ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಯಾನಿ ವಿಚಾರಣೆ ಕ್ರಮ ಖಂಡಿಸಿ ಪ್ರತಿಭಟನೆ

Last Updated 21 ಡಿಸೆಂಬರ್ 2013, 9:52 IST
ಅಕ್ಷರ ಗಾತ್ರ

ಶಿವಮೊಗ್ಗ: ಅಮೇರಿಕಾದ ನ್ಯೂಯಾರ್ಕ್‌ನಲ್ಲಿ ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರನ್ನು ಮನೆಗೆಲಸದ ಸಹಾಯಕಿ ನೀಡಿದ ದೂರಿನ ಮೇಲೆ ಬಂಧಿಸಿ, ವಿಚಾರಣೆಗೆ ಒಳಪಡಿಸಿದ ರೀತಿ ಅಮಾನವೀಯವಾದದ್ದು ಜೆಸಿಐ ತಂಡದ ಪದಾಧಿಕಾರಿಗಳು ಈಚೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಅಮೇರಿಕಾದ ಈ ಕ್ರಮದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ತದನಂತರ ರಾಷ್ಟ್ರಪತಿಗೆ
ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು.

ಮನೆಗೆಲಸದಾಕೆ ನೀಡಿದ ದೂರನ್ನು ಸರಿಯಾಗಿ ಪರಿಶೀಲನೆ ನಡೆಸದೆ ದೇವಯಾನಿ ಖೋಬ್ರಾಗಡೆ
ಅವರನ್ನು ಬಂಧನಕ್ಕೆ ಒಳಪಡಿಸಲಾಗಿದೆ. ಅಲ್ಲದೇ, ವಿಚಾರಣೆ ವೇಳೆ ಅವರನ್ನು ವಿವಸ್ತ್ರಗೊಳಿಸಿದ್ದು ಅತ್ಯಂತ ನಾಚಿಗೇಡಿನ ಸಂಗತಿಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಜೆಸಿಐ ಶಿವಮೊಗ್ಗ ಮಲೆನಾಡು ಪದಾಧಿಕಾರಿಗಳಾದ ರಘು, ಪ್ರವೀಣ್, ಜೆಸಿಐ ಶಿವಮೊಗ್ಗ  ಭಾವನಾ  ಸ್ಮಿತಾ, ಪುಷ್ಪಶೆಟ್ಟಿ, ಜೆಸಿಐ ಶಿವಮೊಗ್ಗ ವಿವೇಕದ ಪದಾಧಿಕಾರಿ ರೇಖಾ,  ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಚಂದ್ರಶೇಖರ್‌, ಕಿರಣ್‌ ಮತ್ತಿತರರು
ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT