ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರವಾಣಿ ಕದ್ದಾಲಿಕೆ: ಸಂವಿಧಾನ ಬಾಹಿರ

ವಿವಾದಾತ್ಮಕ ರಹಸ್ಯ ಮಾಹಿತಿ ಸಂಗ್ರಹ: ಅಮೆರಿಕ ಕೋರ್ಟ್ ಅಭಿಮತ
Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ರಹಸ್ಯ ಮಾಹಿತಿ ಸಂಗ್ರಹಿಸಲು ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್‌ಎಸ್‌ಎ) ನಡೆಸಿದ ವಿವಾದಾತ್ಮಕ ದೂರವಾಣಿ ಕದ್ದಾಲಿಕೆಯು ಸಂವಿಧಾನ ಬಾಹಿರ ಕೃತ್ಯ ಎಂದು ಇಲ್ಲಿನ ನ್ಯಾಯಾಲಯ ಹೇಳಿದೆ. ಇದರಿಂದ ಅಧ್ಯಕ್ಷ ಒಬಾಮ ಅವರ ಆಡಳಿತಕ್ಕೆ ಹಿನ್ನಡೆ ಆಗಿದೆ.

‘ದೂರವಾಣಿ ಕದ್ದಾಲಿಕೆಯು ಅಂಕೆ ಮೀರಿದ ಮತ್ತು ವಿವೇಚನಾ ರಹಿತ ಕಾರ್ಯ. ಇದು ಖಾಸಗಿತನವನ್ನು   ಅತಿ ಕ್ರಮಿಸುವ ಕೃತ್ಯ’ ಎಂದು ವಾಷಿಂಗ್ಟನ್‌ ಡಿಸಿ ಜಿಲ್ಲಾ ನ್ಯಾಯಾಲಯ ಹೇಳಿದೆ.

ಕನ್ಸರ್ವೇಟಿವ್‌ ಪಕ್ಷದ ಕಾರ್ಯಕರ್ತ ಲ್ಯಾರಿ ಕ್ಲೇಮ್ಯಾನ್‌ ಅವರು ಎನ್‌ಎಸ್‌ಎ ಮಾಡುತ್ತಿರುವ ರಹಸ್ಯ ಮಾಹಿತಿ ಸಂಗ್ರಹವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಜಿಲ್ಲಾ ನ್ಯಾಯಾಧೀಶ  ರಿಚರ್ಡ್‌ ಲಿಯೋನ್‌ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಬೇಹುಗಾರಿಕಾ ಸಂಸ್ಥೆ ಗಳು ಸಂಗ್ರಹಿಸಿದ ರಹಸ್ಯ ಮಾಹಿತಿ ಗಳನ್ನು ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆಯ (ಸಿಐಎ) ಮಾಜಿ ಗುತ್ತಿಗೆದಾರ ಎಡ್ವರ್ಡ್‌ ಸ್ನೊಡೆನ್‌ ಅವರು ಬಯಲು ಮಾಡಿದ ನಂತರ ರಹಸ್ಯ ಮಾಹಿತಿ ಕಲೆಹಾಕುತ್ತಿದ್ದ ವಿಷಯವು ಬೆಳಕಿಗೆ ಬಂತು.

ಇನ್ನೊಂದು ಸುದ್ದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT