ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲ ನೆಮ್ಮದಿಯ ತಾಣ

Last Updated 3 ಮೇ 2012, 4:30 IST
ಅಕ್ಷರ ಗಾತ್ರ

ವಿಜಯಪುರ: ದೇವಾಲಯಗಳು ಮನುಷ್ಯನ ಮನಸ್ಸಿಗೆ ನೆಮ್ಮದಿ ನೀಡುವ ಶಾಂತಿಯ ಸ್ಥಳವಾಗಿವೆ ಎಂದು ಆವತಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎ.ವಿ.ನಾರಾಯಣ ಸ್ವಾಮಿ ಅಭಿಪ್ರಾಯಪಟ್ಟರು.

ಸಮೀಪದ ಆವತಿಯಲ್ಲಿ ಆರ್ಯವೈಶ್ಯ ಸಂಘವು ಬುಧವಾರ ಏರ್ಪಡಿಸಿದ್ದ ವಾಸವಿ, ಕನ್ನಿಕಾ ಪರಮೇಶ್ವರಿ ಮೂರ್ತಿಗಳ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಮನಸ್ಸಿನಲ್ಲಿ ಸತ್‌ಚಿಂತನೆಗಳು ಮೂಡಲು ಈ ಸ್ಥಳಗಳು ಸ್ಫೂರ್ತಿ ನೀಡುತ್ತವೆ ಎಂದರು.

ಚಿಕ್ಕಬಳ್ಳಾಪುರ ಜ್ಲ್ಲಿಲಾ ಆರ್ಯವೈಶ್ಯ ಮಂಡಳಿ ಕಾರ್ಯದರ್ಶಿ ಎಂ.ಎನ್.ಕೃಷ್ಣಮೂರ್ತಿ, `ಆವತಿ ಗ್ರಾಮದಲ್ಲಿ ಆರ್ಯವೈಶ್ಯ ಜನಾಂಗದ 16 ಕುಟುಂಬಗಳು ಮಾತ್ರವೇ ಇದ್ದರೂ ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿ ದೇವಾಲಯ ನಿರ್ಮಾಣದ ಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ~  ಎಂದು ಸಂತಸ ವ್ಯಕ್ತಪಡಿಸಿದರು.

ಅಖಿಲ ಭಾರತ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ.ರವಿಶಂಕರ್ ಮಾತನಾಡಿ, ಪ್ರತಿಷ್ಠಾಪನಾ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಕಳೆದ 3 ದಿನಗಳಿಂದ ದೇವಾಲಯದ  ಸುತ್ತಲ ವಾತಾವರಣ ನಿರ್ಮಲವಾಗಿದೆ. ಮನಸ್ಸಿಗೆ ಮುದ ನೀಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಆವತಿ ಆರ್ಯ ವೈಶ್ಯ ಸಂಘದ ಅಧ್ಯಕ್ಷ ಎನ್.ಆರ್.ಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯದರ್ಶಿ ಎನ್.ಆರ್.ಅಶ್ವತ್ಥ್ ನಾರಾಯಣಮೂರ್ತಿ ಸಂಘದ ವರದಿ ಓದಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆವತಿ ಗ್ರಾ.ಪಂ.ಅಧ್ಯಕ್ಷೆ ಮಮತಾ ನಾರಾಯಣ ಸ್ವಾಮಿ, ಉಪಾಧ್ಯಕ್ಷ ತಿಮ್ಮರಾಯಪ್ಪ, ಸರ್ಪಭೂಷಣ್, ಬೆಂಗಳೂರು ಆರ್ಯವೈಶ್ಯ ಸಂಘಗಳ ಒಕ್ಕೂಟದ ಅಧ್ಯಕ್ಷ ಕೆ.ಆರ್.ಕೃಷ್ಣ, ಸಂಸ್ಥಾಪಕ ಅಧ್ಯಕ್ಷ ಎಸ್. ಆರ್.ವಿಜಯಕುಮಾರ್, ದೇವನಹಳ್ಳಿ ಸಂಘದ ಎ.ವಿ.ನಾಗೇಶ್, ವಿಜಯಪುರ ಸಂಘದ ಅಧ್ಯಕ್ಷ ಹರೀಶ್ ಕುಮಾರ್, ನವೋದಯ ಶಾಲೆ ಕಾರ್ಯದರ್ಶಿ ನಾರಾಯಣಸ್ವಾಮಿ ಇತರರು ಇದ್ದರು.

ವಾಸವಿ ಮಹಿಳಾ ಮಂಡಳಿಯವರು ಪ್ರಾರ್ಥಿಸಿದರು. ಉಪಾಧ್ಯಕ್ಷ ಎನ್.ಆರ್. ಮದನ್ ಕುಮಾರ್ ಸ್ವಾಗತಿಸಿದರು. ಖಜಾಂಚಿ ಡಿ.ವಿ.ಸತೀಶ್ ಕುಮಾರ್ ನಿರೂಪಿಸಿದರು. ವಿಶ್ವಾಸ್ ವಂದಿಸಿದರು.

4 ಅಡಿ ಎತ್ತರದ ಕನ್ನಿಕಾ ಪರಮೇಶ್ವರಿ ವಿಗ್ರಹ,  3 ಅಡಿ ಎತ್ತರದ ಗಣಪತಿ ವಿಗ್ರಹ, 2.5 ಅಡಿ ಎತ್ತರದ ನಗರೇಶ್ವರ ಸ್ವಾಮಿ 3 ಅಡಿಯ ವೆಂಕಟರಮಣ ಸ್ವಾಮಿ ದೇವರ ವಿಗ್ರಹಗಳನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಲಾಯಿತು. ಗಣಪತಿ  ಗಂಗಾಪೂಜೆ, ಧ್ವಜಾರೋಹಣ, ಕಲಶ ಸ್ಥಾಪನೆ, ಯಾಗ ಮಂಟಪ ಪ್ರವೇಶ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT