದಿಗೆ ಫೆ.21ರಂದು ಬೀದಿ ನಾಟಕ ಮತ್ತು ಕೊಲಾಜ್ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಕನ್ನಡ, ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ನಾಟಕಕ್ಕೆ ಅವಕಾಶವಿದೆ. ಒಟ್ಟು 8 ಜನರು ಭಾಗವಹಿಸಬಹುದಾಗಿದ್ದು, 10 ನಿಮಿಷ ಕಾಲಾವಧಿ ನಿಗದಿಪಡಿಸಲಾಗಿದೆ.

ಕೊಲಾಜ್‌ನಲ್ಲಿ ಇಬ್ಬರು ಭಾಗವಹಿಸಬಹುದಾಗಿದ್ದು, 1 ಗಂಟೆ 20 ನಿಮಿಷ ಕಾಲಾವಧಿ ನೀಡಲಾಗಿದೆ. ಸ್ಪರ್ಧೆಯಲ್ಲಿ ಗೆದ್ದವರಿಗೆ ನಗದು ಬಹುಮಾನ ನೀಡಲಾಗುವುದು. ಬೆಳಿಗ್ಗೆ 9 ಗಂಟೆಗೆ ದುಶ್ಚಟಗಳ ವಿರುದ್ಧ ಮಾಧವನ್ ಉದ್ಯಾನದಿಂದ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ. ಪೊಲೀಸ್ ಆಯುಕ್ತ ಬಿ.ಜಿ. ಜ್ಯೋತಿಪ್ರಕಾಶ್ ಮಿರ್ಜಿ ಅತಿಥಿಯಾಗಿ ಆಗಮಿಸಲಿದ್ದಾರೆ. 

 ಕಾರ್ಯಕ್ರಮ ನಡೆಯುವ ಸ್ಥಳ: ಸುರಾನಾ ಕಾಲೇಜು, ನಂ.16, ಸೌತ್ ಎಂಡ್ ರಸ್ತೆ. ಮಾಹಿತಿಗೆ: 7259615434.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT