ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರಸಂಪರ್ಕ: ಅಂಬಾನಿ ಸೋದರರ ಒಪ್ಪಂದ

Last Updated 2 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಆಸ್ತಿ ವಿಭಜನೆ ಜಗಳದಿಂದ ದೂರವಾಗಿದ್ದ ಶತಕೋಟ್ಯಧೀಶ ಅಂಬಾನಿ ಸೋದರರು ಇದೀಗ ಉದ್ಯಮ ಸಹಕಾರ ನೆಪದಲ್ಲಿ  ಕೈಜೋಡಿಸಿದ್ದಾರೆ. ದೂರಸಂಪರ್ಕ ಕ್ಷೇತ್ರದ ಸಹಕಾರದ ಒಪ್ಪಂದ ಮುಕೇಶ್ ಮತ್ತು ಅನಿಲ್ ಅವರನ್ನು ತುಸು ಹತ್ತಿರವಾಗಿಸಿದೆ!

ರೂ.1200 ಕೋಟಿ ಹೂಡಿಕೆಯಲ್ಲಿ ಹೊಸದಾಗಿ ದೂರಸಂಪರ್ಕ ಕಂಪೆನಿ ಆರಂಭಿಸಿರುವ ಮುಕೇಶ್ ಅಂಬಾನಿ, ಕಿರಿಯ ಸೋದರ ಅನಿಲ್ ಅಂಬಾನಿ ಒಡೆತನದ ಕಂಪೆನಿಯ ಆಪ್ಟಿಕಲ್ ಫೈಬರ್ ಕೇಬಲ್(ಒಎಫ್‌ಸಿ) ಜಾಲ ಬಳಸಿಕೊಳ್ಳುವ ಸಂಬಂಧ ಮಂಗಳವಾರ ಒಪ್ಪಂದ ಮಾಡಿಕೊಂಡರು.
ಅನಿಲ್ ನೇತೃತ್ವದ `ರಿಲಯನ್ಸ್ ಇಂಡಸ್ಟ್ರೀಸ್'ನ ದೂರಸಂಪರ್ಕ ವಿಭಾಗದ ಕಂಪೆನಿ `ಆರ್ ಕಾಮ್' ದೇಶದಾದ್ಯಂತ 1.20 ಲಕ್ಷ ಕಿ.ಮೀ. `ಒಎಫ್‌ಸಿ' ಜಾಲ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT