ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಸ್ಥಾನದಲ್ಲಿಯೇ ಸಾಗಿದೆ ಚಿಣ್ಣರ ಆಟ-ಪಾಠ...!

Last Updated 9 ಜುಲೈ 2012, 5:50 IST
ಅಕ್ಷರ ಗಾತ್ರ

ಗಜೇಂದ್ರಗಡ: ರೋಣ ತಾಲ್ಲೂಕಿನ ನೂರಾರು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳೇ ಇಲ್ಲ. ದೇವಸ್ಥಾನದಲ್ಲಿ ಬಾರಿಸುವ ಗಂಟೆ, ಜಾಗಟೆ ಸದ್ದು ಚಿಣ್ಣರ ಶಿಶು ಗೀತೆಗೆ ಹಿನ್ನೆಲೆ ಸಂಗೀತ!

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ತಾಲ್ಲೂಕಿನಲ್ಲಿ 265 ಅಂಗನವಾಡಿ ಕೇಂದ್ರಗಳಿವೆ. ಅದ ರಲ್ಲಿ 160 ಕೇಂದ್ರಗಳಿಗೆ ಸ್ವಂತ ಕಟ್ಟಡ ಗಳಿವೆ. ಇನ್ನುಳಿದ 105 ಕೇಂದ್ರಗಳಿಗೆ ಸ್ವಂತ ಕಟ್ಟಡಗಳೇ ಇಲ್ಲ. ಆ ಎಲ್ಲ ಕೇಂದ್ರ ಗಳಿಗೆ ದೇವಸ್ಥಾನ, ಸಮುದಾಯ ಭವನ ಮತ್ತಿತರ ಕಟ್ಟಗಳೇ ಆಶ್ರಯ ತಾಣ. ಬಿಸಿಲು, ಗಾಳಿ ಯಥೇಚ್ಛ!

ಇನ್ನೂ ಕೆಲವೆಡೆ ಕೇಂದ್ರ ನಡೆಯುತ್ತಿ ರುವ ಕಟ್ಟಡಗಳನ್ನು ಕಂಡು ಆರ್ಶ್ಚಗೊಂಡರೂ ಅಚ್ಚರಿಯಿಲ್ಲ. ಯಾವುದೇ ಸಂದರ್ಭದಲ್ಲಿ ಅಪಾಯ ಬಂದೆರಗುವ ಹಂತದಲ್ಲಿವೆ.

ಆಟಿಕೆ ಸಲಕರಣಿಗಳೇ ಇಲ್ಲ: ಆಟಿಕೆ ವಸ್ತುಗಳು ಮಕ್ಕಳನ್ನು ಆಕರ್ಷಿಸುತ್ತವೆ. ಆದರೆ, ಬಡ ಮಕ್ಕಳ ಪಾಲಿನ ಕಾನ್ವೆಂಟ್‌ಗಳಾಗಿರುವ ಅಂಗನವಾಡಿ ಕೇಂದ್ರಗಳಲ್ಲಿ ಮಾತ್ರ ದೀಪ ಹಚ್ಚಿ ಹುಡುಕಿದರೂ ಆಟಿಕೆ ಸಾಮಾನುಗಳು ಕಾಣಿಸುವುದಿಲ್ಲ. ಹತ್ತಾರು ವರ್ಷಗಳಿಂದ ಇಲಾಖೆ ಆಟಿಕೆ ಪರಿಕರಗಳನ್ನು ಪೂರೈಸಿಲ್ಲ. ಹಿಂದಿದ್ದ ಒಂದೋ ಎರಡೋ ಸಲಕರಣೆಗಳ ಅವಶೇಷಗಳೂ ಸಿಗೊಲ್ಲ. ಇದರಿಂದ ಮಕ್ಕಳ ಹಾಜರಾತಿ ಸಾಕಷ್ಟು ಕ್ಷೀಣಿ ಸುತ್ತಿದೆ.

ಹೀಗಾಗಿ ಶಿಕ್ಷಣ ಸಂಸ್ಥೆಗಳು ಪೈಪೋಟಿಯ ಮೇಲೆ ಸಲಕರಣೆಗಳನ್ನು ತೋರಿಸಿ ಪಾಲಕರನ್ನು ತಮ್ಮತ್ತ ಆಕರ್ಷಿ ಸುತ್ತಿವೆ. ಅದಕ್ಕೆ ಪೂರಕವಾಗಿ ಡೊನೇಶನ್ ಸಹ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ವಂತಿಗೆ ಕೊಡಲು ಸಾಧ್ಯವಾಗದ ಬಡ ಮಕ್ಕಳು ಮಾತ್ರ ಈ ಅಸ್ತಿ ಪಂಜರದಂತಹ ಕಟ್ಟಡ ದಲ್ಲಿ ಆಡಿ, ನಲಿಯಬೇಕಿದೆ.

ತಾಲ್ಲೂಕಿನಲ್ಲಿ 200 ಅಂಗನವಾಡಿ ಕೇಂದ್ರಗಳು ಹಾಗೂ 65 ಮಿನಿ ಅಂಗನ ವಾಡಿ ಕೇಂದ್ರಗಳಿವೆ. 2010-11 ರ ಪ್ರಕಾರ 3.2 ಲಕ್ಷ ಜನ ಸಂಖ್ಯೆ ಹೊಂದಿ ರುವ ತಾಲ್ಲೂಕಿನಲ್ಲಿ 2,73,205 ಹಿಂದುಳಿದ ಹಾಗೂ ಅಲ್ಪ ಸಂಖ್ಯಾತ ರಿದ್ದಾರೆ. ಈ ಜನ ಸಂಖ್ಯೆಗೆ ಅನುಗುಣ ವಾಗಿ ತಾಲ್ಲೂಕಿನಲ್ಲಿ 310 ಇಲಾಖಾ ಕೇಂದ್ರಗಳಿರಬೇಕು. ಆದರೆ, 265 ಅಂಗನವಾಡಿ ಕೇಂದ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಆರ್ಥಿಕವಾಗಿ ಹಿಂದುಳಿದವರು ಸಹ ಖಾಸಗಿಯವರ ಶಿಸ್ತುಬದ್ದ ಕೇಂದ್ರಗಳಿಗೆ ಮಾರು ಹೋಗಿದ್ದಾರೆ.

ಹಾಜರಾತಿ ಕ್ಷೀಣ: ಅಂಗನವಾಡಿ ಕೇಂದ್ರಗಳ ಮಕ್ಕಳ ಹಾಜರಾತಿಯನ್ನು ಎರಡು ವಿಧಗಳಲ್ಲಿ ಪರಿಗಣಿಸಲಾಗು ತ್ತಿದ್ದು, 6 ತಿಂಗಳಿನಿಂದ 3 ವರ್ಷದ ವರೆಗೆ ಒಂದು ವರ್ಗದಲ್ಲಾದರೆ, 3 ವರ್ಷದಿಂದ 6 ವರ್ಷದ ವರೆಗೆ ಇನ್ನೊಂದು ವರ್ಗವಾಗಿರುತ್ತದೆ. 2008-09 ರಲ್ಲಿ 11,891 ಮಕ್ಕಳು 6 ತಿಂಗಳದಿಂದ 3 ವರ್ಷದವ ರಾಗಿದ್ದರು. 12,563 ಮಕ್ಕಳು 3 ರಿಂದ 6 ವರ್ಷದೊಳಗಿನವರು, 11,693 ಮಕ್ಕಳು 3 ರಿಂದ 6 ವರ್ಷದೊಳಗಿನ ವರಾಗಿದ್ದರು. 2010-11 ರಲ್ಲಿ 9,897 ಮಕ್ಕಳು 6 ತಿಂಗಳಿನಿಂದ 3 ವರ್ಷದ ವರೆಗೆ, 10,029 ಮಕ್ಕಳು 3 ರಿಂದ 6 ವರ್ಷದೊಳಗಿನ ಮಕ್ಕಳು ಎಲ್ಲ ಕೇಂದ್ರಗಳಲ್ಲಿದ್ದಾರೆ ಎಂದು ಇಲಾಖೆಯ ಅಂಕಿ ಅಂಶಗಳು ಹೇಳುತ್ತಿವೆ.

ಹೆಚ್ಚುತ್ತಿದೆ ಅಪೌಷ್ಟಿಕತೆ: ಪೂರಕ ಪೌಷ್ಟಿ ಆಹಾರ ಕಾರ್ಯಕ್ರಮದಡಿ ಯಲ್ಲಿ ತಾಲ್ಲೂಕಿನ 6 ತಿಂಗಳಿನಿಂದ 3 ವರ್ಷದ ವರೆಗಿನ 10,774 ಮಕ್ಕಳು ಹಾಗೂ 3 ವರ್ಷದಿಂದ 6 ವರ್ಷದ ವರೆಗಿನ 9,440 ಒಟ್ಟು 20.214 ಮಕ್ಕಳು ಪೌಷ್ಟಿಕ ಆಹಾರ ಪಡೆದು ಕೊಳ್ಳುತ್ತಿದ್ದಾರೆ. ಇದರಲ್ಲಿ 435 ಮಕ್ಕಳು ಅಪೌಷ್ಟ್ಠಿಕತೆಯಿಂದ ಬಳಲು ತ್ತಿದ್ದಾರೆ. ಮಕ್ಕಳ ಅಪೌಷ್ಠಿಯತೆ ಕಡಿಮೆ ಗೊಳಿಸಲು ವಾರದಲ್ಲಿ ನಾಲ್ಕು ದಿನ ತತ್ತಿ (ಮೊಟ್ಟೆ) ಎರಡು ದಿನ ನಂದಿನಿ ಹಾಲು ಕೊಡುವ ಯೋಜನೆ ಜಾರಿಗೆ ಬಂದಿದ್ದರೂ ತಾಲ್ಲೂಕಿನ ಮಕ್ಕಳ ಪಾಲಿಗೆ ಮೊಟ್ಟೆ ಮರೀಚಿಕೆಯಾಗಿಯೇ ಉಳಿದಿದೆ ಎನ್ನುವ ಕೊಗಿಗೆ ಪರಿಹಾರ ಮಾತ್ರ ಸಿಕ್ಕಿಲ್ಲ.

ಸಿಬ್ಬಂದಿ ಕೊರತೆ: ಸ್ವಂತ ಕಟ್ಟಡ ವಿಲ್ಲದೆ ಸೊರಗುತ್ತಿರುವ ಅಂಗನವಾಡಿ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆಯೂ ಇದೆ. ತಾಲ್ಲೂಕಿನಲ್ಲಿ 17 ಕಾರ್ಯ ಕರ್ತೆಯರು 12 ಸಹಾಯಕಿಯರ ಹುದ್ದೆಗಳು ಖಾಲಿ ಇವೆ. ಮಕ್ಕಳನ್ನು ಶಾಲೆಗೆ ಆಕರ್ಷಿಸುವಲ್ಲಿ ವಾತಾವರಣ ಬಹಳ ಮುಖ್ಯ. ಆದರೆ, ತಾಲ್ಲೂಕಿನಲ್ಲಿ 105 ಕೇಂದ್ರಗಳ ಚಿತ್ರಣ ಅದಕ್ಕೆ ವಿರುದ್ದವಾಗಿದೆ.

ದೇವಸ್ಥಾನದಲ್ಲಿ ನಡೆಯುವ ಕೇಂದ್ರಗಳ ಮಕ್ಕಳಿಗೆ ಅಲ್ಲಿಗೆ ಬರುವ ಭಕ್ತರು ಗದ್ದಲ, ಗಂಟೆಯ ಸಪ್ಪಳ ಮುಗ್ದ ಮಕ್ಕಳಿಗೆ ಕಿರಿಕಿರಿಯ ನ್ನುಂಟು ಮಾಡುತ್ತಿದ್ದರೆ ಇನ್ನೊಂದೆಡೆ ಆಟದ ಮೈದಾನವೇ ಇಲ್ಲದೇ ಕುಣಿದು ಕುಪ್ಪಳಿಸಬೇಕಾದ ಚಿಣ್ಣರ ಬಾಲ್ಯ ಕಮರಿ ಹೋಗುತ್ತಿದೆ.

ಮಕ್ಕಳಿಗೆ ಏನೇನು ಕೊಡ್ತಾರೆ: ಸೋಮವಾರ ಬೆಳಗ್ಗೆ ರವಾ ಲಾಡು, ಮಧ್ಯಾಹ್ನ ಅನ್ನಸಾಂಬಾರು. ಮಂಗಳ ವಾರ ಬೆಳಗ್ಗೆ ಹೆಸರು ಕಾಳು (ಮೊಳಕೆ), ಮಧ್ಯಾಹ್ನ ಚಿತ್ರಾನ್ನ. ಬುಧವಾರ ಬೆಳಿಗ್ಗೆ ಗೋಧಿಪಾಯಸಾ, ಮಧ್ಯಾಹ್ನ ಬಿಸಿಬೇಳೆ ಬಾತ್. ಗುರುವಾರ ಬೆಳಗ್ಗೆ ರವಾ ಲಾಡು, ಮಧ್ಯಾಹ್ನ ಚಿತ್ರಾನ್ನ. ಶುಕ್ರವಾರ ಬೆಳಗ್ಗೆ ಹೆಸರು ಕಾಳು (ಮೊಳಕೆ), ಮಧ್ಯಾಹ್ನ ಅನ್ನ ಸಾಂಬಾರು. ಶನಿವಾರ ಬೆಳಗ್ಗೆ ಅವಲಕ್ಕಿ, ಮಧ್ಯಾಹ್ನ ಕೇಸರಿ ಬಾತ್ ನೀಡಲಾಗುತ್ತಿದೆ.

ನಿವೇಶನದ ಕೊರತೆ: ಆಯಾ ಗ್ರಾ.ಪಂ ಗಳು ಕೇಂದ್ರಗಳ ನಿರ್ಮಾಣಕ್ಕೆ ಉಚಿತ ನಿವೇಶನ ನೀಡಲು ಹಿಂದೇಟು ಹಾಕುತ್ತಿವೆ. ಹೀಗಾಗಿ ಸ್ವಂತ ಕಟ್ಟಡ ಗಳನ್ನು ಹೊಂದಲು ಸಾಧ್ಯವಾಗಿಲ್ಲ. ಆದರೆ, ತಾಲ್ಲೂಕಿನ 43 ಗ್ರಾ.ಪಂ ಗಳು ನಿವೇಶನ ನೀಡಿದ್ದು, ಶಾಸಕರು ಹಾಗೂ ಸಂಸದರ ಅನುದಾನಡಿಯಲ್ಲಿ ಅಂಗನ ವಾಡಿ ಕಟ್ಟಡಗಳ ನಿರ್ಮಾಣಕ್ಕೆ ತಾ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಳಿಗೆ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾ ಧಿಕಾರಿ ಕೆಂಪಹನುಮಯ್ಯ `ಪ್ರಜಾ ವಾಣಿ~ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT