ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಡಿವಿಜಿ ಜನ್ಮದಿನ ಆಚರಣೆ

Last Updated 7 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಕರ್ನಾಟಕ ಸಂಘ ಮತ್ತು ಡೊಂಬಿವಲಿಯ ಮೈಸೂರು ಸಂಗೀತ ವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಡಿವಿಜಿ ಅವರ  ಜನ್ಮದಿನವನ್ನು ಇಲ್ಲಿ ಆಚರಿಸಲಾಯಿತು.

ಈ ಸಂಬಂಧ ಏರ್ಪಡಿಸಿದ ವಿಚಾರಗೋಷ್ಠಿಯಲ್ಲಿ ಶಿವಮೊಗ್ಗದ ನ್ಯಾಷನಲ್ ಕಾಲೇಜಿನ ಕನ್ನಡ ವಿಭಾಗದ ಮಾಜಿ ಮುಖ್ಯಸ್ಥ ಎಂ.ಬಿ.ನಟರಾಜ್ ಅವರು ಡಿವಿಜಿ ಅವರ ಬದುಕು ಬರಹದ ಬಗ್ಗೆ ಮತ್ತು ದೆಹಲಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಟಿ.ಎಸ್. ಸತ್ಯನಾಥನ್ ಅವರು ಡಿವಿಜಿ ಅವರ ಸಂಸ್ಕೃತಿ ಪರಿಕಲ್ಪನೆಯ ಬಗ್ಗೆ ಉಪನ್ಯಾಸ ನೀಡಿದರು. ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ.ವೆಂಕಟಾಚಲ ಹೆಗಡೆ ಅವರು ಅಧ್ಯಕ್ಷತೆ ವಹಿಸಿದ್ದರು.

ಉಮಾ ನಾಗಭೂಷಣ್ ಅವರು ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಮತ್ತು ಅಂತಃಪುರ ಗೀತೆಗಳಿಂದ ಆಯ್ದಗೀತೆಗಳನ್ನು ಹಾಡಿದರು. ಕಳೆದ ಮೂರು ದಶಕಗಳಿಂದ ಮುಂಬೈಯಲ್ಲಿ ಸಂಗೀತ ಶಿಕ್ಷಣ ಮತ್ತು ಸಾಂಸ್ಕೃತಿಕ ಚುಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಮೈಸೂರು ಸಂಗೀತ ವಿಶ್ವವಿದ್ಯಾಲಯದ ಸ್ಥಾಪಕರಾದ ವಿದುಷಿ ಉಮಾ ನಾಗಭೂಷಣ್ ಮತ್ತು ಕಾರ್ಯನಿರ್ವಾಹಕ ನಾಗಭೂಷಣ್ ಅವರನ್ನು ಡಾ.ವೆಂಕಟಾಚಲ ಹೆಗಡೆ ಸನ್ಮಾನಿಸಿದರು.

ಶಿವಾಚಾರ್ಯ ಸಾಮೀಜಿಗೆ ಪ್ರಶಸ್ತಿ
ದುಬೈ: ಧ್ವನಿ ಪ್ರತಿಷ್ಠಾನದ 28ನೇ ವಾರ್ಷಿಕೋತ್ಸವ ಹಾಗೂ ಧ್ವನಿ ಶ್ರೀರಂಗ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಲ್ಲಿನ ಎಮಿರೇಟ್ಸ್ ಸಂಭಾಂಗಣದಲ್ಲಿ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜ್ ಅವರು ಕನ್ನಡ ರಂಗಭೂಮಿಯ ಬೆಳವಣಿಗೆಗಾಗಿ ದುಡಿಯುತ್ತಿರುವ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಧ್ವನಿ ಶ್ರೀರಂಗ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿಯನ್ನು ಕನ್ನಡ ರಂಗಭೂಮಿಗಾಗಿ ದುಡಿಯುತ್ತಿರುವ ಕನ್ನಡ ರಂಗಕರ್ಮಿಗಳ ಪರವಾಗಿ ಸ್ವೀಕರಿಸುವುದಾಗಿ ತಿಳಿಸಿದ ಸ್ವಾಮೀಜಿ ಸಾಣೆಹಳ್ಳಿಯಂತಹ ಕುಗ್ರಾಮದಲ್ಲಿ ರಂಗ ಚಟುವಟಿಕೆ ನಡೆಸುತ್ತಿರುವ ಉದ್ದೇಶವನ್ನು ವಿವರಿಸಿದರು.

ಕಳೆದ 28 ವರ್ಷಗಳಿಂದ ಧ್ವನಿ ಪ್ರತಿಷ್ಠಾನ ನಡೆಸುತ್ತಿರುವ ಚಟುವಟಿಕೆಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜ್ ಪ್ರಶಂಸಿದರು. ಅನಿವಾಸಿ ಉದ್ಯಮಿ ಶ್ರೀನಿವಾಸ ಶ್ರೀರಂಗಂ, ಅರಬ್- ಉಡುಪಿ ಹೋಟೆಲ್ ಸಮೂಹದ ನಿರ್ದೇಶಕ ಶೇಖರ್ ಬಿ.ಶೆಟ್ಟಿ ಹಾಗೂ ಇತರ ಗಣ್ಯರಾದ ಜೇಮ್ಸ ಮೆಂಡೊನ್ಸಾ,  ಪ್ರವೀಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಗಿರೀಶ್ ಕಾರ್ನಾಡ್ ಅವರ `ಬಲಿ' ನಾಟಕವನ್ನು ಪ್ರಕಾಶ್ ರಾವ್ ಪಯ್ಯಾರ್ ಅವರ ನಿರ್ದೇಶನದಲ್ಲಿ ಅಭಿನಯಿಸಲಾಯಿತು.

ಬಹರೇನ್ :ಯಕ್ಷಗಾನ ತಂಡದ ಸಭೆ
ಮನಾಮ (ಬಹರೇನ್) : ಸ್ಥಳೀಯ ಕನ್ನಡ ಸಂಘದ ಯಕ್ಷಗಾನ ತಂಡದ ವಾರ್ಷಿಕ ಕಾರ್ಯಕಾರಿಣಿ ಸಭೆ ಇತ್ತೀಚೆಗೆ ಸಂಘದ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷ  ರಾಜ್ ಕುಮಾರ್ ಆರಂಭದಲ್ಲಿ ಮಾತನಾಡಿದರು. ತಂಡದ ಹಿರಿಯ ಕಲಾವಿದ ಶ್ರಿನಿವಾಸ್ ಭಟ್ ಕಳವಾರು ಮಾರ್ಗದರ್ಶನದಲ್ಲಿ  ಪ್ರಸಕ್ತ ಸಾಲಿನ ಯಕ್ಷಗಾನ ಸಂಬಂಧಿತ ಕಾರ್ಯಚಟುವಟಿಕೆಗಳ ಬಗ್ಗೆ ರೂಪುರೇಷೆಯನ್ನು ನಿರ್ಧರಿಸಲಾಯಿತು.

ಹಿರಿಯ ಭಾಗವತ ಎಚ್. ಕೆ . ಪೈ ತಂಡದ ಮುಖ್ಯ ನಿರ್ವಾಹಕ ಮತ್ತು ಹಿರಿಯ ಕಲಾವಿದ ದೂಮಣ್ಣ ರೈ ಕಾರ್ಯನಿರ್ವಾಹಕರಾಗಿ ಆಯ್ಕೆಯಾದರು. ಉಪಸ್ಥಿತರಿದ್ದ ಮಾಜಿ ಅಧ್ಯಕ್ಷ  ಕೆ.ಸಿ.ಉದ್ಯಾವರ, ಸುರೇಂದ್ರ ಶೆಟ್ಟಿ ಮೊದಲಾದವರು ಶುಭ ಹಾರೈಸಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT