ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂಸ್ರಾ ಕಥೆ

Last Updated 4 ಫೆಬ್ರುವರಿ 2011, 17:25 IST
ಅಕ್ಷರ ಗಾತ್ರ


‘ನೀವು ದೂಸ್ರಾ ಎಸೆತವನ್ನು ಕಲಿತಿದ್ದು ಯಾವಾಗ’ ಎಂದು ಅನೇ ಕರು ಹಲವಾರು ಬಾರಿ ಕೇಳಿದ್ದಾರೆ. ಆಗ ನಾನು ನೀಡಿರುವ ಉತ್ತರ: ಬಹಳ ಹಿಂದೆ ನಾನು ಶಾಲಾ ಕ್ರಿಕೆಟ್‌ನಲ್ಲಿ ಆಡುತ್ತಿದ್ದ ದಿನಗಳಲ್ಲಿ. ಚಂಡೀಗಡದಲ್ಲಿ ಆಡುತ್ತಿದ್ದ ಕಾಲದಲ್ಲಿ ಎಂದು ಹೇಳಿದ್ದೇನೆ. ಚಿಕ್ಕವನಾಗಿ ದ್ದಾಗಲೇ ಪಾಕಿಸ್ತಾನದ ಆಫ್ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಅವರು ಬೌಲಿಂಗ್ ಮಾಡುತ್ತಿದ್ದ ರೀತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದೆ. ವಿಶೇಷವಾಗಿ ಅವರು ದೂಸ್ರಾ ಎಸೆತ ವನ್ನು ಪ್ರಯೋಗಿಸುವಾಗ ಹೆಚ್ಚು ಆಸಕ್ತಿಯಿಂದ ವೀಕ್ಷಿಸುತ್ತಿದೆ. ವಿವಿಧ ದೇಶಗಳ ಬ್ಯಾಟ್ಸ್‌ಮನ್‌ಗಳ ವಿರುದ್ಧ ಸಕ್ಲೇನ್ ಬೌಲಿಂಗ್ ಮಾಡಿದ್ದನ್ನು ಸಾಕಷ್ಟು ಬಾರಿ ಮನದಲ್ಲಿಯೇ ವಿಶ್ಲೇಷಣೆ ಮಾಡಿದ್ದೇನೆ. ಅವರ ದೂಸ್ರಾ ಎಸೆತವನ್ನು ನಾನು ನನ್ನದಾಗಿಸಿಕೊಂಡೆ. ಆದರೆ ಇನ್ನಷ್ಟು ಪ್ರಭಾವಿಯಾಗಿ ಹೇಗೆ ಈ ವಿಶಿಷ್ಟವಾದ ಬೌಲಿಂಗ್ ತಂತ್ರವನ್ನು ಪ್ರಯೋಗಿಸು ವುದು ಹೇಗೆಂದು ನಿರಂತರವಾಗಿ ಅಭ್ಯಾಸ ಮಾಡಿ ಕಲಿತೆ.

ಕಾಲೇಜ್‌ನಲ್ಲಿ ನನ್ನ ಜೊತೆಗೆ ಆಡುತ್ತಿದ್ದ ಅರುಣ್ ವರ್ಮ ನನಗೆ ಅನೇಕ ಬಾರಿ ಸಹಾಯ ಮಾಡಿದ. ವಿಕೆಟ್ ಕೀಪರ್ ಆಗಿದ್ದ ಅರುಣ್ ನಾನು ಚೆಂಡನ್ನು ಎಸೆದಾಗ ಅದು ಸಾಗುವ ರೀತಿ ಹಾಗೂ ತಿರುವ ಪಡೆಯುವ ಕೋನದ ಬಗ್ಗೆ ಸ್ಪಷ್ಟವಾಗಿ ತಿಳಿಸುತ್ತಿದ್ದ. ‘ದೂಸ್ರಾ’ ಎಸೆತದ ನನ್ನದೇ ಆದ ತಂತ್ರವನ್ನು ಮೈಗೂಡಿಸಿಕೊಳ್ಳಲು ಇದರಿಂದಾಗಿ ಸಾಕಷ್ಟು ನೆರವಾಯಿತು. ಈ ಬೌಲಿಂಗ್ ಅಸ್ತ್ರವನ್ನು ಪ್ರಭಾವಿ ಆಗಿಸಿಕೊಳ್ಳುವ ಮಾರ್ಗ ಸುಲಭವಾಗಿರಲಿಲ್ಲ. ಸತತ ಎರಡು ವರ್ಷಗಳ ನಂತರ ಇದೊಂದು ವಿಕೆಟ್ ಕಬಳಿಸಲು ಸಹಕಾರಿ ಆಗುವ ಮಾರ್ಗ ಎನಿಸಿತು.

‘ದೂಸ್ರಾ’ ಎಸೆತವು ಪಂದ್ಯಗಳ ಸ್ವರೂಪವನ್ನು ಬದಲಿದ ಅನೇಕ ನೆನಪುಗಳಿವೆ. ನಾನು ವಿಕೆಟ್ ಪಡೆದೆ ಎನ್ನುವುದಕ್ಕಿಂತ ತಂಡಕ್ಕೆ ಪ್ರಯೋಜನ ಕಾರಿ ಆಗುವಂಥ ಬ್ಯಾಟ್ಸ್‌ಮನ್ ಗಳನ್ನು ಪೆವಿಲಿಯನ್‌ಗೆ ಕಳುಹಿಸಿದೆ ಎನ್ನುವ ಸಂತಸ ಆಗ ನನ್ನದಾಗಿತ್ತು. 2001ರಲ್ಲಿ ಕೋಲ್ಕತ್ತ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದವರು ನಮ್ಮೆಲ್ಲ ಬೌಲರ್‌ಗಳನ್ನು ದಂಡಿಸಿದ್ದರು. ಆಗ ನಾನು ಎದುರಾಳಿ ಬ್ಯಾಟ್ಸ್‌ಮನ್ ರಿಕಿ ಪಾಂಟಿಂಗ್ ಮೇಲೆ ‘ದೂಸ್ರಾ’ ಪ್ರಯೋಗಿಸಿದೆ. ಅವರು ಎಲ್‌ಬಿ ಡಬ್ಲ್ಯು ಆದರು. ಅದರ ಬೆನ್ನಲ್ಲಿಯೇ ಆ್ಯಡಮ್ ಗಿಲ್‌ಕ್ರಿಸ್ಟ್ ಹಾಗೂ ಶೇನ್ ವಾರ್ನ್ ಅವರೂ ವಿಕೆಟ್ ಒಪ್ಪಿಸಿ ದ್ದರು. ಆಗ ಪಂದ್ಯದ ಸ್ವರೂಪವೇ ಬದಲಾಗಿತ್ತು. ಅಂಥ ಪ್ರಯೋಜನ ಕಾರಿ ಬೌಲಿಂಗ್ ಮಾಡಿದ್ದು ಹೆಮ್ಮೆ.

ಪಂದ್ಯಕ್ಕೆ ರೋಚಕ ತಿರುವು ನೀಡುವವರು ಬ್ಯಾಟ್ಸ್‌ಮನ್‌ಗಳೆಂದು ಸಹಜವಾಗಿ ಭಾವಿಸಲಾಗುತ್ತದೆ. ಬೌಲರ್‌ಗಳೂ ಹೀಗೆ ಮಾಡುತ್ತಾರೆ ಎನ್ನುವ ಕಡೆಗೆ ಗಮನ ನೀಡಲಾಗುವುದೇ ಇಲ್ಲ. ಅದೇನೇ ಇರಲಿ ಆಕ್ರಮಣಕಾರಿ ಬ್ಯಾಟಿಂಗ್ ಆಡುವಂಥವರ ಎದುರು ದಾಳಿ ನಡೆಸುವುದು ಸುಲಭವಲ್ಲ. ನಮ್ಮ ತಂಡದ ವೀರೇಂದ್ರ ಸೆಹ್ವಾಗ್ ಹಾಗೂ ಮಹೇಂದ್ರ ಸಿಂಗ್ ದೋನಿ ಅವರು ಎದುರಾಳಿ ಬೌಲರ್‌ಗಳಿಗೆ ಇದೇ ಕಾರಣಕ್ಕಾಗಿ ದುಸ್ವಪ್ನವಾಗಿದ್ದಾರೆ.
 -ಗೇಮ್‌ಪ್ಲಾನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT