ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ದೂರಸಂಪರ್ಕ ಪರಿಕರ ರಫ್ತು ರೂ.22,000 ಕೋಟಿ'

Last Updated 25 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ದೇಶದ ದೂರಸಂಪರ್ಕ ಪರಿಕರ ತಯಾರಿಕೆ ಉದ್ಯಮ 2012-13ನೇ ಹಣಕಾಸು ವರ್ಷದಲ್ಲಿ ಡಿಸೆಂಬರ್ 31ರ ವೇಳೆಗೆ ರೂ.16,350 ಕೋಟಿ ಮೌಲ್ಯದ ಸರಕು ರಫ್ತು ಮಾಡಿದ್ದು, ಒಟ್ಟು ಹಣಕಾಸು ವರ್ಷದಲ್ಲಿ ರೂ.22,000 ಕೋಟಿಗೆ ಮುಟ್ಟಿರುವ ಅಂದಾಜಿದೆ ಎಂದು `ದೂರಸಂಪರ್ಕ ಪರಿಕರ ಮತ್ತು ಸೇವೆಗಳ ರಫ್ತು ಉತ್ತೇಜನ ಸಮಿತಿ'(ಟಿಇಪಿಸಿ) ಹೇಳಿದೆ.

ರಫ್ತು ಆಗಿರುವ ದೂರಸಂಪರ್ಕ ಸಾಧನಗಳಲ್ಲಿ ಶೇ 50ರಷ್ಟು ಹ್ಯಾಂಡ್‌ಸೆಟ್‌ಗಳೇ ಆಗಿವೆ ಎಂದು `ಟಿಇಪಿಸಿ' ಕಾರ್ಯದರ್ಶಿ ಆರ್.ಕೆ.ಪಾಠಕ್ ಗುರುವಾರ ಇಲ್ಲಿ ಕಾರ್ಯಕ್ರಮವೊಂದರ ವೇಳೆ ಸುದ್ದಿಗಾರರಿಗೆ ತಿಳಿಸಿದರು.

ಮುಂದಿನ ಜೂನ್ 18ರಿಂದ 21ರವರೆಗೆ ಸಿಂಗಪುರದಲ್ಲಿ `ಕಮ್ಯುನಿಕ್ ಏಷ್ಯಾ-2013' ಸಮಾವೇಶ ನಡೆಯಲಿದ್ದು, ದೇಶದ ದೂರಸಂಪರ್ಕ ಕ್ಷೇತ್ರದ ಕೆಲವು ಉದ್ಯಮಗಳ ಪ್ರತಿನಿಧಿಗಳನ್ನು ಕರೆದೊಯ್ಯಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT