ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರ ಶಿಕ್ಷಣ ಮತ್ತು ಮಹಿಳೆ

Last Updated 16 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಶಿಕ್ಷಣ ಕ್ಷೇತ್ರದಲ್ಲಿ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ ಎಂದು ಮೇಲ್ನೋಟಕ್ಕೆ ಅನಿಸಿದರೂ ಎಲ್ಲಾ ವರ್ಗಗಳ ಜನರಿಗೆ  ನಿರೀಕ್ಷೆಗೆ ತಕ್ಕಂಥ ಶಿಕ್ಷಣ ಇಂದಿಗೂ ಲಭಿಸುತ್ತಿಲ್ಲ.

ಅದರಲ್ಲೂ ಮಹಿಳೆಯರಿಗೆ,  ಶಿಕ್ಷಣ ಪಡೆಯುವಲ್ಲಿ ಅನೇಕ ತೊಡಕುಗಳಿವೆ. ಆದರೆ ದೇಶದ ಪ್ರಗತಿಯಲ್ಲಿ ಮಹಿಳೆಯರ ಶೈಕ್ಷಣಿಕ ಮಟ್ಟವೂ ಗಮನಾರ್ಹ ಪಾತ್ರ ವಹಿಸುತ್ತದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಇದಕ್ಕೆ ಸೂಕ್ತ ಮಾರ್ಪಾಡು ತರಬೇಕಾದ ಅಗತ್ಯವಿದೆ.
ಮುಂಬರುವ ದಿನಗಳಲ್ಲಿ ಮಹಿಳಾ ಸಬಲೀಕರಣ ಜಾಗತಿಕ ವಿಷಯವಾಗಿ ಪರಿಣಮಿಸಲಿದೆ. ಇದಕ್ಕಾಗಿ ಮಹಿಳೆಯರಿಗೆ ಹೆಚ್ಚಿನ ಶಿಕ್ಷಣ ಹಾಗೂ ಉತ್ತೇಜನ ಅತ್ಯವಶ್ಯಕವಾಗಿದೆ.  

ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 48.46ರಷ್ಟು  ಮಹಿಳೆಯರಿದ್ದಾರೆ. ಕಳೆದ ಕೆಲವು ದಶಕಗಳಿಂದ ದೇಶದಲ್ಲಿ ಮಹಿಳೆಯರ ಶೈಕ್ಷಣಿಕ ಮಟ್ಟ ಸಾಕಷ್ಟು ಸುಧಾರಿಸುತ್ತಿದೆ. ಹೀಗಿದ್ದೂ ಒಟ್ಟು ಉತ್ಪಾದನಾ ಕ್ಷೇತ್ರದಲ್ಲಿ ಕಾರ್ಯನಿರತವಾಗಿರುವ ಉದ್ಯೋಗಿಗಳು ಶೇ.50ರಷ್ಟು ಇದ್ದು, ಇವರಲ್ಲಿ ಮಹಿಳೆಯರ ಪ್ರಮಾಣ ಶೇ.9ರಷ್ಟು ಮಾತ್ರ ಇದೆ.  ಮಹಿಳೆಯರಿಗೆ ಶಿಕ್ಷಣ ನೀಡಿಕೆಯಲ್ಲಿ ಹಿಂದೇಟು ಹಾಕಿರುವುದು, ಹಾಗೂ ಅವರ ಶೈಕ್ಷಣಿಕ ಬೆಳವಣಿಗೆಯನ್ನು ಹತ್ತಿಕ್ಕಿರುವುದು ಇದಕ್ಕೆ ಕಾರಣ ಎಂದು ಹೇಳಬಹುದು. 

ಮಹಿಳಾ ಶಿಕ್ಷಣ: ಸವಾಲುಗಳು
ಭಾರತೀಯ ಜೀವನ ಪದ್ಧತಿಯಲ್ಲಿ ಕೆಲವು ವರ್ಗಗಳ ಮಹಿಳೆಯರಿಗೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ  ಸಾಕಷ್ಟು ಸಮಸ್ಯೆಗಳಿವೆ. ಕೆಲವು ನಿರ್ಬಂಧಗಳು ಸಹ ಇದ್ದು, ಇವರು ಕಾಲೇಜು ಕ್ಯಾಂಪಸ್‌ನಲ್ಲಿ ಶಿಕ್ಷಣ ಪಡೆಯುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ  ಪರಿಹಾರ ಎಂದರೆ  ದೂರ ಶಿಕ್ಷಣ (ಡಿಸ್ಟನ್ಸ್ ಎಜ್ಯುಕೇಶನ್).

ದೂರ ಶಿಕ್ಷಣ ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಾಗೂ ಜಾಗತಿಕವಾಗಿ ವ್ಯಾಪಿಸುತ್ತಿರುವ ಕ್ಷೇತ್ರವಾಗಿದೆ. ಶಾಲೆ ಅಥವಾ ಕಾಲೇಜಿಗೆ ತೆರಳಿ ಶಿಕ್ಷಣ ಪಡೆಯಬಯಸದೇ ಸಾಮಾನ್ಯವಾದ ಓದನ್ನು ಬಯಸುವವರಿಗೆ ಇದು ಸಹಕಾರಿ.

ಒಂದೆಡೆ ಕುಳಿತು ಎಲ್ಲವನ್ನೂ ಕಲಿಯುವ ವಿನೂತನ ಸೌಲಭ್ಯಗಳನ್ನು ಒಳಗೊಂಡ ಶಿಕ್ಷಣ ವ್ಯವಸ್ಥೆ ಇದು. ನಾನಾ ವಿಧದ ಚಟುವಟಿಕೆಗಳಲ್ಲಿ ನಿರತರಾಗಿರುವವರಿಗೆ ಏಕಕಾಲಕ್ಕೆ ಎಲ್ಲವನ್ನೂ ನಿಭಾಯಿಸುತ್ತಾ ಶಿಕ್ಷಣ ಹೊಂದುವ ಅವಕಾಶ ಇಲ್ಲಿದೆ.

ಆರ್ಥಿಕವಾಗಿ ಹಿಂದುಳಿದವರು, ಕಾರ್ಮಿಕರು ಹಾಗೂ ನಾನಾ ಸಮಸ್ಯೆಯಿಂದ ಶಿಕ್ಷಣವನ್ನು ಪಡೆಯಲಾಗದವರಿಗೂ ಇದು ಕಲಿಯುವ ಅನುಕೂಲ ಮಾಡಿಕೊಡುತ್ತದೆ. ಸುಲಭ ಲಭ್ಯತೆ, ಉತ್ತಮ ಗುಣಮಟ್ಟ ಹಾಗೂ ಹಣವೂ ಉಳಿತಾಯವಾಗುವ ಏಕೈಕ ಸುಲಭ ಕಲಿಕಾ ಮಾರ್ಗ ಎಂದರೆ ಅದು ದೂರ ಶಿಕ್ಷಣ.

ಸಾಮಾನ್ಯ ಶಿಕ್ಷಣ ಹೊಂದುವ ಅವಕಾಶ ಈ ದೂರ ಶಿಕ್ಷಣದಲ್ಲಿ ಸಿಗುತ್ತದೆ.ಇದೊಂದು ಮಾದರಿ ಶಿಕ್ಷಣ ವ್ಯವಸ್ಥೆಯಾಗಿದ್ದು, ಮಹಿಳೆಯರಿಗೆ  ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು, ಅರ್ಧಕ್ಕೆ ನಿಂತ ಶಿಕ್ಷಣ ಮುಗಿಸಲು  ಸಹಕಾರಿ.

ಎಸ್‌ಎಂಯು-ಡಿಡಿಇ ಮಹಿಳಾ ಸ್ವಾವಲಂಬನೆ
ಎಸ್‌ಎಂಯು - ಡಿಡಿಇ ಕಳೆದ ವರ್ಷದಿಂದ `ಪ್ರೋ ಡಿಗ್ರಿ ಆಫರಿಂಗ್~ ಹೆಸರಿನ ಹೊಸ ಕೋರ್ಸ್ ಆರಂಭಿಸಿದೆ. ಮಾರುಕಟ್ಟೆ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಒಂದು ಗುರುತು ಮೂಡಿಸಿಕೊಳ್ಳಬಯಸುವವರಿಗೆ ಇದು ಸಹಕಾರಿ. ಈ ಕಾರ್ಯಕ್ರಮ ಇಂದು ಕೈಗಾರಿಕೆ ಬಯಸುವ ಮಾದರಿಯ ಮಾನವ ಸಂಪನ್ಮೂಲ ಸೃಷ್ಟಿಸುವ ಹಾಗೂ ಪದವಿಯ ಅಗತ್ಯ ಇರುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ.

ವಿದ್ಯಾರ್ಥಿಗಳು ಆಯಾ ವರ್ಷಾಂತ್ಯಕ್ಕೆ ಆ ವರ್ಷದ ಡಿಪ್ಲೊಮಾ ಅಥವಾ ಸರ್ಟಿಫಿಕೆಟ್ ತರಬೇತಿಯ ಪ್ರಮಾಣ ಪತ್ರ ಪಡೆಯುತ್ತಾ ಹೋಗುತ್ತಾರೆ. ಇದು ಇವರ ಕಲಿಕೆ ಮುಗಿಯುವವರೆಗೂ ಪ್ರತಿ ವರ್ಷ ಆಯಾ ವರ್ಷದ ತರಬೇತಿ ಪ್ರಮಾಣ ಪತ್ರ ಆಯಾ ವರ್ಷಾಂತ್ಯಕ್ಕೆ ನೀಡಲಾಗುತ್ತದೆ.
 

ವರ್ಷದಿಂದ ವರ್ಷಕ್ಕೆ ಪ್ರೊಫೆಷನಲ್ ಹಾಗೂ ತಾಂತ್ರಿಕ ಕೌಶಲ ವೃದ್ಧಿಸುತ್ತಾ ಹೋಗುವ ವಿಭಿನ್ನ ತರಬೇತಿ ಇದಾಗಿದೆ. ಇದಕ್ಕೆ ಡಾಟಾಕ್ರಾಫ್ಟ್, ಎಫ್‌ಟಿಡಿಸಿ ಅಥವಾ ಇಂಡಿಯಾ ಸ್ಕಿಲ್‌ಗಳಲ್ಲಿ ಯಾವುದೋ ಒಂದು ಸಂಸ್ಥೆ ಮೂಲಕ ಪ್ರಮಾಣ ಪತ್ರ ನೀಡಲಾಗುತ್ತದೆ. ಇವು ಉದ್ಯೋಗ ಪಡೆಯುವ ಸಂದರ್ಭದಲ್ಲಿ  ಸಹಾಯ ಮಾಡುತ್ತದೆ.

ಎಸ್‌ಎಂಯು ಡಿಡಿಇ ವರ್ಷದ ಹಿಂದೆ ಆರಂಭಿಸಿದ ಹೊಸ ತರಗತಿ `ಆರ್ಟ್ಸ್ ಅಂಡ್ ಹ್ಯುಮ್ಯೋನಿಟೀಸ್ (ಕಲೆ ಹಾಗೂ ಮಾನವಿಕ ಶಾಸ್ತ್ರ)~.   ಇತಿಹಾಸ, ಭೂಗೋಳಶಾಸ್ತ್ರ, ಪೊಲಿಟಿಕಲ್ ಸೈನ್ಸ್, ಫಿಲಾಸಫಿ, ಸೈಕಾಲಜಿ ಹಾಗೂ ಸಮಾಜ ಶಾಸ್ತ್ರದಂತ ವಿಷಯಗಳ ಕಲಿಕೆಗೆ ಇಲ್ಲಿ ಅವಕಾಶವಿದೆ. ಎಂ.ಎ., ಯಲ್ಲಿ ಇತಿಹಾಸ, ರಾಜ್ಯಶಾಸ್ತ್ರದ  ಜೊತೆಗೆ ಬಿಕಾಂ ಹಾಗೂ ಎಂಕಾಂ ತರಗತಿಗಳೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT