ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ಸಂಪತ್ತು ದೇವರಲ್ಲೇ ಇರಲಿ

Last Updated 6 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

`ಭಕ್ತರನ್ನು ಅಂಜಿಸುತ್ತಿರುವ ದೈವಜ್ಞರು~ ಎಂಬ (ವಾವಾ ಆ. 26 ಪ್ರೊ. ಆರ್.ವಿ. ಹೊರಡಿ) ಪತ್ರಕ್ಕೊಂದು ಪ್ರತಿಕ್ರಿಯೆ.

 ಸದ್ಯ ಕೇರಳದ ಅನಂತಪದ್ಮನಾಭನ ಬಳಿ ಭದ್ರವಾಗಿರುವ ಐಶ್ವರ್ಯವನ್ನು ಹಂಚಿ ತಿನ್ನುವ ಮಟ್ಟದ ಬಡತನ ನಮ್ಮ ದೇಶಕ್ಕಿಲ್ಲ. ಆದ್ದರಿಂದ ಅದು ಅಲ್ಲೇ ಭದ್ರವಾಗಿರಲಿ.

ಒಂದು ವೇಳೆ ಈಗಿರುವ ದೇವ ಸಂಪತ್ತನ್ನು ಸರ್ಕಾರ ವಶಪಡಿಸಿಕೊಂಡರೆ ಅದು ಚಲ್ಲಾಪಿಲ್ಲಿಯಾಗಿ ವಿದೇಶ ಸೇರಬಹುದು ಅಥವಾ ಕಳ್ಳರ, ಸುಳ್ಳರ ಪಾಲಾಗಬಹುದು.

ಮಾರಾಟ ಮಾಡಿದರೆ ಬಂದ ಹಣ ಪುಢಾರಿಗಳ ಪಾಲಾಗಬಹುದು. ಬಡವರಿಗೇನೂ ದಕ್ಕದು. ಇರುವ ಐಶ್ವರ್ಯ ಎಲ್ಲಿಗೋ ಹೋಗಿ ಹಾಳಾಗುವುದು ಬೇಡವೆಂಬುದೇ ದೈವ(ಜ್ಞ) ಸಂದೇಶ. ಇದನ್ನು ನಾವು ಅರ್ಥಮಾಡಿಕೊಳ್ಳಬೇಕು.

ಇದರ ಬದಲು ನಮ್ಮ ರಾಜಕಾರಣಿಗಳೂ ಪುಢಾರಿಗಳೂ ವಿದೇಶೀ ಬ್ಯಾಂಕ್‌ಗಳಲ್ಲಿಟ್ಟಿರುವ ನಮ್ಮ ದೇಶದ ಬಡವರ ನೆತ್ತರಿನ ಫಲವಾದ ಕೋಟ್ಯಾಂತರ ಮೊತ್ತದ ಹಣ ನಮ್ಮ ದೇಶಕ್ಕೆ ವಾಪಾಸು ಬರುವಂತಾಗಲಿ, ಅದು ನಮ್ಮ ಬಡತನವನ್ನು ದೂರ ಮಾಡಲು ಸಾಕು! ಇದು ವಾಸ್ತವ!
ದೇವರ ಧನ ದೇಶದ ಧನ, ಅದು ಇಲ್ಲೇ ಭದ್ರವಾಗಿರಲಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT