ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಾಲಯ ಸರ್ಕಾರದ ವಶಕ್ಕೆ

Last Updated 4 ಜನವರಿ 2014, 19:49 IST
ಅಕ್ಷರ ಗಾತ್ರ

ಬೆಂಗಳೂರು: ಜಯನಗರ ನಾಲ್ಕನೇ ಹಂತ­ದಲ್ಲಿ ವಿನಾಯಕ ಸೇವಾ ಸಮಿತಿ ನಿರ್ವಹಿಸುತ್ತಿದ್ದ ವಿನಾಯಕ ದೇವಾ­ಲ­ಯವನ್ನು ಮುಜರಾಯಿ ಇಲಾಖೆಯು ಶನಿವಾರ ವಶಕ್ಕೆ ಪಡೆದಿದೆ.

ಸೇವಾ ಸಮಿತಿ ಸದಸ್ಯರು ದೇವಾ­ಲಯಕ್ಕೆ ಬರುವ ಭಕ್ತರೊಂದಿಗೆ ಸರಿ­ಯಾಗಿ ವರ್ತಿಸುತ್ತಿಲ್ಲ. ಅಲ್ಲದೆ, ದೇವಾ­ಲಯದ ನಿರ್ವಹಣೆಯೂ ಸಮರ್ಪ­ಕವಾಗಿ ಆಗುತ್ತಿಲ್ಲ ಎಂದು ಸ್ಥಳೀಯ ಭಕ್ತರು ಮುಜರಾಯಿ ಇಲಾಖೆಗೆ ಕೆಲ ತಿಂಗಳ ಹಿಂದೆ ದೂರು ನೀಡಿದ್ದರು.

ಈ ದೂರಿನ ಆಧಾರದ ಮೇಲೆ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರು ಇತ್ತೀಚೆಗೆ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ದೇವಾಲಯದ ಹಣಕಾಸಿನ ಲೆಕ್ಕಪತ್ರ, ಚಿನ್ನಾಭರಣ ಮತ್ತಿತರ ವಸ್ತುಗಳ ಸಮ­ರ್ಪಕ ನಿರ್ವಹಣೆಯಲ್ಲಿ ಸೇವಾ ಸಮಿತಿ ವಿಫಲವಾಗಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿತ್ತು.

ಸೇವಾ ಸಮಿತಿಯ ಮೇಲಿನ ಆರೋಪ­ಗಳು ಸತ್ಯವಾಗಿದ್ದು, ದೇವಾ­ಲ­ಯವನ್ನು ಮುಜರಾಯಿ ಇಲಾಖೆಯ ವಶಕ್ಕೆ ಪಡೆಯಬೇಕೆಂದು ಸಹಾಯಕ ಆಯುಕ್ತರು ಇಲಾಖೆಯ ಅಧೀನ ಕಾರ್ಯದರ್ಶಿಯವರಿಗೆ ವರದಿ ಸಲ್ಲಿಸಿದ್ದರು. ಈ ವರದಿಯನ್ನು ಆಧಾರಿಸಿ ಇಲಾಖೆಯ ಅಧೀನ ಕಾರ್ಯದರ್ಶಿಯವರು ಜ.2ರಂದು ಆದೇಶ ಹೊರಡಿಸಿ, ದೇವಾಲಯವನ್ನು ಇಲಾಖೆಯ ವಶಕ್ಕೆ ಪಡೆಯಲು ನಿರ್ದೇಶನ ನೀಡಿದ್ದರು.

ಆ ಆದೇಶದಂತೆ ನಗರ ವಿಶೇಷ ಜಿಲ್ಲಾಧಿಕಾರಿ ಶನಿವಾರ ದೇವಾ­ಲ­ಯವನ್ನು ಸರ್ಕಾರದ ವಶಕ್ಕೆ ಪಡೆದಿ­ದ್ದಾರೆ. ಸರ್ಕಾರದ ಈ ಕ್ರಮಕ್ಕೆ ಸ್ಥಳೀಯ ಭಕ್ತರು ಮುಜರಾಯಿ ಇಲಾಖೆ ಹಾಗೂ ವಿಶೇಷ ಜಿಲ್ಲಾಧಿ­ಕಾರಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT