ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರವಾಣಿ ಸಂಪರ್ಕ 95 ಕೋಟಿ

Last Updated 2 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ದೇಶದಲ್ಲಿನ ಒಟ್ಟು ದೂರವಾಣಿ ಸಂಪರ್ಕಗಳ ಸಂಖ್ಯೆ 2011-12ನೇ ಹಣಕಾಸು ವರ್ಷದ ಕಡೆಯ ತೈಮಾಸಿಕದಲ್ಲಿ ಶೇ 2.68ರಷ್ಟು ಹೆಚ್ಚಿದೆ.

2011ರ ಡಿಸೆಂಬರ್ ಅಂತ್ಯದಲ್ಲಿ ದೇಶದಲ್ಲಿ ಸ್ಥಿರ ದೂರವಾಣಿ ಮತ್ತು ಮೊಬೈಲ್ ಫೋನ್ ಬಳಕೆದಾರರು 92.65 ಕೋಟಿಯಷ್ಟಿದ್ದರು. 2012ರ ಜನವರಿ-ಮಾರ್ಚ್ ಅವಧಿಯಲ್ಲಿ ಶೇ 2.68ರಷ್ಟು ಮಂದಿ ಹೊಸದಾಗಿ ಸೇರ್ಪಡೆಯಾದರು. ಆ ಮೂಲಕ ಮಾರ್ಚ್ 31ರ ವೇಳೆಗೆ ದೇಶದಲ್ಲಿನ ಫೋನ್ ಸಂಪರ್ಕಗಳ ಸಂಖ್ಯೆ 95.13 ಕೋಟಿಗೆ ಮುಟ್ಟಿತು.

ಮೊಬೈಲ್ ಫೋನ್ ಸಮೂಹಕ್ಕಂತೂ ನಿತ್ಯ ಹೊಸಬರ ಸೇರ್ಪಡೆ ನಡೆದೇ ಇದೆ. ದೇಶದಲ್ಲಿನ ಒಟ್ಟು ಮೊಬೈಲ್ (ಜಿಎಸ್‌ಎಂ ಮತ್ತು ಸಿಡಿಎಂಎ) ಫೋನ್ ಚಂದಾದಾರರ ಸಂಖ್ಯೆಯಲ್ಲಿ ಶೇ 2.83ರ ಏರಿಕೆಯಾಗಿದ್ದು, ಮಾರ್ಚ್ 31ರ ವೇಳೆಗೆ 91.91 ಕೋಟಿಗೆ ಹೆಚ್ಚಿದೆ.

ಒಂದೆಡೆ ಮೊಬೈಲ್ ಫೋನ್ ಸಂಖ್ಯೆ ಹೆಚ್ಚುತ್ತಿದ್ದರೆ, ಸ್ಥಿರ ದೂರವಾಣಿಗೆ ಬೇಡಿಕೆ ಕಡಿಮೆ ಆಗಿದೆ. 2011ರ ಡಿಸೆಂಬರ್ 31ರ ವೇಳೆ 3.27 ಕೋಟಿಯಷ್ಟಿದ್ದ ಸ್ಥಿರ ದೂರವಾಣಿ ಸಂಪರ್ಕ 2012ರ ಮಾರ್ಚ್ 31ರ ವೇಳೆಗೆ 3.21 ಕೋಟಿಗೆ ತಗ್ಗಿವೆ.

ಇದೇ ಅವಧಿಯಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ಶೇ 2.10ರಷ್ಟು ಹೆಚ್ಚಿದೆ. ಅಂತರ್ಜಾಲ ಸಂಪರ್ಕ ಡಿಸೆಂಬರ್‌ನಲ್ಲಿ 2.24 ಕೋಟಿಯಷ್ಟಿದ್ದರೆ, ಮಾರ್ಚ್ 31ರ ವೇಳೆಗೆ 2.28 ಕೋಟಿಗೆ ಹೆಚ್ಚಿದ್ದಿತು.

2011-12ರ 4ನೇ ತ್ರೈಮಾಸಿಕದಲ್ಲಿ ದೂರವಾಣಿ ಕ್ಷೇತ್ರದ ಒಟ್ಟಾರೆ ವರಮಾನ ರೂ. 49,243 ಕೋಟಿಯಷ್ಟಿದ್ದಿತು. ಪ್ರತಿ ಜಿಎಸ್‌ಎಂ ಸೇವೆ ಬಳಕೆದಾರರಿಂದ ಬಂದಿರುವ ಮಾಸಿಕ ವರಮಾನವೂ ಶೇ 1.66ರಷ್ಟು ಹೆಚ್ಚಿದೆ. ಅಂದರೆ ಸೆಲ್ಯು ಲರ್ ಕಂಪೆನಿಗಳು ಪ್ರತಿ ಚಂದಾದಾರ ರಿಂದ ಗಳಿಸುತ್ತಿದ್ದ ಹಣ ರೂ. 96ರಿಂದ ರೂ. 97ಕ್ಕೆ ಹೆಚ್ಚಿದೆ.

ಐಡಿಯಾ ನಂ. 1: ಐಡಿಯಾ ಸೆಲ್ಯುಲರ್ ಜನವರಿ-ಮಾರ್ಚ್ ನಡುವೆ ಅತಿ ಹೆಚ್ಚು (63.40 ಲಕ್ಷ) ಸದಸ್ಯರನ್ನು ತನ್ನ ಜಾಲಕ್ಕೆ ಸೇರಿಸಿಕೊಂಡಿದೆ. 61.30 ಲಕ್ಷ ಹೊಸ ಚಂದಾದಾರರನ್ನು ಹೊಂದುವ ಮೂಲಕ ಯುನಿನಾರ್ ಕಂಪೆನಿ ಎರಡನೇ ಸ್ಥಾನಕ್ಕೇರಿದೆ. ಆದರೆ ಬಿಎಸ್‌ಎನ್‌ಎಲ್, 12.20 ಲಕ್ಷ ಹೊಸ ಗ್ರಾಹಕರನ್ನಷ್ಟೇ ಪಡೆದುಕೊಂಡಿದೆ.

ಇನ್ನೊಂದೆಡೆ, ಕೆಲ ಕಂಪೆನಿಗಳು ಇದ್ದ ಸದಸ್ಯರನ್ನೂ ಕಳೆದುಕೊಂಡಿವೆ. ಟಾಟಾ 17 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದ್ದರೆ, ಎಸ್-ಟೆಲ್ ಕಂಪೆನಿಯಿಂದ 1.20 ಲಕ್ಷ ಚಂದಾದಾರರು ಹೊರ ಹೋಗಿದ್ದಾರೆ. `ಎಟಿಸಲಾಟ್~ ಸಹ 8.90 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT