ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಕಂಡ ಅಪರೂಪದ ಗಾಯಕ

Last Updated 25 ಜನವರಿ 2011, 10:15 IST
ಅಕ್ಷರ ಗಾತ್ರ

ಶಿವಮೊಗ್ಗ: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ದಿಗ್ಗಜ ಭಾರತ ರತ್ನ ಪಂ. ಭೀಮಸೇನ ಜೋಷಿ ಅವರ ನಿಧನಕ್ಕೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ಪಂ. ಜೋಷಿ ಅವರ ನಿಧನದಿಂದ ಸಂಗೀತ ಪ್ರೇಮಿಗಳಿಗೆ ಆಘಾತವಾಗಿದೆ. ಗಾನ ಲೋಕ ಒಬ್ಬ ಅಪ್ರತಿಮ ಗಾಯಕನನ್ನು ಕಳೆದುಕೊಂಡಿದೆ. ಜೋಷಿ ಅವರ ಅಗಲಿಕೆಯಿಂದ ಅವರ ಕುಟುಂಬಕ್ಕೆ ಆದ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ರಾಜ್ಯಸಭೆ ಸದಸ್ಯ ಆಯನೂರು ಮಂಜುನಾಥ, ಸಂಸದ ಬಿ.ವೈ. ರಾಘವೇಂದ್ರ ಶೋಕ ವ್ಯಕ್ತಪಡಿಸಿದ್ದಾರೆ. 

ಸಂತಾಪ
ಭೀಮಸೇನ ಜೋಷಿ ಅವರ ನಿಧನಕ್ಕೆ ಸಪ್ತಸ್ವರ ಸಂಗೀತ ಸಭಾ ತೀವ್ರ ಸಂತಾಪ ಸೂಚಿಸಿದೆ. ಕಿರಾಣಾ ಘರಾಣದ ದಿಗ್ಗಜ ಭೀಮಸೇನ ಜೋಷಿ ಅವರ ನಿಧನದಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.  ಜೋಷಿ ಅವರ ನಿಧನಕ್ಕೆ ಸಭಾದ ಸಂಚಾಲಕ ಅರುಣ ಹಂಪಿಹೊಳಿ, ಸಂಘಟಕ ಆರ್. ಅಚ್ಯುತ್‌ರಾವ್, ನಿರ್ದೇಶಕರಾದ ಡಿ.ವೈ. ಪಾಟೀಲ, ಪರಮೇಶ್ವರಪ್ಪ, ವೇಣುಗೋಪಾಲ್, ಶಿವಕುಮಾರ್ ಮಹಾಂತ, ಡಿ.ಬಿ. ಮುಗಳಿ ಶೋಕ ವ್ಯಕ್ತಪಡಿಸಿದ್ದಾರೆ.

ಶ್ರದ್ಧಾಂಜಲಿ ಸಭೆ
ಸಾಗರ ವರದಿ: ಈ ದೇಶ ಕಂಡ ಅಪರೂಪದ ಗಾಯಕರಲ್ಲಿ ಭೀಮ್‌ಸೇನ್ ಜೋಷಿ ಕೂಡ ಒಬ್ಬರು ಎಂದು ಸದ್ಗುರು ಹಿಂದೂಸ್ತಾನಿ ವಿದ್ಯಾಲಯದ ಶಿಕ್ಷಕಿ ವಸುಧಾ ಶರ್ಮ ಹೇಳಿದರು. ವಿವಿಧ ಸಂಘಟನೆಗಳು ಅಗಲಿದ ಗಾಯಕ ಭೀಮ್‌ಸೇನ್ ಜೋಷಿ ಅವರಿಗೆ ಸೋಮವಾರ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಅಪೂರ್ವ ಕಂಠಸಿರಿಯ ಜೋಷಿ ಅವರಿಗೆ ಶೋತೃಗಳನ್ನು ಸೆರೆ ಹಿಡಿಯುವ ಅದ್ಭುತ ಶಕ್ತಿ ಇತ್ತು ಎಂದರು.

ಜಾನಪದ ಕಲಾವಿದ ಕಾಗೋಡು ಅಣ್ಣಪ್ಪ ಮಾತನಾಡಿ, ದೇಶ ವಿದೇಶಗಳಲ್ಲಿ ಹೆಸರು ಮಾಡಿದ್ದ ಭೀಮಸೇನ ಜೋಷಿ ಸಂಗೀತ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅನನ್ಯವಾದದ್ದು ಎಂದು ಹೇಳಿದರು. ಭೀಮಸೇನ ಜೋಷಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು. ಮಡಿವಾಳಯ್ಯ ಸಾಲಿ, ಡಿ. ದಿನೇಶ್, ಅನ್ವರ್, ಟೋನಿ ಡಿಸೋಜ, ಮುರುಳಿ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT