ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಾಲಯಕ್ಕೆ ಅನುಮತಿ ನಕಾರ

Last Updated 14 ಸೆಪ್ಟೆಂಬರ್ 2011, 8:35 IST
ಅಕ್ಷರ ಗಾತ್ರ

ಅರಸೀಕೆರೆ: ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ತಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ತಾಲ್ಲೂಕಿನ ಕಣಕಟ್ಟೆ ಹೋಬಳಿ ಕಾಮಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಪಡುವನಹಳ್ಳಿ ಗೊಲ್ಲರಹಟ್ಟಿ ನಿವಾಸಿಗಳ ಒಂದು ಗುಂಪು ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳನ್ನು ಆಗ್ರಹಪಡಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಡುವನಹಳ್ಳಿ ಗೊಲ್ಲರಹಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ಸಿದ್ದಬಸಪ್ಪ, ಅಮ್ಮನಹಟ್ಟಿ ಎ.ಎಂ. ರತ್ನಮ್ಮ ಹಾಗೂ ಬಂಡಿಬಸಪ್ಪ ಅವರು ಗೊಲ್ಲರಹಟ್ಟಿಯಲ್ಲಿ 75 ಕುಟುಂಬಗಳಿದ್ದು ಎರಡು ಗುಂಪುಗಳಿವೆ. ಒಂದು ಗುಂಪು ಹಳೆಯ ವೈಷಮ್ಯದಿಂದ ಕ್ಷುಲ್ಲಕ ಕಾರಣಗಳಿಂದ ಮತ್ತೊಂದು ಗುಂಪಿನ ಮೇಲೆ ಹಲ್ಲೆ ಮತ್ತು ದೌರ್ಜನ್ಯ ನಡೆಸುತ್ತಿದೆ. ಈ ಬಗ್ಗೆ ಹಲವಾರು ಬಾರಿ ಪೊಲೀಸರಿಗೆ ದೂರು ನೀಡಿದರೂ ತಮಗೆ ಇದುವರೆವಿಗೂ ನ್ಯಾಯ ಸಿಕ್ಕಿಲ್ಲ ಎಂದು ದೂರಿದರು.

ದೇವಾಲಯ ಪ್ರವೇಶಿಸದಂತೆ ನಿಷೇಧಿಸುವ ಈ ಗುಂಪು ಪೂಜಾರಿಗೆ ದೇವರ ಪೂಜೆ ಮಾಡದಂತೆ ಕಳೆದ 6ತಿಂಗಳಿನಿಂದ ದೇವಾಲಯದ ಬಾಗಿಲಿಗೆ ಬೀಗ ಹಾಕಿಸಿದೆ. ಅಲ್ಲದೇ ಪದೇ ಪದೇ ಇನ್ನೊಂದು ಗುಂಪಿನ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದೆ ಎಂದು ಅವರು ಆರೋಪಿಸಿದರು.

ಸೆ. 3ರಂದು ಗ್ರಾಮದಲ್ಲಿ ತಿಪ್ಪೆ ಗುಂಡಿ ಹಾಕಿದ್ದಾರೆ ಎಂಬ ನೆಪವೊಡ್ಡಿ ತಾಲ್ಲೂಕಿನ ಅಮ್ಮನಹಟ್ಟಿ ಮಾಳಪ್ಪ ಎಂಬುವರ ಪ್ರಚೋದನೆಯಿಂದ ಪಡುವನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಬೂರಿ ಚಿಕ್ಕಣ್ಣ ಎಂಬುವರ ಮಕ್ಕಳಾದ ಸಂತೋಷ ಹಾಗೂ ಮಲ್ಲಿಕಾರ್ಜುನ ಎಂಬುವರು ಗುಂಪು ಕಟ್ಟಿಕೊಂಡು ಬಂಡಿ ಬಸಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಸಿದ್ದಬಸಪ್ಪ ಹಾಗೂ ಸುಶೀಲಮ್ಮ ಅವರ ತಲೆಗೆ ಮಾರಾಕಸ್ತ್ರಗಳಿಂದ ಮಾರಣಾಂತಿಕ ಹೊಡೆದಿದ್ದು, ಇಬ್ಬರು ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ರಿಂದ ಈಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.

ಈ ಘಟನೆ ಬಗ್ಗೆ ಮಾನವ ಹಕ್ಕುಗಳ ಆಯೋಗ ಮತ್ತು ಪೊಲೀಸರಿಗೆ ದೂರು ನೀಡಿದ್ದರೂ ಸಹ ಪ್ರಭಾವಿ ವ್ಯಕ್ತಿಗಳ ಒತ್ತಡದಿಂದ ಹಲ್ಲೆ ನಡೆಸಿದವರನ್ನು ಪೊಲೀಸರು ಬಂಧಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು. ಬಂಡಿ ಬಸಪ್ಪ, ಕರಡಿ ಚಿತ್ತಯ್ಯ, ಶಿವಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT