ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ದೇವಮಾನವ'ನಿಗೆ ಸೊಳ್ಳೆಕಾಟ!

Last Updated 4 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಜೋಧಪುರ (ಐಎಎನ್‌ಎಸ್): ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಜೈಲು ಸೇರಿರುವ `ಸ್ವಯಂಘೋಷಿತ ದೇವಮಾನವ' ಅಸಾರಾಮ್ ಬಾಪು ವಿಪರೀತ ಸೊಳ್ಳೆಗಳ ಕಾಟ ಅನುಭವಿಸುತ್ತಿದ್ದಾರೆ.

14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ 72 ವರ್ಷದ ಅಸಾರಾಮ್ ಜೋಧಪುರದ ಕೇಂದ್ರ ಕಾರಾಗೃಹದಲ್ಲಿ ಸೊಳ್ಳೆಗಳ ಕಾಟ ವಿಪರೀತವಾದ ಕಾರಣ ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ರಾತ್ರಿ ನಿದ್ದೆ ಮಾಡಲಾಗದೆ ಎರಡು ದಿನಗಳನ್ನು ಕಳೆದಿರುವ ಅವರು ಬಳಲಿದಂತೆ ಕಾಣುತ್ತಿದ್ದಾರೆ ಎಂದು ಕಾರಾಗೃಹದ ಮೂಲಗಳು ತಿಳಿಸಿವೆ.

ಪ್ರತೇಕ ಕೊಠಡಿಯಲ್ಲಿರುವ ಅಸಾರಾಮ್ ಅವರಿಗೆ ಮಲಗಲು ಚಾಪೆ ನೀಡಲಾಗಿದೆ. ಗಂಗಾಜಲವನ್ನು ಸಿಂಪಡಿಸಿ ಕೊಠಡಿಯನ್ನು ಶುದ್ಧಗೊಳಿಸಿಕೊಂಡಿದ್ದಾರೆ. ಜೊತೆಗಿರುವ ಇತರ ಕೈದಿಗಳು ಅವರ ಬೇಕು, ಬೇಡಿಕೆಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಸಹ ಕೈದಿಗಳಿಗೆ ನೀಡುವ ಆಹಾರವನ್ನು ಸೇವಿಸಲು ನಿರಾಕರಿಸಿರುವ ಅವರು ಗೋಡಂಬಿ, ದ್ರಾಕ್ಷಿ ಸೇವಿಸಿದ್ದಾರೆ. ಅವರಿಗಾಗಿಯೇ ಕಿಚಡಿ ಸಿದ್ಧಪಡಿಸಿ ಕೊಡಲಾಗುತ್ತಿದೆ. ಅಸಾರಾಮ್‌ಗೆ ಯಾವುದೇ ವಿಶೇಷ ಸೌಲಭ್ಯ ನೀಡಲಾಗುತ್ತಿಲ್ಲ ಎಂದು ಕಾರಾಗೃಹದ ಅಧಿಕಾರಿಗಳು ಹೇಳಿದ್ದಾರೆ. ಇತರ ಕೈದಿಗಳಂತೆಯೇ ಅಸಾರಾಮ್ ಅವರನ್ನೂ ಪರಿಗಣಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT