ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡರು ಕಣ್ಣೀರು ಸುರಿಸಬೇಕಿಲ್ಲ

Last Updated 19 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ದೇಶದ ಪರಿಸ್ಥಿತಿ ಕಂಡು ಮಾಜಿ ಪ್ರಧಾನಿ ದೇವೇಗೌಡರು ಮೊನ್ನೆ ಕಣ್ಣೀರು ಸುರಿಸಿದರು. ಅವರು ಕಣ್ಣೀರು ಸುರಿಸುವುದು ಬೇಕಿಲ್ಲ.

ಅವರ ಕುಟುಂಬದ ಸದಸ್ಯರು ರಾಜಕೀಯದಿಂದ ಹೊರಬರಲಿ. ಅವರ ಇಬ್ಬರು ಪುತ್ರರು, ಒಬ್ಬ ಸೊಸೆ ಸಕ್ರಿಯ ರಾಜಕಾರಣಿಗಳು; ಮೇಲಾಗಿ ಗೌಡರೇ ಇನ್ನೂ ಸಕ್ರಿಯರು. ರಾಜಕೀಯವನ್ನು ಅವರು ಹಾಗೂ ಅವರ ಕುಟುಂಬ ಗುತ್ತಿಗೆ ಹಿಡಿದಿದ್ದಾರೆಯೇ?

ಏಳೆಂಟು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಉದ್ಯಮಿ ಆರ್.ಎನ್. ಶೆಟ್ಟಿಯವರು ಜೆಡಿಎಸ್ ವತಿಯಿಂದ ಸಭೆ ಕರೆದಿದ್ದರು. ತರುಣರು ರಾಜಕೀಯಕ್ಕೆ ಬರಬೇಕು, ರಾಜ್ಯದ ಸೂತ್ರ ಹಿಡಿಯಬೇಕೆಂದು ಸಭೆಯಲ್ಲಿ ದೇವೇಗೌಡರು ಸಲಹೆ ನೀಡಿದ್ದರು. ಆಗ ಹೇಳಿದೆ- ನೀವು ಬಿಟ್ಟುಕೊಡಿ. ತರುಣರಿಗೆ ಅವಕಾಶ ಆಗುತ್ತದೆ ಎಂದು. ದೇವೇಗೌಡರು ಇನ್ನೂ ನಿವೃತ್ತಿಯಾಗಿಲ್ಲ. ಹೀಗಾಗಿ ಅವರು ದೇಶದ ಪರಿಸ್ಥಿತಿ ಕಂಡು ಕಣ್ಣೀರು ಸುರಿಸಬೇಕಾದ ಅಗತ್ಯವಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT