ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ, ರಷ್ಯನ್ ಕಂಪೆನಿಗಳಿಗೆ ಜಮೀನು: `ರಾಜ್ಯ ಸರ್ಕಾರದ್ದೇ ಕೈವಾಡ'

Last Updated 5 ಡಿಸೆಂಬರ್ 2012, 8:28 IST
ಅಕ್ಷರ ಗಾತ್ರ

ಮೈಸೂರು: ಚಾಮುಂಡಿಬೆಟ್ಟ ಬಿ ಖರಾಬು ಜಮೀನು ವಿವಾದದಲ್ಲಿ ರಾಜ್ಯ ಸರ್ಕಾರದ ಕೈವಾಡವಿದೆ. ಇಲ್ಲಿಯ ಆರ್‌ಟಿಸಿ ಇಲ್ಲದಿರುವ 467 ಎಕರೆ ಜಮೀನಿನಲ್ಲಿ ಈಗಾಗಲೇ ದೆಹಲಿ ಮತ್ತು ರಷ್ಯಾ ಮೂಲದ ಕಂಪೆನಿಗಳಿಗೆ ಟೌನ್‌ಷಿಪ್ ಕಟ್ಟಲು 63 ಎಕರೆ ಜಾಗ ನೀಡಲಾಗಿದೆ ಎಂಬ ಮಾಹಿತಿ ಇದೆ ಎಂದು ಮೈಸೂರು ಕಾಳಜಿಯುಳ್ಳ ಮತ್ತು ಮಾಹಿತಿಯುಳ್ಳ ನಾಗರಿಕರ ಸಂಸ್ಥೆಯ (ಎಸಿಐಸಿಎಂ) ಸಂಚಾಲಕ ಎಂ. ಲಕ್ಷ್ಮಣ್ ಆರೋಪಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಆಗಸ್ಟ್ 2012ನೇ ತಿಂಗಳಲ್ಲಿಯೇ ಬಿ ಖರಾಬು ಭೂಮಿಯನ್ನು ವ್ಯವಸಾಯದಿಂದ ವಸತಿ ಬದಲಾವಣೆಗೆ  ಬಗ್ಗೆ ಆದೇಶ ಹೊರಡಿಸಿದೆ. ತದನಂತರ ಸೆಪ್ಟೆಂಬರ್‌ನಲ್ಲಿ ಕುರುಬಾರಹಳ್ಳಿಯ ಸರ್ವೆ ನಂ 4ರ ಪೈಕಿ 1541 ಎಕರೆ ಜಮೀನಿನ ಕೆಲವು ಸರ್ವೇ ನಂಬರ್‌ಗಳಲ್ಲಿ ವ್ಯವಸಾಯದಿಂದ ವಸತಿಗೆ ಬದಲಾವಣೆಮಾಡಿರುವ ಅದೇಶ ಹೊರಡಿಸಿ, ಪೂರ್ತಿ ಜಮೀನು ವ್ಯವಸಾಯಕ್ಕೆ ಉಪಯೋಗವಾಗುತ್ತಿದೆ ಎಂದು ಸಾಬೀತುಪಡಿಸಲು ಉದ್ದೇಶಿಸಲಾಗಿದೆ.

ಆದರೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಸಾರ್ವಜನಿಕರ ಆಕ್ಷೇಪಣೆಗಳ ಕುರಿತು ಸಭೆ ನಡೆಸುತ್ತದೆ. ಇದರ ಅರ್ಥ ಏನು. ಆದೇಶ ಹೊರಡಿಸುವ ಮುನ್ನವೇ ಸಭೆ ನಡೆಯಬೇಕಿತ್ತು. ಆದರೆ ಹತ್ತು ಸಾವಿರ ಕೋಟಿ ರೂಪಾಯಿ ಬೆಲೆ ಬಾಳುವ ಈ ಭೂಮಿಯನ್ನು ಕಬಳಿಸಲು ದೊಡ್ಡ ದೊಡ್ಡ ಪ್ರಭಾವಿ ವ್ಯಕ್ತಿಗಳು ಶಾಮೀಲಾಗಿದ್ದಾರೆ' ಎಂದು ಆಪಾದಿಸಿದರು.

`ಈ ಜಮೀನು ರಾಜರ ಮನೆತನಕ್ಕೆ ಸೇರಿದ್ದರೂ ಅದು ಬಿ ಖರಾಬು ಜಮೀನಾಗಿರುತ್ತದೆ. ಇಂತಹ ಜಮೀನು ಸಾರ್ವಜನಿಕ ಉಪಯೋಗಕ್ಕೆ ಮಾತ್ರ ಮೀಸಲಾಗಿರುತ್ತದೆ ಎಂಬ ಕಾನೂನಿದೆ. ಈ ನೂನು ತಿದ್ದುಪಡಿಯಾಗದೇ ಆ ಭೂಮಿ ಪರಿವರ್ತನೆಗೆ ಅವಕಾಶವಿಲ್ಲ. ಪರ, ವಿರೋಧಗಳ ಮೂಲಕ ಜನರನ್ನು ಗೊಂದಕ್ಕೆ ಈಡು ಮಾಡಲಾಗುತ್ತಿದೆ.

ಈ ನಡುವೆ ಜಿಲ್ಲಾಧಿಕಾರಿ ವಸ್ತ್ರದ್ ಅವರ ವರ್ಗಾವಣೆಯಾಗಿದೆ. ಸಿಓಡಿ ತನಿಖೆಗೆ ಆದೇಶವನ್ನೇನೋ ಸರ್ಕಾರ ನೀಡಿದೆ. ಆದರೆ, ಅದರಲ್ಲಿ ತಪ್ಪಿತಸ್ಥರ ವಿರುದ್ಧ ತನಿಖೆಯ ಮಾತಿಲ್ಲ. ಕೇವಲ ಎ.ಬಿ ಮತ್ತು ಸಿ ಖರಾಬು ಭೂಮಿಯ ಕುರಿತು ವಿವರಣೆ ಕೇಳಲಾಗಿದೆ. ಇದರಿಂದ ಸಿಓಡಿ ತನಿಖೆ ನೆಪಮಾತ್ರವಾಗುತ್ತದೆ. ಆದ್ದರಿಂದ ಒಬ್ಬ ನ್ಯಾಯಾಧೀಶರ ಮೂಲಕ ತನಿಖೆ ನಡೆಯಬೇಕು. ತ್ಪೃಿತಸ್ಥರಿಗೆ ಶಿಕ್ಷೆಯಾಗಬೇಕು' ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT